ಕ್ಲೈಮ್ಯಾಕ್ಸ್ ತಲುಪಿದ ಬಿಗ್​​ ಬಾಸ್​.. 6 ಸ್ಪರ್ಧಿಗಳಿಗೆ ಮಿಡ್​ವೀಕ್ ಎವಿಕ್ಷನ್ ಟೆನ್ಶನ್..!

ಬಿಗ್​ ಬಾಸ್​ ಸೀಸನ್ 12 ಕ್ಲೈಮ್ಯಾಕ್ಸ್​ ತಲುಪಿದೆ. ಅಭಿಮಾನಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಟಾಕ್ ಜೋರಾಗಿದೆ. ಜೊತೆಗೆ ತಮ್ಮ ನೆಚ್ಚಿನ ಕಂಟೆಸ್ಟೆಂಟ್​ನ ಗೆಲ್ಲಿಸಲು ವೋಟಿಂಗ್ ಜೋರಾಗಿ ನಡೆಯುತ್ತಿದೆ.

author-image
Ganesh Kerekuli
bigg boss (13)
Advertisment

ಬಿಗ್​ ಬಾಸ್​ ಸೀಸನ್ 12 ಕ್ಲೈಮ್ಯಾಕ್ಸ್​ ತಲುಪಿದೆ. ಅಭಿಮಾನಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಟಾಕ್ ಜೋರಾಗಿದೆ. ಜೊತೆಗೆ ತಮ್ಮ ನೆಚ್ಚಿನ ಕಂಟೆಸ್ಟೆಂಟ್​ನ ಗೆಲ್ಲಿಸಲು ವೋಟಿಂಗ್ ಜೋರಾಗಿ ನಡೆಯುತ್ತಿದೆ. 

ಯಾರಿಗೆ ಗೆಲುವಿನ ಹಾರ..!

ಸೀಸನ್​​ನ ಕೊನೆಯ ವೀಕೆಂಡ್ ಮುಗಿಯುತ್ತಿದ್ದಂತೆಯೇ ಬಿಗ್ ಬಾಸ್​ ಸ್ಪರ್ಧಿಗಳು ಫಿನಾಲೆ ಮೂಡಿಗೆ ಜಾರಿದ್ದಾರೆ. ಅಶ್ವಿನಿ ಗೌಡ, ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ಧನುಷ್ ಗೌಡ ಹಾಗೂ ರಘು  ಅವರು ಗೋಲ್ಡನ್ ವೀಕ್​ಗೆ ಕಾಲಿಟ್ಟಿದ್ದಾರೆ. ಈ 7 ಸ್ಪರ್ಧಿಗಳಲ್ಲಿ 6 ಮಂದಿ ಫೈನಲಿಸ್ಟ್ ಆಗಲಿದ್ದಾರೆ. 

ಇದನ್ನೂ ಓದಿ: ಫಿನಾಲೆ ಹೊಸ್ತಿಲಲ್ಲಿ ಹೊರ ಬಂದ ರಾಶಿಕಾ ಶೆಟ್ಟಿ.. ಕಿಚ್ಚನ ಎದುರು ಹೇಳಿದ್ದೇನು..?

Bigg Boss Top Six (1)

ಮಿಡ್​ವೀಕ್​​ನಲ್ಲಿ ಮನೆಯಿಂದ ಹೋಗೋರು ಯಾರು?

ನಿನ್ನೆಯ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಹೊರ ಬಂದಿದ್ದಾರೆ. ಹೀಗಿದ್ದೂ ದೊಡ್ಮನೆಯಲ್ಲಿ 7 ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರಲ್ಲಿ ಒಬ್ಬರು ಮಿಡ್​​ವೀಕ್​​ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಹೊರಗೆ ಬರಲಿದ್ದಾರೆ. ಫಿನಾಲೆಗೆ ತಲುಪದೇ ಯಾರು ಮನೆಯಿಂದ ಆಚೆ ಹೊರ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ 7 ಮಂದಿಯಲ್ಲಿ ಧನುಷ್ ಈಗಾಗಲೇ ಫಿನಾಲೆಗೆ ಎಂಟ್ರಿ ಕೊಟ್ಟಿರೋದ್ರಿಂದ ಉಳಿದ ಸ್ಪರ್ಧಿಗಳಿಗೆ ಟೆನ್ಷನ್ ಹೆಚ್ಚಾಗಿದೆ. 

ನಿನ್ನೆಯಿಂದಲೇ ವೋಟಿಂಗ್ ಲೈನ್

ಇನ್ನು, ನಿನ್ನೆ ರಾತ್ರಿಯಿಂದಲೇ ವೋಟಿಂಗ್ ಲೈನ್ ಶುರುವಾಗಿದೆ. ಮಿಡ್​ ವೀಕ್​ ಎಲಿಮಿನೇಷನ್ ಇರೋದ್ರಿಂದ ಅಭಿಮಾನಿಗಳು ತಮ್ಮ ಸ್ಪರ್ಧಿಗಳನ್ನ ಫಿನಾಲೆಗೆ ಕಳುಹಿಸಲು ವೋಟಿಂಗ್ ಆರಂಭಿಸಿದ್ದಾರೆ. ಅಶ್ವಿನಿ ಗೌಡ, ಕಾವ್ಯ, ರಕ್ಷಿತಾ, ಗಿಲ್ಲಿ, ರಘು ಹಾಗೂ ಧ್ರುವಂತ್ ಪರ ಅಭಿಮಾನಿಗಳು ವೋಟಿಂಗ್ ಮಾಡ್ತಿದ್ದಾರೆ. ಮಿಡ್​ ವೀಕ್ ಎಲಿಮಿನೇಷನ್ ಮುಗಿದ ಬಳಿಕ ಮತ್ತೊಮ್ಮೆ ವೋಟಿಂಗ್ ಲೈನ್ ಓಪನ್ ಆಗಲಿದೆ. ಅದು, ಟ್ರೋಫಿ ಯಾರು ಎತ್ತಿ ಹಿಡಿಯುತ್ತಾರೆ ಎಂದು ನಿರ್ಧರಿಸಲು. 

ಇದನ್ನೂ ಓದಿ: ಫೋನ್ ಸಂಪರ್ಕ ಇರಲಿಲ್ಲ, CCTV ಕೂಡ ಇರಲಿಲ್ಲ -ಟೆಕ್ಕಿ ಜೀವ ತೆಗೆದ ಆರೋಪಿ ಟ್ರೇಸ್ ಆಗಿದ್ದು ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Ashwini Gowda Bigg Boss Gilli Nata Rakshita Shetty Bigg boss Rashika Shetty bigg boss dhruvanth Kavya Shaiva
Advertisment