/newsfirstlive-kannada/media/media_files/2025/10/20/bigg-boss-14-2025-10-20-22-18-47.jpg)
ಕಿಚ್ಚನ ಎಪಿಸೋಡ್ ಮುಗಿದ ಬೆನ್ನಲ್ಲೇ, ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ಅಂಡ್​ ಗ್ಯಾಂಗ್​ನಿಂದ ರೌಂಡ್ ಟೇಬಲ್ ಮೀಟಿಂಗ್ ನಡೆದಿದೆ. ರಕ್ಷಿತಾ ವಿಚಾರದಲ್ಲಿ ಅಶ್ವಿನಿ ಹಾಗೂ ಜಾಹ್ನವಿ ನಡೆದುಕೊಂಡ ರೀತಿಗೆ ಕಿಚ್ಚ ಸುದೀಪ್ ಬುದ್ಧಿಮಾತು ಬೆನ್ನಲ್ಲೇ, ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಬಗ್ಗೆ ಚರ್ಚೆ ಆಗಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಾರ್ ಗಿಫ್ಟ್ ಕೊಟ್ಟ ಫಾರ್ಮಾ ಕಂಪನಿಯ ಮಾಲೀಕ !!: 51 ಉದ್ಯೋಗಿಗಳಿಗೆ ಲಕ್ಷುರಿ ಎಸ್‌ಯುವಿ ಕಾರ್ ಗಿಫ್ಟ್ !!
ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ನಡುವಿನ ಸಂಭಾಷಣೆಯಲ್ಲಿ ರಾಶಿಕಾ ಕೂಡ ಇದ್ದರು. ಮೂವರ ನಡುವೆ ನಡೆದ ಮಾತುಕತೆ ಹೀಗಿದೆ..
- ಅಶ್ವಿನಿ ಗೌಡ: ಏನು ಗೊತ್ತಾ ಜಾನು.. ನಾವು ದಡ್ಡರು..
- ಜಾಹ್ನವಿ: ನಾವು ಅವಳಿಗೆ ಒಳ್ಳೆಯದು ಮಾಡಿದ್ವಿ
- ಅಶ್ವಿನಿ ಗೌಡ: ಅವಳು ಅದೇ ಹೇಳಿದಳು. ಮೂರು ವರ್ಷದಿಂದ ನಾನು ಅದನ್ನೇ ಮಾಡುತ್ತಿದ್ದೇನೆ ಎಂದು. ಕಂಟೆಂಟ್ ಕ್ರಿಯೇಟರ್ ಎಂದು ಹೇಳಿಕೊಂಡಿದ್ದಾಳೆ. ಅವಳಿಗೆ ಗೊತ್ತಿದೆ. ಎಲ್ಲಿ ಏನು ಮಾಡಬೇಕು ಅಂತಾ. ಅದು ಅವಳಿಗೆ ಲಾಭ ಆಯ್ತು. ಆದರೆ ನಾವು ಅದಲ್ಲ. ಎಲ್ಲೋ ಒಬ್ಬರಿಗೆ ಹರ್ಟ್ ಆಗಿದೆ ಅಂತಾ ಹೇಳಿದಾಗ ಕ್ಷಮೆ ಕೇಳೋದ್ರಲ್ಲಿ ತಪ್ಪಿಲ್ಲ.
- ರಾಶಿಕಾ: ಕ್ಷಮೆ ಕೇಳಿದ ಮಾತ್ರಕ್ಕೆ ಚಿಕ್ಕೋರು ಆಗಲ್ಲ.
- ಜಾಹ್ನವಿ: ಅಶ್ವಿನಿ ಮೇಡಂ.. ಗಿಲ್ಲಿ ಯಾರ ಬಗ್ಗೆಯೂ ಸ್ಟ್ಯಾಂಡ್ ತೆಗೆದುಕೊಂಡಿಲ್ಲ. ಸ್ಪಂದನಾ, ಧ್ರುವಂತ್ ಗಲಾಟೆಯಲ್ಲೂ ಸ್ಟ್ಯಾಂಡ್ ತೆಗೆದುಕೊಂಡಿಲ್ಲ. ಸತೀಶ್, ಚಂದ್ರಪ್ರಭದು ಆದಾಗಲೂ ಅಷ್ಟೇ. ರಕ್ಷಿತಾ ವಿಚಾರದಲ್ಲಿ ಮಾತ್ರ ಹಾಗೆ ಮಾಡಿದರು. ಎಲ್ಲೂ ಸ್ಟ್ಯಾಂಡ್ ತೆಗೆದುಕೊಳ್ಳದೇ ಇರೋನು ಇಲ್ಲಿ ಯಾಕೆ ತೆಗೆದುಕೊಂಡ. ನಮ್ಮಿಂದಾಗಿಯೇ ಕಿಚ್ಚನ ಚಪ್ಪಾಳೆ ಸಿಕ್ಕಿರೋದು.
- ಸುಧಿ: ಅದನ್ನು ತಮಾಷೆಯಾಗಿ ತೆಗೆದುಕೊಂಡು ಹೋಗಿಬಿಡಿ. ಸಿರೀಯಸ್ ಆಗಿಯೇ ತೆಗೆದುಕೊಂಡು ಹೋಗಬೇಡಿ..
ಇದನ್ನೂ ಓದಿ: ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