/newsfirstlive-kannada/media/media_files/2025/11/13/gambhir-2025-11-13-09-43-52.jpg)
ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಫೋಕಸ್ ಮಾತ್ರ ಟಿ-20 ವಿಶ್ವಕಪ್ ಮೇಲಿದೆ! ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ T20 ವಿಶ್ವಕಪ್​ ಡಿಫೆಂಡ್ ಮಾಡ್ಕೊಳೋದು ಹೇಗೆ ಅನ್ನೋದೇ ಕೋಚ್ ಗೌತಮ್ ಗಂಭೀರ್​​ಗೆ ದೊಡ್ಡ ತಲೆನೋವಾಗಿದೆ.
ಹಾಲಿ T20 ಚಾಂಪಿಯನ್ಸ್​ ಟೀಮ್ ಇಂಡಿಯಾ, ಮುಂಬರುವ ವಿಶ್ವಕಪ್​ ತಯಾರಿ ನಡೆಸಿಕೊಳ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಇದ್ರೂ ಕೋಚ್ ಗಂಭೀರ್ ಗಮನ ಮಾತ್ರ, ಟಿ-20 ವಿಶ್ವಕಪ್ ಮೇಲಿದೆ. ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ T20 ಸರಣಿ ಗೆದ್ರೂ, ಕೋಚ್ ಗಂಭೀರ್​ಗೆ ಸಮಾಧಾನವಿಲ್ಲ. ಆಸಿಸ್​ನಲ್ಲಿ ತಂಡದ ವೀಕ್ನೆಸ್ ಕವರ್​​ ಮಾಡ್ಲೇ ಇಲ್ಲ ಅನ್ನೋದು ಗಂಭೀರ್​ಗೆ ಬೇಸರ ತರಿಸಿದೆ.
10 ಪಂದ್ಯಗಳು, ಸಮಸ್ಯೆಗಳು ನೂರಾರು
2026ರ T20 ವಿಶ್ವಕಪ್ ಫೆಬ್ರವರಿ 2ನೇ ವಾರದಲ್ಲಿ ನಡೆಯೋ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಕ್ಕೆ ಉಳಿದಿರೋದು, ಕೇವಲ 10 ಪಂದ್ಯಗಳು ಮಾತ್ರ. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 T20 ಪಂದ್ಯಗಳು ಮತ್ತು ನ್ಯೂಜಿಲೆಂಡ್​ ವಿರುದ್ಧ 5 T20 ಪಂದ್ಯಗಳನ್ನ, ಟೀಮ್ ಇಂಡಿಯಾ ಆಡಲಿದೆ. ಆ 10 ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕಿರೋ ಸಮಸ್ಯೆಗಳನ್ನ ಬರೆಹರಿಸೋದು ಕಷ್ಟ ಸಾಧ್ಯ.
/filters:format(webp)/newsfirstlive-kannada/media/media_files/2025/11/06/suryakumar_gill_indvsaus-2025-11-06-10-52-20.jpg)
ನಾವ್ ರೆಡಿ ಇಲ್ಲ ಅಂದಿದ್ದೇಕೆ ಕೋಚ್..?
