/newsfirstlive-kannada/media/post_attachments/wp-content/uploads/2025/01/ROHIT.jpg)
ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ನೀಡಿದ್ದೇಕೆ? 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದಲೇ ಶುಭ್​ಮಮ್​ಗೆ ಪಟ್ಟ ಕಟ್ಟಿದ್ರಾ? ಇಲ್ಲ ಸೈಡ್​ಲೈನ್ ಮಾಡ್ತಿದೆಯಾ? ಇಂಥ ನೂರಾರು ಪ್ರಶ್ನೆಗಳು ಟಾಕ್ ಆಫ್ ದಿ ಟೌನ್. ಆದ್ರೆ ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದರ ಹಿಂದೆ ಡ್ರೆಸ್ಸಿಂಗ್ ರೂಮ್ ಸೀಕ್ರೆಟ್ ಇದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ಕೆಲ ದಿನಗಳಲ್ಲೇ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರಯಾಣ ಬೆಳಸಲಿದೆ. ಈ ಮಹತ್ವದ ಸರಣಿಯಲ್ಲಿ ಶುಭ್​ಮನ್ ಗಿಲ್​ಗೆ ನಾಯಕತ್ವ ನೀಡಿ, ರೋಹಿತ್ ಶರ್ಮಾ ಕೊಕ್ ನೀಡಿರುವ ಬಗೆಗಿನ ಚರ್ಚೆ ಮಾತ್ರ ನಿಂತಿಲ್ಲ.
ಹಿಟ್​ಮ್ಯಾನ್ ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವದಿಂದ ಕೈಬಿಡಲಾಗಿದೆ. ಭವಿಷ್ಯದ ದೃಷ್ಟಿಯಿಂದಲೇ ಶುಭ್​ಮನ್​ಗೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಶುಭ್​ಮನ್ ಗಿಲ್​​ಗೆ ನಾಯಕತ್ವದ ಜವಾಬ್ದಾರಿ ವಹಿಸಿದರ ಹಿಂದೆ ಕೇವಲ 2027ರ ಏಕದಿನ ವಿಶ್ವಕಪ್​ ಮಾತ್ರವೇ ಅಡಗಿಲ್ಲ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಸೀಕ್ರೆಟ್, ಡ್ರೆಸ್ಸಿಂಗ್ ರೂಮ್​ ಕಲ್ಚರ್​ ಅಡಗಿದೆ. ಇದೇ ಡ್ರೆಸ್ಸಿಂಗ್ ರೂಮ್ ಕಲ್ಚರ್ ರೋಹಿತ್ ಶರ್ಮಾರ ಏಕದಿನ ನಾಯಕತ್ವದಿಂದ ಕೊಕ್ ನೀಡುವಂತೆ ಮಾಡಿದೆ ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.
ರೋಹಿತ್ ಡ್ರೆಸ್ಸಿಂಗ್ ರೂಮ್ ವಾತಾವರಣ ಕೆಡಿಸ್ತಿದ್ರಾ?
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ... ಡ್ರೆಸ್ಸಿಂಗ್ ರೂಮ್​ನ ಲೀಡರ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಸದ್ಯ ನಾಯಕರಲ್ಲದಿದ್ದರೂ, ಬಹು ವರ್ಷಗಳಿಂದ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಹೇಳಿದ್ದೇ ವೇದ ವಾಕ್ಯ. ಹೇಳಿದ್ದೇ ಮಂತ್ರವಾಗಿತ್ತು. ಏಕದಿನ ಕ್ರಿಕೆಟ್​ಗೆ ಮಾತ್ರವೇ ನಾಯಕನಾಗಿದ್ದ ರೋಹಿತ್ ಶರ್ಮಾ, ಡ್ರೆಸ್ಸಿಂಗ್​ ರೂಮ್​ನಲ್ಲಿ ವಾತಾವರಣ ಕಡೆಸ್ತಾರೆ ಎಂಬ ಅನುಮಾನ ಕಾಡಿತ್ತು. ತಂಡದಲ್ಲಿ ತಮ್ಮದೇ ಆದ ತತ್ವ, ಸಿದ್ಧಾಂತಗಳನ್ನು ಆಟಗಾರರ ಮೇಲೆರುವ ಸಾಧ್ಯತೆ ಇರುತ್ತಿತ್ತು. ಇದು ಡ್ರೆಸ್ಸಿಂಗ್​ ರೂಮ್​​ನಲ್ಲಿ ಗುಂಪುಗಾರಿಕೆಗೂ ನಾಂದಿಯಾಡುತ್ತಿತ್ತು. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ನ್ಯೂಜಿಲೆಂಡ್ ಎದುರಿನ ಟೆಸ್ಟ್​ ಸರಣಿ.
