Advertisment

ಟ್ರೇಡಿಂಗ್ ಡೀಲ್​​ಗೆ ಟ್ವಿಸ್ಟ್ ಕೊಟ್ಟ ಜಡೇಜಾ.. ಸಿಎಸ್​ಕೆ ವಿರುದ್ಧ ಆಕ್ರೋಶ..!

ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ವಿಚಾರ ರೋಚಕ ಘಟ್ಟ ತಲುಪಿದೆ. ಸಂಜುಗಾಗಿ ಚೆನ್ನೈ ​ ಶತಪ್ರಯತ್ನ ನಡೆಸ್ತಿದೆ. ಇನ್ನೊಂದೆಡೆ ಕಂಡೀಷನ್ಸ್​ ಅಪ್ಲೈ ಎಂದಿರೋ ರಾಜಸ್ಥಾನ್​ ಹಿಡಿದ ಪಟ್ಟನ್ನ ಸಡಿಲಿಸ್ತಿಲ್ಲ. ಇದ್ರ ನಡುವೆ ಡೇಜಾ ವ್ಯವಹಾರಕ್ಕೆ ಮತ್ತಷ್ಟು ಟ್ವಿಸ್ಟ್​ ಕೊಟ್ಟಿದ್ದಾರೆ.

author-image
Ganesh Kerekuli
ಇದು CSK ಫ್ಯಾನ್ಸ್​ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ? 
Advertisment

ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ವಿಚಾರ ರೋಚಕ ಘಟ್ಟ ತಲುಪಿದೆ. ಸಂಜುಗಾಗಿ ಚೆನ್ನೈ ​ ಶತಪ್ರಯತ್ನ ನಡೆಸ್ತಿದೆ. ಇನ್ನೊಂದೆಡೆ ಕಂಡೀಷನ್ಸ್​ ಅಪ್ಲೈ ಎಂದಿರೋ ರಾಜಸ್ಥಾನ್​ ಹಿಡಿದ ಪಟ್ಟನ್ನ ಸಡಿಲಿಸ್ತಿಲ್ಲ. ಇದ್ರ ನಡುವೆ ಡೇಜಾ ವ್ಯವಹಾರಕ್ಕೆ ಮತ್ತಷ್ಟು ಟ್ವಿಸ್ಟ್​ ಕೊಟ್ಟಿದ್ದಾರೆ.

Advertisment

ಐಪಿಎಲ್​ ರಿಟೈನ್ಶನ್​ ಡೆಡ್​ಲೈನ್​ ಹತ್ತಿರವಾದ್ರೂ ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ಕತೆ ಅಂತ್ಯವಾಗೋ ಯಾವ ಸೂಚನೆಯೂ ಕಾಣ್ತಿಲ್ಲ. ದಿನದಿಂದ ದಿನಕ್ಕೆ ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ವಿಚಾರ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ತಿದೆ. ಸಂಜು ಖರೀದಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಶತಪ್ರಯತ್ನ ನಡೆಸ್ತಿದೆ. ರಾಜಸ್ಥಾನ್​ ರಾಯಲ್ಸ್​ ಹಾಕಿರೋ ಕಂಡೀಷನ್​​ನಿಂದೆ ಹಿಂದೆ ಸರೀತಿಲ್ಲ. ಜಡೇಜಾ ಬೇಕೆ ಬೇಕೆಂದು ಪಟ್ಟು ಹಿಡಿದಿದೆ. ಜಡೇಜಾ ನೋಡಿದ್ರೆ ನಿಗೂಢ ಹೆಜ್ಜೆಯಿಟ್ಟಿದ್ದಾರೆ.   

ಇದನ್ನೂ ಓದಿ:RCB ತಂಡದಿಂದ 5 ಆಟಗಾರರು ರಿಲೀಸ್ ಪಕ್ಕಾ.. ಪರ್ಸ್​ನಲ್ಲಿ ಹಣ ಎಷ್ಟಿದೆ?

