/newsfirstlive-kannada/media/media_files/2025/10/25/jahnavi-and-risha-1-2025-10-25-16-32-44.jpg)
ಬಿಗ್​​ಬಾಸ್​ (Bigg Boss) ಶೋನಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದ್ದು, ಭಾರೀ ಕುತೂಹಲ ಮೂಡಿಸಿದೆ. ಇಂದು ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್, ಜಾಹ್ನವಿ ಹಾಗೂ ರಿಷಾ ಗೌಡ ಮೇಲೆ ಕೋಪಿಸಿಕೊಂಡಂತೆ ಕಾಣ್ತಿದೆ..
ಅದರಲ್ಲಿ ಜಾಹ್ನವಿಗೆ ರಿಷಾ ಗೌಡ ಕಿಚ್ಚನ ಎದುರಲ್ಲೇ ಓಪನ್ ಚಾಲೆಂಜ್ ಹಾಕಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ಮೂವರು ಸ್ಪರ್ಧಿಗಳನ್ನ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಕಳುಹಿಸಿಕೊಟ್ಟಿದ್ದರು. ಅವರ ಆಟಕ್ಕೆ ಸಂಬಂಧಿಸಿದಂತೆ ಇವತ್ತು ಕಿಚ್ಚ, ಇತರೆ ಸ್ಪರ್ಧಿಗಳಿಗೆ ಅಭಿಪ್ರಾಯ ಕೇಳಿದ್ದಾರೆ.
ಇದನ್ನೂ ಓದಿ: ಖಾಸಗಿ ವೀಡಿಯೋ, ಫೋಟೋಗಳಿಂದ ಬ್ಲ್ಯಾಕ್​ಮೇಲ್ ಆರೋಪ​.. ನಟಿ ಆಶಾ ಜೋಯಿಸ್ ವಿರುದ್ಧ FIR
ಅದಕ್ಕೆ ಉತ್ತರಿಸುವ ಅಶ್ವಿನಿ ಗೌಡ ರಿಷಾ ಬಗ್ಗೆ ಮಾತನ್ನಾಡಿ.. ನಂಗೆ ಅವರ ಬಗ್ಗೆ ಯಾವುದೇ ಪಾಸಿಟೀವ್ ಎನಿಸಲಿಲ್ಲ. ನಂತರ ಜಾಹ್ನವಿ, ರಿಷಾ ಬಗ್ಗೆ ಪ್ರತಿಕ್ರಿಯಿಸಿ.. ಚಂದ್ರಪ್ರಭ, ಗಿಲ್ಲಿ ಜೊತೆ ಆಗಿರಬಹುದು.. ಅವರು ಫನ್ನಾಗಿಯೇ ಮಾಡುತ್ತಾರೆ. ಆದರೆ ಅದು, ಎಲ್ಲೋ ಒಂದು ಕಡೆ ನಮಗೆ ಮುಜುಗರ ಆಗುತ್ತದೆ ಸರ್ ಎಂದು ಕಿಚ್ಚನಿಗೆ ಹೇಳಿದ್ದಾರೆ.
ಅಷ್ಟೆಲ್ಲ ಆದ ಮೇಲೆ ಕಿಚನ್​ನಲ್ಲಿ ದೊಡ್ಡ ಗಲಾಟೆ ಆಗಿದೆ. ಈ ವೇಳೆ ಜಾಹ್ನವಿ ಮೇಲೆ ರಿಷಾ ಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ತಾಖತ್ತು ಏನು ಎಂದು ತೋರಿಸ್ತೀನಿ ಎಂದು ಧಮ್ಕಿ ಹಾಕಿದ್ದಾರೆ. ಅದಕ್ಕೆ ಜಾಹ್ನವಿ ಕೂಡ ಕೌಂಟರ್ ಕೊಟ್ಟಿದ್ದಾರೆ. ಇಬ್ಬರ ನಡುವಿನ ಗಲಾಟೆಯನ್ನು ಸುದೀಪ್ ಕೋಪದಲ್ಲಿ ನೋಡುತ್ತಿದ್ದಾರೆ. ಹೀಗಾಗಿ ಇವತ್ತಿನ ಸಂಚಿಕೆಯಲ್ಲಿ ಇವರ ಗಲಾಟೆಗೆ ಕಿಚ್ಚನ ರಿಯಾಕ್ಷನ್ ಏನಾಗಿರುತ್ತೆ ಅಂತಾ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: BBK12; ದೊಡ್ಮನೆಯಲ್ಲಿ ಕೆಂಪೇಗೌಡ ಲುಕ್​ ಕೊಟ್ಟಿದ್ದ ಗಿಲ್ಲಿ ನಟ.. ಅರ್ಧ ಮೀಸೆ ಕಟ್!
ಪಂಚಾಯ್ತಿಯಲ್ಲಿ ಜಾನ್ವಿಗೆ ಓಪನ್ ಚಾಲೆಂಜ್ ಹಾಕಿದ ರಿಷಾ
— Colors Kannada (@ColorsKannada) October 25, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/0bMuvbWkXz
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us