BBK12: ಗಿಲ್ಲಿ ಕಾವ್ಯ ಸ್ನೇಹ ಕಟ್‌ ಆಗೋಯ್ತಾ?

ಬಿಗ್‌ಬಾಸ್‌ ಆರಂಭವಾದಾಗಿನಿಂದಲೂ ಗಿಲ್ಲಿ- ಕಾವ್ಯರ ಸ್ನೇಹ ಸುದ್ದಿಯಾಗುತ್ತಲೇ ಇದೆ. ಗಿಲ್ಲಿ ಕಾವು ಕಾವು ಅಂದುಕೊಂಡು ಅಡ್ವಾನ್‌ಟೇಜ್‌ ತಗೋತಾನೆ ಅಂತ ದೂರಿದ್ರೆ, ಕಾವ್ಯ ಗಿಲ್ಲಿಯ ಕಾರಣದಿಂದ ಮಾತ್ರವೇ ಶೊನಲ್ಲಿ ಉಳಿದುಕೊಂಡಿದ್ದಾಳೆ ಅನ್ನೋ ಆರೋಪವಿದೆ. ಈ ಸಮಸ್ಯೆಗೆ ಕಂಡುಕೊಂಡ ಪರಿಹಾರ ಏನು?

author-image
Ganesh Kerekuli
Kavya and Gilli Nata
Advertisment

ಬಿಗ್‌ಬಾಸ್‌ ಆರಂಭವಾದಾಗಿನಿಂದಲೂ ಗಿಲ್ಲಿ- ಕಾವ್ಯರ ಸ್ನೇಹ ಸುದ್ದಿಯಾಗುತ್ತಲೇ ಇದೆ. ಗಿಲ್ಲಿ ಕಾವು ಕಾವು ಅಂದುಕೊಂಡು ಅಡ್ವಾನ್‌ಟೇಜ್‌ ತಗೋತಾನೆ ಅಂತ ದೂರಿದ್ರೆ, ಕಾವ್ಯ ಗಿಲ್ಲಿಯ ಕಾರಣದಿಂದ ಮಾತ್ರವೇ ಶೊನಲ್ಲಿ ಉಳಿದುಕೊಂಡಿದ್ದಾಳೆ ಅನ್ನೋ ಆರೋಪವಿದೆ. ಈ ಸಮಸ್ಯೆಗೆ ಕಂಡುಕೊಂಡ ಪರಿಹಾರ ಏನು? 

ಪ್ರತಿ ಬಾರಿ ನಾಮಿನೇಷನ್‌ ಅಥವಾ ಬೇರೆ ವಿಚಾರಗಳು ಚರ್ಚೆಗೆ ಬಂದಾಗ ಗಿಲ್ಲಿ-ಕಾವ್ಯ ನಡುವಿನ ಸ್ನೇಹ ಭಾರಿ ಸುದ್ದಿಯಾಗುತ್ತದೆ. ಅದರಲ್ಲೂ ಕಳೆದವಾರ ಚಂದ್ರಪ್ರಭ ತನ್ನ ತಂಗಿ ಕಾವ್ಯ ಲವ್‌ ಅನ್ನೋ ಹೆಸರಿನಲ್ಲಿ ದಾರಿ ತಪ್ಪುತ್ತಿದ್ದಾರಾ ಅನ್ನೋ ಅನುಮಾನವಿದೆ ಅಂದಿದ್ದು, ಕಾವ್ಯಗೂ ನೋವುಂಟು ಮಾಡಿತ್ತು. ಹೀಗಾಗೆ ಅವರೊಂದು ನಿರ್ಧಾರಕ್ಕೆ ಬಂದಿದ್ದರು. ಏನದು? 