ಸಂಜುಗಾಗಿ ರಾಜಸ್ಥಾನಕ್ಕೆ ಜಡೇಜಾನ ಬಿಟ್ಟು ಕೊಡೋ ವಿಚಾರದಲ್ಲಿ ಚೆನ್ನೈ ಫ್ರಾಂಚೈಸಿಯಲ್ಲಿ ಆತಂರಿಕ ಚರ್ಚೆ ನಡೆದಿದೆ. ಸಿಎಸ್​ಕೆ ಫ್ರಾಂಚೈಸಿಯ ಈ ನಡೆಗೆ ಅಸಮಾಧಾನಗೊಂದಿರೋ ಜಡೇಜಾ ನಿಗೂಢ ಹೆಜ್ಜೆಯನ್ನಿಟ್ಟಿದ್ದಾರೆ. ಟ್ರೇಡಿಂಗ್​ ಚರ್ಚೆ ಆರಂಭವಾದ ಬೆನ್ನಲ್ಲೇ ತನ್ನ ಇನ್ಸ್​​ಸ್ಟಾಗ್ರಾಂ ಅಕೌಂಟ್​ ಡಿಲೀಟ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಿಂದಲೂ ಹೊರಗುಳಿದು ಜಡೇಜಾ ಮೌನಕ್ಕೆ ಜಾರಿರೋದು ಟ್ರೇಡಿಂಗ್​ ಟಾಕ್​ಗೆ ಟ್ವಿಸ್ಟ್​ ನೀಡಿದೆ.  

Advertisment

ಜಡೇಜಾಗೆ ಸಿಟ್ಟು?

ಸಂಜುಗಾಗು ತನನ್ನ ಬಿಟ್ಟು ಕೊಟ್ತಿರೋ ಫ್ರಾಂಚೈಸಿಯ ಈ ನಡೆ ರವೀಂದ್ರ ಜಡೇಜಾ ಪಿತ್ತವನ್ನ ನೆತ್ತಿಗೇರಿಸಿದೆ. ಸುದೀರ್ಘ 13 ಕಾಲ ತಂಡಕ್ಕಾಗಿ ದುಡಿದ ತನ್ನನ್ನ ಟ್ರೇಡ್​ ಮಾಡ್ತಿರೋ ನಿರ್ಧಾರಕ್ಕೆ  ಜಡೇಜಾ ತನ್ನ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರಂತೆ. ಈ ಕೋಪದಿಂದಲೇ ಜಡೇಜಾ ಇನ್ಸ್​​ಸ್ಟಾಗ್ರಾಂ ಅಕೌಂಟ್​ ಡಿಲೀಟ್​ ಮಾಡಿರೋದು ಅನ್ನೋದು ಸದ್ಯದ ಮಾಹಿತಿ. 

ರವೀಂದ್ರ ಜಡೇಜಾ ಬಳಿಕ ಸಂಜು ಸ್ಯಾಮ್ಸನ್​ ಟ್ರೇಡಿಂಗ್​ಗೆ ವೇಗಿ ಮತಿಶಾ ಪತಿರಣಗೂ ರಾಜಸ್ಥಾನ ರಾಯಲ್ಸ್​​ ಫ್ರಾಂಚೈಸಿ ಬೇಡಿಕೆ ಇಟ್ಟಿತ್ತಂತೆ. ವಿಕೆಟ್​ ಕೀಪರ್​ ಬ್ಯಾಟರ್​ ಹುಡುಕಾಟದಲ್ಲಿರೋ ಚೆನ್ನೈ ರಾಜಸ್ಥಾನದ ಈ ಆಫರ್​ಗೆ ಪಾಸಿಟಿವ್​ ಆಗಿ ರೆಸ್ಪಾಂಡ್​ ಮಾಡಿತ್ತು. ಇದ್ರ ನಡುವೆ ಮತೀಶಾ ಪತಿರಣ ಕೂಡ ಜಡೇಜಾ ಹಾದಿ ಹಿಡಿದಿದ್ದಾರೆ. ಪತಿರಣ ಕೂಡ ಸೋಷಿಯಲ್​ ಮೀಡಿಯಾದಿಂದ ಸಡನ್ ಆಗಿ ಹೊರ ನಡೆದು ಕಹಾನಿಗೆ ಟ್ವಿಸ್ಟ್​ ನೀಡಿದ್ದಾರೆ.  

