/newsfirstlive-kannada/media/post_attachments/wp-content/uploads/2025/03/IPL_2025-1.jpg)
ಐಪಿಎಲ್ ಆಟಗಾರರ ರಿಟೆನ್ಶನ್​​ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಡೆಡ್​​ಲೈನ್​​ಗೆ ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೂ ಫ್ರಾಂಚೈಸಿಗಳು ಕ್ಲೋಸ್ಡ್ ಡೋರ್ ಹಿಂದೆನೇ ಚಟುವಟಿಕೆಗಳಲ್ಲಿ ಬ್ಯೂಸಿಯಾಗಿವೆ.
ಐಪಿಎಲ್ ಸೀಸನ್-19 ಹರಾಜಿಗೂ ಮುನ್ನ ಪ್ಲೇಯರ್ಸ್ ರಿಟೆನ್ಶನ್,​​​​​​​​​​​​​​​ ಫ್ರಾಂಚೈಸಿಗಳಿಗೆ ಪ್ರತಿಷ್ಟೆಯ ಕಣವಾಗಿದೆ. ಆಟಗಾರರ ರಿಟೆನ್ಶನ್ ಅಥವಾ ರಿಲೀಸ್ ವಿಚಾರದಲ್ಲಿ ಫ್ರಾಂಚೈಸಿ ಒಂದೇ ಒಂದು ಯಡವಟ್ಟು ಮಾಡಿದ್ರೂ ಸೀಸನ್​​​ ಉದ್ದಕ್ಕೂ ಅದು ಇನ್ನಿಲ್ಲದಂತೆ ಕಾಡಲಿದೆ. ಹಾಗಾಗಿ ಹಗಲು ರಾತ್ರಿ ಎನ್ನದೇ ಫ್ರಾಂಚೈಸಿ ಮಾಲೀಕರು, ಆಟಗಾರರನ್ನ ಎಚ್ಚರಿಕೆಯಿಂದಲೇ ರೀಟೇನ್ ಮತ್ತು ರಿಲೀಸ್ ಮಾಡ್ತಿದ್ದಾರೆ. ಹಾಗೆ ಸಾರಥಿಯ ಆಯ್ಕೆಯಲ್ಲೂ, ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!
ನಾಯಕ ಯಾರು..?
ರಾಜಸ್ಥಾನ್ ರಾಯಲ್ ತಂಡದ ನಾಯಕ ಸಂಜು ಸ್ಯಾಮ್ಸನ್, ತಂಡವನ್ನ ಬಿಡಲು ಧೃಡ ನಿರ್ಧಾರ ಮಾಡಿದ್ದಾರೆ. ಸದ್ಯ ಟ್ರೇಡ್ ಮೂಲಕ ವ್ಯವಹಾರ ನಡೆಸ್ತಿರುವ ಸಂಜು ಬದಲಿಗೆ ಆರ್​ಆರ್​, ನೂತನ ನಾಯಕನ ಆಯ್ಕೆಯಲ್ಲಿ ಬ್ಯೂಸಿಯಾಗಿದೆ. ರಾಜಸ್ಥಾನ್ ಮುಂದೆ 3 ಆಪ್ಶನ್​ಗಳಿವೆ. ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್, ಈ ಮೂವರು ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನ ಆರ್​ಆರ್​ ಸಾರಥಿಯಾಗಿ ನೇಮಕ ಮಾಡಬೇಕಿದೆ.
ಶಮಿಗೆ ಸಿಎಸ್​​ಕೆ ಗಾಳ?
ಚೆನ್ನೈ ಸೂಪರ್​ಕಿಂಗ್ಸ್​ ಇರೋ ಬರೋ ಆಟಗಾರರನ್ನೆಲ್ಲಾ ತಂಡಕ್ಕೆ ಸೆಳೆಯಲು ಮುಂದಾಗಿದೆ. ಒಂದೆಡೆ ಸಂಜು ಸ್ಯಾಮ್ಸನ್​​​​ಗೆ ಗಾಳ ಹಾಕಿರುವ ಸಿಎಸ್​ಕೆ, ಜೊತೆಯಲ್ಲೇ ಕೆ.ಎಲ್.ರಾಹುಲ್, ಇಶಾನ್ ಕಿಶನ್ ಮತ್ತಿತರೆ ಆಟಗಾರರ ಮೇಲೂ ಕಣ್ಣಿಟ್ಟಿದೆ. ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ ಚೆನ್ನೈ, ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನ ತಂಡಕ್ಕೆ ಕರೆತರಲು ಪ್ಲಾನ್ ಮಾಡಿಕೊಂಡಿದಿಯಂತೆ. ಆದ್ರೆ ಇದು ಎಷ್ಟು ನಿಜ ಅನ್ನೋದೇ, ಸದ್ಯಕ್ಕೆ ಎಲ್ಲರಿಗೂ ಕಾಡ್ತಿರೋ ಪ್ರಶ್ನೆ.