ಈ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ, ಕ್ಲೀನ್​ಸ್ವೀಪ ಮುಖಭಂಗ ಅನುಭವಿಸಿತ್ತು. ಇದೇ ವೇಳೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಬಣರಾಜಕೀಯ ಶುರುವಾಯ್ತಾ ಎಂಬ ಅನುಮಾನ ಮೂಡಿತ್ತು. ಒಂದಿಲ್ಲೊಂದು ಲೀಕ್ಸ್​ ಹೊರ ಬೀಳುತ್ತಿತ್ತು. ರೋಹಿತ್ ಶರ್ಮಾ, ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯೂ ಇತ್ತು. ಇದೇ ಕಾರಣಕ್ಕೆ ಲೀಕ್ಸ್ ರಾಜ ಸರ್ಫರಾಜ್​ಗೆ ಗೇಟ್​ಪಾಸ್ ನೀಡಲಾಯ್ತು ಅನ್ನೋದು ಓಪನ್ ಸೀಕ್ರೆಟ್. ಇದೀಗ ಯುಗಾಂತ್ಯದಲ್ಲಿರುವ ರೋಹಿತ್, ಮತ್ತೆ ಡ್ರೆಸ್ಸಿಂಗ್ ರೂಮ್ ವಾತಾವರಣ ಹದಗೆಡಿಸೋ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಬಿಗ್ ಡಿಸಿಷನ್ ತೆಗೆದುಕೊಂಡ ಹಿಂದಿನ ಸೀಕ್ರೆಟ್​​..
ಗಂಭೀರ್​​ಗೆ ಏನ್ ಕಷ್ಟ..?
ಗೌತಮ್ ಗಂಭೀರ್​, ಹೆಡ್ ಕೋಚ್ ಆದ ನಂತರ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾದ್ದೇ ದರ್ಬಾರ್​ ನಡೀತಿತ್ತು. ನ್ಯೂಜಿಲೆಂಡ್ ಎದುರಿನ ಕ್ಲೀನ್ ಸ್ವೀಪ್ ಮುಖಭಂಗದ ತನಕ ರೋಹಿತ್ ನಿರ್ಧಾರಗಳೇ ಅಂತಿಮವಾಗಿತ್ತು. ಡ್ರೆಸ್ಸಿಂಗ್ ರೂಮ್​ನಲ್ಲಿ ಬಿಗಿ ಹಿಡಿತವನ್ನು ಹೊಂದಿದ್ದ ರೋಹಿತ್, ಆಕ್ಷರಶಃ ರೂಲರ್ ಆಗಿದ್ದರು. ಈ ಸೋಲಿನ ಬಳಿಕ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಹೆಡ್ ಕೋಚ್ ಗೌತಮ್ ಗಂಭೀರ್, ಹದಗೆಟ್ಟಿದ್ದ ಡ್ರೆಸ್ಸಿಂಗ್ ರೂಮ್​​ನ ಹತೋಟಿಗೆ ತಂದಿದ್ದಾರೆ. ಹೆಲ್ತಿ ಡ್ರೆಸ್ಸಿಂಗ್ ರೂಮ್​ ನಿರ್ಮಿಸಿದ್ದಾರೆ. ಆದ್ರೀಗ 7 ತಿಂಗಳ ಬಳಿಕ ತಂಡಕ್ಕೆ ಮರಳ್ತಿರುವ ರೋಹಿತ್, ಮತ್ತೆ ತಂಡದಲ್ಲಿ ನಾಯಕನಾಗಿದ್ರೆ, ಡ್ರೆಸ್ಸಿಂಗ್ ರೂಮ್ ವಾತವರಣವನ್ನೇ ಹದಗೆಡಿಸ್ತಾರೆ ಅನ್ನೋ ಭಯ ಇತ್ತು. ಏಕದಿನ ವಿಶ್ವಕಪ್ ದೃಷ್ಟಿಯಿಂದ ಡ್ರೆಸ್ಸಿಂಗ್ ರೂಮ್​​ ವಾತವಾರಣ ಕಾಯ್ದುಕೊಳ್ಳುವುದು ಸಹ ಬಿಸಿಸಿಐ ಮುಂದಿತ್ತು. ಇದೇ ಭಯವೇ ರೋಹಿತ್​​ಗೆ ಕೊಕ್ ನೀಡುವಂತೆ ಮಾಡ್ತು.