ಇದನ್ನೂ ಓದಿ:5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?

Advertisment

ಸಂಜು ಸ್ಯಾಮ್ಸನ್​ ಟ್ರೇಡಿಂಗ್​ ಸಾಗಾ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಜಡೇಜಾ ಹಾಗೂ ಸ್ಯಾಮ್​ ಕರನ್​ ತ್ಯಾಗಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​ ಮುಂದಾಗಿದೆ ಅನ್ನೋದು ಲೇಟೆಸ್ಟ್​ ಮಾಹಿತಿ. ರಾಜಸ್ಥಾನ ರಾಯಲ್ಸ್​ ಫ್ರಾಂಚೈಸಿ ಕಡೆಯಿಂದ ಇದಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿಲ್ಲ. ರಾಜಸ್ಥಾನ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಡೀಲ್​ ಡನ್​ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇದು ಕ್ಯಾಶ್​ ಪ್ಲಸ್​​ ಪ್ಲೇಯರ್​ ಡೀಲ್​ ಆಗಿರಲಿದೆ. 
ರವೀಂದ್ರ ಜಡೇಜಾಗೆ ಸಿಎಸ್​​ಕೆಯನ್ನ ಬಿಟ್ಟು ಹೋಗೋಕೆ ಇಷ್ಟವಿಲ್ಲ. ಚೆನ್ನೈ ಫ್ರಾಂಚೈಸಿಯ ಮ್ಯಾನೇಜ್​ಮೆಂಟ್​ ವಲಯದಲ್ಲೂ ಜಡೇಜಾನ ಬಿಟ್ಟು ಕೊಡೋಕೆ ಕೆಲವರನ್ನ ಹೊರತುಪಡಿಸಿ ಬಹುತೇಕರಿಗೆ ಇಷ್ಟವಿಲ್ಲ. ಚೆನ್ನೈ ಫ್ರಾಂಚೈಸಿ ಟ್ರೇಡ್​ ಡೀಲ್​ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಯೂಟರ್ನ್​ ತೆಗೆದುಕೊಂಡ್ರೂ ಅಚ್ಚರಿಪಡಬೇಕಿಲ್ಲ.  

ಇದನ್ನೂ ಓದಿ: BBK12 ಜಗಳದಿಂದ ಬಂದ ಅವಕಾಶನೂ ಕಳಕೊಂಡ್ರಾ ರಾಶಿಕಾ..?

ಐಪಿಎಲ್​​ ಸಂಜು ಸ್ಯಾಮ್ಸನ್​ಗಾಗಿ ಚೆನ್ನೈ ಫ್ರಾಂಚೈಸಿ ಯಾರನ್ನ ಬಿಟ್ಟು ಕೊಡುತ್ತೆ ಅನ್ನೋದು ಕ್ರಿಕೆಟ್​ ವಲಯದಲ್ಲಂತೂ ತೀವ್ರ ಕುತೂಹಲ ಹುಟ್ಟು ಹಾಕಿದೆ. ಸಂಜುಗೂ ತನ್ನ ಮುಂದಿನ ನಿಲ್ದಾಣ ಯಾವುದು ಅನ್ನೋದು ಉತ್ತರವಿಲ್ಲದ ಪ್ರಶ್ನೆಯಾಗಿ ಕಾಡ್ತಿದೆ. ಅಂದ್ಹಾಗೆ ಇಲ್ಲಿಗೆ ಎಲ್ಲಾ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಟ್ರೇಡಿಂಗ್​ ಕಹಾನಿ ಇನ್ನಷ್ಟು ತಿರುವುಗಳನ್ನ ಪಡೆದ್ರೂ ಅಚ್ಚರಿಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
rajasthan royals chennai super kings Sanju Samson Ravindra Jadeja
Advertisment
Advertisment
Advertisment