/newsfirstlive-kannada/media/media_files/2025/11/28/gilli-nata-7-2025-11-28-12-05-55.jpg)
ಬಿಗ್​ ಬಾಸ್​ ಮನೆಗೆ ಅತಿಥಿಗಳಾಗಿ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಮೋಕ್ಷಿತಾ, ರಜತ್ ಕಿಶನ್ ಮತ್ತು ಉಗ್ರಂ ಮಂಜು ಹೋಗಿದ್ದರು. ಮಂಜು ಮತ್ತು ರಜತ್ ಗಿಲ್ಲಿ ಅವರನ್ನು ತುಂಬಾನೇ ಗೋಳು ಕೊಟ್ಟರು.
ಅದಕ್ಕೆ ಗಿಲ್ಲಿ ಕೂಡ ತಮ್ಮ ಚೌಕಟ್ಟಿನೊಳಗೆ ಕೌಂಟರ್​ ಕೊಟ್ಟಿದ್ದು ಬಿಗ್​ ಬಾಸ್​ ವೀಕ್ಷಕರ ಚರ್ಚಾ ವಿಷಯ. ಮಂಜು ಮತ್ತು ರಜತ್ ಗಿಲ್ಲಿಯನ್ನು ಗೇಲಿ ಮಾಡಲು ಹೋಗಿ ತಾವೇ ಗೇಲಿಗೊಳಗಾಗಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ನಟ ತಮ್ಮ ಹಾಸ್ಯದ ಮೂಲಕ ಮಂಜು ಮತ್ತು ರಜತ್ ಅವರ ಬಣ್ಣ ಬಯಲು ಮಾಡಿದ್ದಾರೆ. ಮಂಜು ಪದೇಪದೆ ಗಿಲ್ಲಿಯನ್ನು ಕೆಣಕುತ್ತಲೇ ಇದ್ದರು.
ಇದನ್ನೂ ಓದಿ:‘ಇದ್ರೆ ಇರ್ತಾರೆ, ಇಲ್ಲದಿದ್ರೆ ಹೋಗ್ತಾರೆ..’ ಮದ್ವೆ ಆಗುವ ಹುಡುಗನ ಬಗ್ಗೆ ತುಟಿ ಬಿಚ್ಚಿದ ರಕ್ಷಿತಾ VIDEO
ಗಿಲ್ಲಿ ಹೊಗಳಿದ ಮಂಜು ಗೆಳತಿ ಗೌತಮಿ
ಉಗ್ರಂ ಮಂಜು ಅವರ ಗೆಳತಿ ಗೌತಮಿ ಜಾಧವ್, ಗಿಲ್ಲಿಯ ಆಟವನ್ನು ಹೊಗಳಿದ್ದಾರೆ. ನಿಜ ಹೇಳಬೇಕು ಅಂದರೆ ನಾನು ಊರಲ್ಲಿ ಇರಲಿಲ್ಲ. ನಿನ್ನೆಯಷ್ಟೇ ಬಂದೆ. ಬಿಗ್​ ಬಾಸ್ ನಾನು ನೋಡುತ್ತಿಲ್ಲ. ಅಲ್ಲಿ, ಇಲ್ಲಿ ಚೂರು ಚೂರು ನೋಡುತ್ತಿದ್ದೇನೆ. ಮಂಜು ಅವರ ಮದುವೆ ಫಿಕ್ಸ್ ಆಗಿದೆ. ಬ್ಯಾಚುಲರ್ ಪಾರ್ಟಿ ಮಾಡಲು ಬಿಗ್​ ಬಾಸ್​ಗೆ ಹೋಗಿದ್ದಾರೆ.
ಈ ವರ್ಷದ ಬಿಗ್​​ ಬಾಸ್ ಶೋ ಬಗ್ಗೆ ಹೇಳಬೇಕು ಅಂದರೆ.. ಒನ್ ಮ್ಯಾನ್ ಶೋ ಥರಾ ಆಗಿದೆ. ನನ್ನ ಪ್ರಕಾರ, ಅವರೇ ಗಿಲ್ಲ. ಎಲ್ಲಾ ಫ್ರೇಮ್​​ನಲ್ಲೂ ಸರಿಯಾದ ಮನರಂಜನೆ ನೀಡುತ್ತಿದ್ದಾರೆ. ಅವರು ತುಂಬಾ ಚೆನ್ನಾಗಿ ಆಡ್ತಿದ್ದಾರೆ. ಅಲ್ಲಿ, ಇಲ್ಲಿ ಎಲ್ಲೋ ಒಂದು ಕಡೆ ವೈಯಕ್ತಿಕವಾಗಿ ಹೋಗ್ತಿರೋದಕ್ಕೆ ಕೆಲವರಿಗೆ ಬೇಸರ ಆಗಿರಬಹುದು. ಆದರೆ ಗಿಲ್ಲಿ ಬಹಳಷ್ಟು ಟಾಸ್ಕ್​​ಗಳಲ್ಲಿ, ಫ್ರೇಮ್​​ಗಳಲ್ಲಿ ಎಂಟರ್ನೈಂಗ್ ಆಗಿದ್ದಾರೆ ಎಂದು ಕೊಂಡಾಡಿದ್ದಾರೆ.
Gouthami supports Gilli - calls him best entertainer 🔥 #bbk12pic.twitter.com/9hUvl4giIn
— Venkat ⚡️ (@WealthArigato) November 28, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us