T20 ವಿಶ್ವಕಪ್ ಬಗ್ಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಗಂಭೀರ್ ಹೇಳಿಕೆ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರಿಗೆ ಆಶ್ಚರ್ಯ ಮೂಡಿಸಿದೆ. ಗಂಭಿರ್ ಯಾವುದೇ ಮುಚ್ಚುಮರೆ ಇಲ್ಲದೇ, ಸೂರ್ಯಕುಮಾರ್ ಯಾದವ್ ಪಡೆಯ ಬಗ್ಗೆ ಓಪನ್ ಸೀಕ್ರೆಟ್ ಹೇಳಿದ್ದಾರೆ. ವಿಶ್ವಕಪ್​ಗೆ ಇನ್ನು ಎರಡೂವರೆ ತಿಂಗಳು ಮಾತ್ರ ಬಾಕಿ ಇದೆ. ನಮ್ಮ ತಂಡ, ಟಿ-20 ವಿಶ್ವಕಪ್​​ಗೆ ರೆಡಿ ಇಲ್ಲ ಅಂತ ಬಹಿರಂಗವಾಗೇ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/31/surya-kumara-yadav-2025-10-31-17-03-22.jpg)
ಕೋಚ್ ಗೌತಮ್ ಗಂಭೀರ್ ಓಪನ್ ಸ್ಟೇಟೆಮೆಂಟ್​ ನೀಡಲು ಕಾರಣ ಇದೆ. ಈಗಾಗಲೇ ಟೀಮ್ ಇಂಡಿಯಾದಲ್ಲಿ ಆರಂಭಿಕರ ಸ್ಥಾನ ಮಾತ್ರ ಫಿಕ್ಸ್ ಆಗಿದೆ. ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್, ಟಿ-ಟ್ವೆಂಟಿ ವಿಶ್ವಕಪ್​​ನಲ್ಲಿ ಇನ್ನಿಂಗ್ಸ್ ಆರಂಭಿಸೋದು ಫಿಕ್ಸ್. ಆದ್ರೆ ಉಳಿದ ಬ್ಯಾಟರ್ಸ್​ ಸ್ಲಾಟ್​​​​ ಫಿಕ್ಸ್ ಆಗಿಲ್ಲ. ಬ್ಯಾಟಿಂಗ್ ಆರ್ಡರ್ ಬಗ್ಗೆ ಕನ್ಫೂಷನ್ ಇದೆ ಅಂತ ಹೇಳಿದ್ದಾರೆ. ಇದು ಆಟಗಾರರ ಗೊಂದಲಕ್ಕೂ ಕಾರಣವಾಗಿದೆ.​
ಒಳ್ಳೆ ಕಾಂಬಿನೇಷನ್ ಸೆಟ್ ಮಾಡಲು ಇನ್ನೂ ಗೊಂದಲ
ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾಕ್ಕೆ, ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಕಾಂಬಿನೇಷನ್ ಸೆಟ್ ಮಾಡೋದಕ್ಕೆ ಒಂದೊಳ್ಳೆ ಚಾನ್ಸ್ ಇತ್ತು. ಆದ್ರೆ ಮೊದಲ ಮತ್ತು ಕೊನೆಯ ಟಿ-20 ಪಂದ್ಯ ಮಳೆಯಿಂದ ವಾಶ್​​​​ಔಟ್ ಆದ ಕಾರಣ ಟೀಮ್ ಮ್ಯಾನೇಜ್ಮೆಮಟ್​​ಗೆ ಎಕ್ಸ್​ಪಿರಿಮೆಂಟ್ ಮಾಡಲು ಗೊಂದಲ ಉಂಟಾಗಿತ್ತು. ಉಳಿದೆರಡು ಟಿ-ಟ್ವೆಂಟಿ ಸರಣಿಗಳಲ್ಲಿ ಆ ಗೊಂದಲಗಳಿಗೆ ಫುಲ್​ಸ್ಟಾಪ್ ಹಾಕ್ತಾರಾ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ: IPL ಹರಾಜಿನ ಕಣದಲ್ಲಿ ಬಿಗ್ ಸ್ಟಾರ್ಸ್..! ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?
ಗಂಭೀರ್ ಮತ್ತು ಟೀಮ್ ಮ್ಯಾನೇಜ್ಮೆಂಟ್​​ಗೆ ತಂಡದ ಸೀಮ್ ಬೌಲಿಂಗ್ ಆಲ್​ರೌಂಡರ್​​ಗಳದ್ದೇ ಚಿಂತೆ. ಟಿ-20 ಕ್ರಿಕೆಟ್​ನಲ್ಲಿ ಆಲ್​ರೌಂಡರ್​ಗಳು, ತುಂಬಾ ಇಂಪಾರ್ಟೆಟ್. ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ ಬಗ್ಗೆ, ಕೋಚ್ ಗಂಭೀರ್ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ವಿಶ್ವಕಪ್​ಗೂ ಮುನ್ನ ಈ ಸಮಸ್ಯೆಯನ್ನ ಮ್ಯಾನೇಜ್ಮೆಂಟ್ ಬಗೆಹರಿಸಲೇಬೇಕಿದೆ.
ಕೋಚ್ ಗಂಭೀರ್ ಹೇಳಿಕೆ ಗಂಭೀರವಾಗಿ ಪರಿಗಣಿಸಲೇಬೇಕು. ವಿಶ್ವಕಪ್​​ಗೆ ಇನ್ನು ಟೈಮ್ ಇದೆ ಅಂತ ಸುಮ್ನೆ ಕೂತ್ರ, ಚಾಂಪಿಯನ್​ ಪಟ್ಟವನ್ನ ಟೀಮ್ ಇಂಡಿಯಾ ಕಳಚಿಡಬೇಕಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us