/newsfirstlive-kannada/media/media_files/2025/11/13/rashika-shetty-and-risha-gowda-2025-11-13-11-37-56.jpg)
ಕಳೆದ ವಾರವಷ್ಟೇ ರಿಷಾ ಗಿಲ್ಲಿಯ ಮೇಲೆ ಕೈ ಎತ್ತಿದ್ದಕ್ಕೆ ಸ್ವತಃ ಸುದೀಪ್ ಅವರಿಂದ ವಾರ್ನಿಂಗ್ ಪಡೆದುಕೊಂಡಿದ್ದಾರೆ. ಇನ್ನೇನು ರಿಷಾ ನಡವಳಿಕೆಯಲ್ಲಿ ಫುಲ್ ಬದಲಾವಣೆಯಾಗುತ್ತಾ ಅನ್ನೋ ಆಸೆ ವೀಕ್ಷಕರಿಗೂ ಇತ್ತು. ರಿಷಾ ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಅಂತ ಪ್ರೂವ್ ಮಾಡ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ಆಗಮಿಸುತ್ತಲೇ ರಿಷಾ ಅಶ್ವಿನಿ ಗೌಡ ಬಗ್ಗೆ ಕಿಡಿಕಾರಿದ್ದರೂ ನಂತರ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇತ್ತೀಚೆಗೆ ರಾಶಿಕಾ ಕೂಡ ಇವರ ಗುಂಪಿಗೆ ಸೇರಿಕೊಂಡಿದ್ದರು. ಆದ್ರೆ ಅದೇಕೋ ಈ ಸ್ನೇಹ ಹೆಚ್ಚು ದಿನ ಉಳಿದುಕೊಳ್ಳುವಂತೆ ಕಾಣಿಸುತ್ತಿಲ್ಲ.
ಇದನ್ನೂ ಓದಿ: ಮಂಟಪಕ್ಕೆ ನುಗ್ಗಿ ವರನಿಗೆ ಚೂರಿ ಇರಿತ.. ಹಂತಕರನ್ನ 2 ಕಿಮೀ ಬೆನ್ನಟ್ಟಿದ ಡ್ರೋನ್..!
ರಿಷಾ ಸೂರಜ್ ಬಗ್ಗೆ ಮಾತನಾಡಿದ್ದು, ಸೂರಜ್ ಬರಿ ಲವ್ ಕಾರ್ಡ್ ಬಳಸಿಕೊಂಡು ಮನೆಯಲ್ಲಿ ಮೂರು ವಾರದಿಂದ ಉಳಿದುಕೊಳ್ಳುತ್ತಿದ್ದಾನೆ ಎಂದು ರಾಶಿಕಾ ಬಳಿ ಹೇಳಿದ್ದು, ಇವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಇಷ್ಟು ಸಾಲದು ಎನ್ನುವಂತೆ ಈ ವಾರ ಮನೆಯಿಂದ ಹೊರಹೋಗೋಕೆ ನಾಮಿನೇಟ್ ಆಗಿರುವ ತಂಡದಿಂದ ಒಬ್ಬರನ್ನು ಸೇಫ್ ಮಾಡಿ ಸೇಫ್ ತಂಡದಿಂದ ಒಬ್ಬರನ್ನು ನಾಮಿನೇಟ್ ತಂಡಕ್ಕೆ ಕರೆದುಕೊಳ್ಳುವ ವಿಚಾರ ಬಂದಾಗ ಮತ್ತೆ ರಿಷಾ ಹಾಗೂ ರಾಶಿಕಾ ನಡುವೆ ಜಗಳವಾಗಿದೆ.
ರಿಷಾ ರಾಶಿಕಾ ಸೇಫ್ ತಂಡಕ್ಕೆ ಹೋದರೆ ತಮ್ಮ ತಂಡ ವೀಕ್ ಆಗುತ್ತೆ ಎಂದು ಹೇಳಿದ್ದು ರಾಶಿಕಾ ಕೋಪಕ್ಕೆ ಕಾರಣವಾಗಿದ್ದು, ಒಟ್ಟಾರೆ ತನ್ನ ವಿಚಾರ ಬಂದಾಗ ಮಾತ್ರವೇ ಎಲ್ಲರೂ ತಿರುಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಸೇಫ್ ತಂಡದಿಂದ ಸ್ಪಂದನಾನನ್ನು ಕರೆಸಿಕೊಳ್ಳಬೇಕೆಂದು ರಾಶಿಕಾ ಹೇಳಿದ್ದರೆ ತಂಡದ ಉಳಿದವರೆಲ್ಲ ಅಭಿಷೇಕ್‌ರನ್ನು ಕರೆಸಿಕೊಳ್ಳುವ ನಿರ್ಧಾರ ಮಾಡಿದ್ದು, ರಾಶಿಕಾ ಸಿಡಿಮಿಡಿಗೊಳ್ಳುವಂತೆ ಮಾಡಿದೆ. ಕೊನೆಗೆ ತಾನು ಸೇಫ್ ಆಗದಿದ್ದರೂ ಪರವಾಗಿಲ್ಲ ಯಾರೂ ಹೋಗೋದೆ ಬೇಡ ಅಂತ ನಿರ್ಧರಿಸಿ ಬಿಟ್ಟಿದ್ದಾರೆ.
ಇದರಿಂದ ನಾಮಿನೇಟ್ ತಂಡಕ್ಕೆ ಸಿಕ್ಕಿದ್ದ ಇನ್ನೊಂದು ಅವಕಾಶ ಕೈ ತಪ್ಪುವಂತೆ ಆಗಿದ್ದು, ರಿಷಾ ಹಾಗೂ ರಾಶಿಕಾ ಜಗಳ ಇಡೀ ತಂಡದ ಮೇಲೆ ಪರಿಣಾಮ ಬೀರಿದ್ಯಾ? ಇವರಿಬ್ಬರ ಸ್ನೇಹ ಇಲ್ಲಿಗೇ ಮುರಿದು ಬೀಳುತ್ತಾ ಅನ್ನೋದಕ್ಕೆ ಟೈಂ ಉತ್ತರಿಸಬೇಕು.
ಇದನ್ನೂ ಓದಿ: BBK12: ಗಿಲ್ಲಿ ಕಾವ್ಯ ಸ್ನೇಹ ಕಟ್ ಆಗೋಯ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us