ಇದನ್ನೂ ಓದಿ: ಸ್ನೇಹದ ವಿಚಾರಕ್ಕೆ ಫಸ್ಟ್ ಟೈಮ್ ಎಮೋಷನಲ್ ಆದ ಗಿಲ್ಲಿ, ಕಾವ್ಯ..! VIDEO

ಕಾವ್ಯ ಈ ವಾರದ ಆರಂಭದಲ್ಲಿಯೇ ಗಿಲ್ಲಿಯಲ್ಲಿ, ಎಲ್ಲರೂ ಕಾವ್ಯನಿಂದ ಗಿಲ್ಲಿ, ಗಿಲ್ಲಿಯಿಂದ ಕಾವ್ಯ ಅಂತ ಹೇಳೋದನ್ನ ಕೇಳಿಕೊಂಡು ಕೂರಕ್ಕಾಗಲ್ಲ. ಹಾಗಾಗಿ ಇನ್ಮೇಲೆ ಗಿಲ್ಲಿ ತಮ್ಮನ್ನು ಯಾವುದೇ ಕಾರಣಕ್ಕೂ ರೇಗಿಸಬಾರದು ಎಂದಿದ್ದರು. ಇದಕ್ಕೆ ಗಿಲ್ಲಿ ರೇಗಿಸಬಾರದು ಅನ್ನೋದಾದ್ರೆ ನಾನು ಮಾತೇ ಆಡಲ್ಲ ಎಂದು ಅದನ್ನೇ ಪಾಲಿಸುತ್ತಿದ್ದಾರೆ ಕೂಡ. ಈ ವಾರ ಆರಂಭವಾದಾಗಿನಿಂದಲೂ ಕಾವ್ಯ ಜೊತೆ ಮಾತುಕತೆ ಆಡುತ್ತಿಲ್ಲ. 

ತಮ್ಮ ಸ್ನೇಹವನ್ನು ಕಳೆದುಕೊಂಡ ಕಾವ್ಯ ದುಃಖಿತರಾಗಿದ್ದು, ಈ ಬಗ್ಗೆ ಗಿಲ್ಲಿ ಜೊತೆಗೆ ಮಾತಾಡೋಕೆ ಮುಂದಾಗಿದ್ದಾರೆ. ಮಾತೇ ಆಡ್ಬೀಡ ಅಂದಿಲ್ಲ ರೇಗಿಸ್ಬೇಡ ಅಂತ ಮಾತ್ರ ಹೇಳಿದ್ದು ಅಂದ್ರೆ ಗಿಲ್ಲಿ ಮಾತ್ರ ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದು, ಮಾತಾಡ್ಬೇಕು ಅನ್ನೋದಾದ್ರೆ ರೇಗಿಸ್ತೀನಿ ಕೂಡ. ರೇಗಿಸಬಾರದು ಅನ್ನೋದಾದ್ರೆ ಮಾತೇ ಆಡಲ್ಲ ಅಂದಿದ್ದಾರೆ. ಇದಕ್ಕೆ ಕಾವ್ಯ ಹಾಗಾದ್ರೆ ನಾನು ಹೀಗೇ ಮೂರನೆಯವಳಾಗಿಯೇ ಇದ್ದು ಬಿಡ್ತೀನಿ ಎಂದು ಎದ್ದೇ ಹೋಗಿದ್ದಾರೆ. 

ಗಿಲ್ಲಿ ಕಾವ್ಯ ನಡುವಿದ್ದ ಸ್ನೇಹ ಇಲ್ಲಿಗೇ ಅಂತ್ಯವಾಗುತ್ತಾ? ಅಥವಾ ಕಾವ್ಯ ಹಾಗೂ ಗಿಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇದನ್ನ ಬಗೆಹರಿಸ್ತಾರಾ ನೋಡಿ ಬಿಗ್‌ಬಾಸ್‌ನಲ್ಲಿ. 

ಇದನ್ನೂ ಓದಿ: ಮೇಘನಾ ಜಾಲಿ ಜಾಲಿ.. ಜೋಡಿ ಹಕ್ಕಿಗಳು ಹನಿಮೂನ್​​ಗೆ ಹೋಗಿದ್ದೆಲ್ಲಿಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Gilli Nata Bigg boss bigg boss kavya
Advertisment