Advertisment

ಮಂಟಪಕ್ಕೆ ನುಗ್ಗಿ ವರನಿಗೆ ಚೂರಿ ಇರಿತ.. ಹಂತಕರನ್ನ 2 ಕಿಮೀ ಬೆನ್ನಟ್ಟಿದ ಡ್ರೋನ್..!

ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆಯೊಂದು ರಕ್ತಪಾತದ ಕಣವಾಗಿ ಮಾರ್ಪಟ್ಟಿದೆ. ವೇದಿಕೆಯ ಮೇಲೆ ವರನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ದೊಡ್ಡ ಕಾಂಪೌಂಡಿನಲ್ಲಿ ಓಪನ್ ಸ್ಪೇಸ್​ನಲ್ಲಿ ನಡೆಯುತಿದ್ದ ಮದುವೆಯಲ್ಲಿ ಈ ಘಟನೆ ನಡೆದಿದೆ.

author-image
Ganesh Kerekuli
Amaravati man wedding
Advertisment
  • ಡಿಜೆ ಡ್ಯಾನ್ಸ್​​.. ಹಳೇ ಗಲಾಟೆ.. ಉಕ್ಕಿದ ನೆತ್ತರು!
  • ಮಹಾರಾಷ್ಟ್ರದ ಅಮರಾವತಿಯಲ್ಲಿ ವಿಚಿತ್ರ ಸೇಡು!
  • ಸಣ್ಣ ಜಗಳಕ್ಕೆ ದೊಡ್ಡ ಕೃತ್ಯ ಎಸಗಿದ್ದ ಆರೋಪಿ!

ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆಯೊಂದು ರಕ್ತಪಾತದ ಕಣವಾಗಿ ಮಾರ್ಪಟ್ಟಿದೆ. ವೇದಿಕೆಯ ಮೇಲೆ ವರನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ದೊಡ್ಡ ಕಾಂಪೌಂಡಿನಲ್ಲಿ ಓಪನ್ ಸ್ಪೇಸ್​ನಲ್ಲಿ ನಡೆಯುತಿದ್ದ ಮದುವೆಯಲ್ಲಿ ಈ ಘಟನೆ ನಡೆದಿದೆ.

Advertisment

ಡಿಜೆ ಡ್ಯಾನ್ಸ್​​.. ಹಳೇ ಗಲಾಟೆ.. ಉಕ್ಕಿದ ನೆತ್ತರು!

ಅಮರಾವತಿ ನಗರದ ಬಡನೆರ ರಸ್ತೆಯಲ್ಲಿರುವ ಸಹಿಲ್ ಲಾನ್‌ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಮಹೋತ್ಸವ ಜರುಗಿತ್ತು. ಕಾಂಪೌಂಡ್ ಹೊರಗೆ ರಾತ್ರಿ 9.30ರ ಸುಮಾರಿಗೆ ಸ್ನೇಹಿತನ ಜೊತೆ ಬೈಕಿನಲ್ಲಿ ಹಂತಕನ ಪ್ರವೇಶ ಆಗಿತ್ತು. ಕಾಂಪೌಂಡ್ ಪ್ರವೇಶಿಸಿದ ಆರೋಪಿ ರಾಘೋ ಜಿತೇಂದ್ರ ಬಕ್ಷಿ.. ನೇರವಾಗಿ ಮದುವೆಯ ವಧು-ವರ ನಿಂತಿದ್ದ ವೇದಿಕೆಗೆ ನುಗ್ಗಿದವನೇ ಚಾಕುವಿನಿಂದ ಇರಿದಿದ್ದ.. ಅಲ್ಲಿ ಏನಾಗ್ತಿದೆ ಅನ್ನೋ ಹೊತ್ತಿಗೆ ಆರೋಪಿ ಅದೇ ಬೈಕ್​​ ಹತ್ತಿ ಪರಾರಿಯಾಗಿದ್ದ.. 

ಇದನ್ನೂ ಓದಿ:BBK12: ಗಿಲ್ಲಿ ಕಾವ್ಯ ಸ್ನೇಹ ಕಟ್‌ ಆಗೋಯ್ತಾ?

