/newsfirstlive-kannada/media/media_files/2025/12/09/ashwini-gowda-9-2025-12-09-14-47-07.jpg)
ಅಶ್ವಿನಿ ಗೌಡ ಮತ್ತು ರಜತ್ ಕಿಶನ್ ಮಧ್ಯೆ ಭಾರೀ ಗಲಾಟೆ ಆಗಿದೆ. ಇಬ್ಬರ ಮಧ್ಯೆ ನಾಮಿನೇಷನ್ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ದೊಡ್ಡ ವಾಗ್ಯುದ್ಧವೇ ನಡೆದು ಹೋಗಿದೆ.
ಆಗಿದ್ದೇನು?
ವಿಲನ್ ಸಾಮ್ರಾಜ್ಯದಲ್ಲಿ ನಾಮಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ವಾರ ಮನೆಯಿಂದ ಆಚೆ ಕಳುಹಿಸಲು ಇಬ್ಬರು ಸ್ವರ್ಧಿಗಳನ್ನು ಸ್ವಿಮ್ಮಿಂಗ್ ಪೂಲ್​​ಗೆ ತಳ್ಳಬೇಕು. ಅಂತೆಯೇ ರಜತ್, ಅಶ್ವಿನಿ ಹೆಸರನ್ನು ತೆಗೆದುಕೊಂಡಿದ್ದಾರೆ.
ಅಶ್ವಿನಿ ಹೆಸರು ಸೂಚಿಸಿದ ರಜತ್, ಕಾರಣ ನೀಡಿದ್ದಾರೆ. ಧ್ರುವಂತ್ ಅವರು ಹಿಂದೆ ಟಿ-ಗಾಂಚಲಿ ಎಂದಾಗ ಸೈಲೆಂಟ್ ಆಗಿದ್ದರು. ಆದರೆ ರಘು ಸರ್ ಏನೋ ಹೇಳಿದಾಗ ನೀವು ಹಾಗೆಲ್ಲ ಹೇಳಬಾರದು ಎಂದು ಕೂಗಾಡಿದ್ರಿ. ಆಮೇಲೆ ಇವರ ಜೊತೆ ನಾವು ಫೈಟ್ ಕೂಡ ಆಡೋಕೆ ಆಗಲ್ಲ.
ಇದನ್ನೂ ಓದಿ: ಅಭಿಷೇಕ್ ಪ್ರಕಾರ ಟ್ರೋಫಿ ಗೆಲ್ಲೋದು ಯಾರು..? ಅಚ್ಚರಿ ಹೆಸರು ಪ್ರಸ್ತಾಪ
/filters:format(webp)/newsfirstlive-kannada/media/media_files/2025/12/09/ashwini-gowda-10-2025-12-09-14-47-21.jpg)
ಅದಕ್ಕೆ ಸಿಟ್ಟಿಗೆದ್ದ ಅಶ್ವಿನಿ, ನಿಮ್ಮಷ್ಟು ಟಾಲ್ರೆಟೆಡ್ ಭಾಷೆಯನ್ನು ಈ ಮನೆಯಲ್ಲಿ ಯಾರೂ ಬಳಸಿಲ್ಲ. ನೀವೇ ಹೇಳಿದ್ರಿ ಗಂಡಸರ ಜೊತೆ ಗುದ್ದಾಡ್ತೀವಿ ಅಂತಾ. ನೀವು ಗಂಡಸಲ್ವಾ? ಕೇಳಬೇಕಿತ್ತು ನೀವು ಎಂದು ಕಿರುಚಾಡಿದ್ದಾರೆ. ಆಗ ರಜತ್, ಹೊಡೆದಾಡಿದ್ರೂ ಗಂಡಸರ ಹತ್ತಿರ ಎನ್ನುತ್ತ ಅಶ್ವಿನಿಯನ್ನು ಜೋರಾಗಿ ನೀರಿಗೆ ತಳ್ಳಿದ್ದಾರೆ.
ನೀರಿನಿಂದ ಮೇಲೆಳುವ ಅಶ್ವಿನಿ ಕೈ ತೋರಿಸುತ್ತ.. ಏ ಥೂ.. ಕಚಡಾ ಎಂದು ಕೂಗಿದ್ದಾರೆ. ಅದಕ್ಕೆ ರಜತ್.. ಕಚಡಾ ಅಂತೆ ಕಚಡಾ.. ನೀನೇನು ನಂಗೆ ಹೇಳೋದು ಕಚಡಾ ಎಂದು ಕೌಂಟರ್ ಕೊಟ್ಟಿದ್ದಾರೆ. ಇವರಿಬ್ಬರ ವಾಗ್ಯುದ್ಧ ಇವತ್ತಿನ ಪ್ರೊಮೋದಲ್ಲಿ ಹೈಲೆಟ್ ಆಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
Admin: ಈ ವಿಡಿಯೋಗೆ ಕ್ಯಾಪ್ಷನ್ ಅಗತ್ಯ ಇಲ್ಲ!
— Colors Kannada (@ColorsKannada) December 9, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/Pxa4aiLmdz
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us