ನಾಯಕರಾಗಿ ರೋಹಿತ್ ಅವರಂತಹ ಆಟಗಾರನಿದ್ದಿದ್ದರೆ, ಡ್ರೆಸ್ಸಿಂಗ್ ರೂಮ್​​ನಲ್ಲಿ ತನ್ನ ತತ್ವ, ಸಿದ್ಧಾಂತಗಳನ್ನ ಆಟಗಾರರ ಮೇಲೆ ಹೇರುವ ಸಾಧ್ಯತೆ ಇತ್ತು. ರೋಹಿತ್ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದರಿಂದ, ಅದು ತಂಡದ ಸಂಸ್ಕೃತಿ ಕದಡಬಹುದಿತ್ತು. ಮೊದಲ 6 ತಿಂಗಳು ಗಂಭೀರ್ ಜವಾಬ್ದಾರಿಯಿಂದ ದೂರ ಉಳಿದಿದ್ದರು. ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ಸೋಲುಗಳು ಗಂಭೀರ್​ಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡಿತ್ತು. ಇತ್ತೀಚಿಗೆ ಎಚ್ಚರಿಕೆಯಿಂದ ನಿರ್ಮಿಸಲಾದ ಸಮತೋಲನ ಕಾಪಾಡುವ ದೃಷ್ಟಿಯೂ ಇದಾಗಿತ್ತು.
ಬಿಸಿಸಿಐ ಮೂಲಗಳು.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಡಿಕ್ಟೆಟರ್ ಅನ್ನೋ ಮಾತಿದೆ. ಇದು ಸಹಜವಾಗೇ ಡ್ರೆಸ್ಸಿಂಗ್ ರೂಮ್ ಹಾಗೂ ಆಟಗಾರರ ಮೇಲೂ ಪ್ರಭಾವ ಬೀರುತ್ತಿತ್ತು. ಹೀಗಾಗಿ ತಂಡದಲ್ಲಿರುವ ಆಟಗಾರರಿಗೆ ಸ್ಪಷ್ಟ ಸಂದೇಶ ನೀಡುವ ಬಯಕೆ ಹೊಂದಿದ್ದ ಬಿಸಿಸಿಐ, ಟೀಮ್ ಇಂಡಿಯಾದಲ್ಲಿ ಬದಲಾವಣೆ ಪರ್ವ ಶುರುವಾಗಿದೆ ಎಂಬ ಸಂದೇಶ ನೀಡಲು ಬಯಸಿತ್ತು. ಅದರ ಒಂದು ನಡೆಯೇ ರೋಹಿತ್​ ಶರ್ಮಾ ನಾಯಕತ್ವಕ್ಕೆ ಕೊಕ್ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ರೋಹಿತ್ ಶರ್ಮಾಗೆ ಕೊಕ್ ನೀಡಿರುವ ಟೀಮ್ ಮ್ಯಾನೇಜ್​ಮೆಂಟ್, ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ:ಜಡ್ಡು, ಶಮಿ ODI ಕರಿಯರ್​​ಗೆ ಕೊನೆ ಮೊಳೆ ಹೊಡೆದ ಬಿಸಿಸಿಐ..! ಯಾಕೆ ಹೀಗೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