Amaravati man wedding (2)

ಮದುವೆ ಮನೆಯಲ್ಲಿ ಫೋಟೋಗ್ರಫಿ ಮಾಡ್ತಿದ್ದ ವ್ಯಕ್ತಿ ಸಮಯಪ್ರಜ್ಞೆ ಅಚ್ಚರಿ ಮತ್ತು ಮೆಚ್ಚುಗೆಗೆ ಕಾರಣ ಆಗಿದೆ.. ತಾನು ನಿಯಂತ್ರಿಸುತ್ತಿದ್ದ ಡ್ರೋನ್ ಅನ್ನು ಓಡಿಹೋಗುತ್ತಿದ್ದ ಆರೋಪಿಯ ಕಡೆಗೆ ತಿರುಗಿಸಿದ್ದ.. ಡ್ರೋನ್ ಆ ದಾಳಿಕೋರ ಕಾಂಪೌಂಡಿನಿಂದ ಆಚೆ ಹೋಗಿ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗುವುದೆಲ್ಲವನ್ನ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲ, ಅವರ ಬೈಕ್ ಹೋಗಿರುವ ಸುಮಾರು 2 ಕಿಮೀ ದೂರದವರೆಗೆ ಡ್ರೋನ್​​​ ಚೇಸ್ ಮಾಡಿದೆ..

ಸದ್ಯ ಡ್ರೋನ್​​​ ವಿಡಿಯೋ ಸಹಾಯದಿಂದ ಆರೋಪಿಯ ಗುರುತು ಪತ್ತೆ ಆಗಿದೆ.. ಬೈಕ್ ನಂಬರ್, ಬೈಕಿನಲ್ಲಿ ಆರೋಪಿಗಳು ಸಾಗಿದ ದಿಕ್ಕು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.. ಡ್ರೋನ್ ಆಪರೇಟರ್‌ನ ಕಾರ್ಯವನ್ನ ಶ್ಲಾಘಿಸಿದ್ದಾರೆ..

Advertisment

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕೈಗೆ ಚುಂಬಿಸಿದ ದೇವರಕೊಂಡ.. ‘ಕಣ್ಣುಗಳೇ ಹೇಳಿವೆ..’ ಎಂದ ಫ್ಯಾನ್ಸ್​..! VIDEO

Amaravati man wedding (1)

ಸಣ್ಣ ಜಗಳಕ್ಕೆ ದೊಡ್ಡ ಕೃತ್ಯ ಎಸಗಿದ್ದ ಆರೋಪಿ!

ಮದುವೆ ಮನೆಗೆ ನುಗ್ಗಿ ಚಾಕು ಇರಿತಕ್ಕೆ ಕಾರಣ ಡಿಜೆ ಡ್ಯಾನ್ಸ್​​. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಪಿಗೂ, ವರನಿಗೂ ಜಗಳವಾಗಿತ್ತಂತೆ. ಅದು ಡಿಜೆ ಪ್ರದರ್ಶನದ ಸಂದರ್ಭದಲ್ಲಿ ಸಣ್ಣ ಗಲಾಟೆಗೆ ಕಾರಣವಾಗಿದೆ. ನೃತ್ಯ ಮಾಡುವಾಗ ವರ ಮತ್ತು ಆರೋಪಿ ಪರಸ್ಪರ ತಳ್ಳಾಡಿಕೊಂಡಿದ್ರಂತೆ. ಇದರ ನಂತ್ರ ನಡೆದ ವಾಗ್ವಾದವು ಬಕ್ಷಿಯನ್ನ ಕೆರಳಿಸಿತ್ತು.. ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:‘ನಾವು ರೆಡಿ ಇಲ್ಲ..’ ಕೋಚ್ ಗಂಭೀರ್ ಸ್ಫೋಟಕ ಹೇಳಿಕೆ..!

ಒಟ್ಟಾರೆ, ಮರೆತು ಹೋಗಬಹುದಾಗಿದ್ದ ಗಲಾಟೆಯೊಂದು ಹಗೆತನಕ್ಕೆ ತಿರುಗಿದೆ. ಇದೇ ವಿಚಾರಕ್ಕೆ ಮದುವೆ ಕಾರ್ಯಕ್ರಮಕ್ಕೆ ನುಗ್ಗಿ ರಕ್ತಪಾತ ಮಾಡಿದ್ದಾನೆ. ಇದೇ ವೇಳೆ, ವರನ ತಂದೆ ರಾಮ್ಜಿ ಸಮುದ್ರ ಮೇಲೂ ಹಲ್ಲೆ ನಡೆಸಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

marriage
Advertisment
Advertisment
Advertisment