ಇದನ್ನೂ ಓದಿ:KSCA ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಟ್ಟ ವೆಂಕಟೇಶ್ ಪ್ರಸಾದ್..! ಕುಂಬ್ಳೆ ಬೆಂಬಲ
ಸನ್​ರೈಸರ್ಸ್ ಹೈದ್ರಾಬಾದ್ ತಂಡ, ಬಿಗ್ ಸ್ಟಾರ್​ಗಳನ್ನ ರಿಲೀಸ್ ಮಾಡುವ ಸುದ್ದಿ ಬಿರುಗಾಳಿಯಂತೆ ಬೀಸಿತ್ತು. ಅದ್ರಲ್ಲೂ ಪ್ರಮುಖವಾಗಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಮತ್ತು ಬಿಗ್ ಹಿಟ್ಟರ್ ಹೆನ್ರಿಚ್ ಕ್ಲಾಸನ್​ರನ್ನ ಎಸ್​ಆರ್​ಹೆಚ್ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋದು ಎಲ್ಲೆಡೆ ಹಬ್ಬಿತ್ತು. ಆದ್ರೀಗ ಹೈದ್ರಾಬಾದ್ ಫ್ರಾಂಚೈಸಿ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸನ್​​ ತಂಡದಲ್ಲೇ ಉಳಿಯಲಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿದೆ.
ಯಾರಿಗೆ ಅದೃಷ್ಟ..?​
ಈ ಬಾರಿ ಹರಾಜಿನಲ್ಲಿ ಫ್ರಾಂಚೈಸಿಗಳು ಬಿಗ್​ಸ್ಟಾರ್​ಗಳನ್ನೇ ರಿಲೀಸ್ ಮಾಡುತ್ತೆ ಅನ್ನೋದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್​ವೆಲ್, ಇಂಗ್ಲೆಂಡ್​ನ ಲಿವಿಂಗ್​ ಸ್ಟೋನ್, ಭಾರತದ ವೆಂಕಟೇಶ್ ಅಯ್ಯರ್ ಎಲ್ಲರೂ ಹರಾಜಿಗೆ ಹೋಗೋದು ಬಹುತೇಕ ಫಿಕ್ಸ್. ಆದ್ರೆ ಹರಾಜಿನಲ್ಲಿ ಯಾರಿಗೆ ಲಕ್ ಕುಲಾಯಿಸುತ್ತೋ ನೋಡಬೇಕು.
ಇದನ್ನೂ ಓದಿ:5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?
ಡಿಸೆಂಬರ್​ನಲ್ಲಿ ನಡೆಯಲಿರೋ ಮಿನಿ ಹರಾಜಿನಲ್ಲಿ, ಫ್ರಾಂಚೈಸಿ ಮಾಲೀಕರು ಲೆಕ್ಕಾಚಾರದೊಂದಿಗೆ ಬಿಡ್ಡಿಂಗ್ ಮಾಡಲಿದ್ದಾರೆ. ಈ ಬಾರಿ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಹೆಚ್ಚು ಡಿಮ್ಯಾಂಡ್ ಅಂತ ಹೇಳಲಾಗ್ತಿದೆ. ಫ್ರಾಂಚೈಸಿ ಮಾಲೀಕರು ಭಾರತೀಯ ಆಟಗಾರರ ಮೇಲೆ ಹೆಚ್ಚು ಒಲವು ತೋರಿಸ್ತಿದ್ದಾರೆ. ಇಂಡಿಯನ್ ಕಂಡೀಷನ್​ನಲ್ಲಿ ಪರ್ಫಾಮ್ ಮಾಡೋ ಆಟಗಾರರನ್ನ ತಂಡಕ್ಕೆ ಕರೆತರಲು ಸ್ಕೆಚ್ ಆಗ್ತಿದ್ದಾರೆ.
ಐಪಿಎಲ್ ರಿಟೆನ್ಶನ್​ಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ನವೆಂಬರ್ 15ಕ್ಕೂ ಮುನ್ನ ಆಟಗಾರರ ರಿಟೆನ್ಶನ್ ಮತ್ತು ರಿಲೀಸ್ ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆ ಆಗ್ತಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.
ಇದನ್ನೂ ಓದಿ:RCB ತಂಡದಿಂದ 5 ಆಟಗಾರರು ರಿಲೀಸ್ ಪಕ್ಕಾ.. ಪರ್ಸ್​ನಲ್ಲಿ ಹಣ ಎಷ್ಟಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us