Advertisment

ಕಿಚ್ಚನ ಜೊತೆ ಮಲ್ಲಮ್ಮ ಮಾತು.. ಬಿಗ್​​ಬಾಸ್​​ಗೆ ಈ ಪ್ರತಿಭೆ ಬಗ್ಗೆ ಕಿಚ್ಚ ಹೇಳಿದ್ದೇನು? VIDEO

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ 12 ಇವತ್ತು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದರ ಮಧ್ಯೆ ನಿನ್ನೆ ನಡೆದ ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಮೂವರ ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ.

author-image
Ganesh Kerekuli
Mallamma and sudeep (1)
Advertisment

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ 12 ಇವತ್ತು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದರ ಮಧ್ಯೆ ನಿನ್ನೆ ನಡೆದ ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ಮೂವರ ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ.

Advertisment

ಇದೀಗ ಕಲರ್ಸ್​ ಕನ್ನಡ ವಿಡಿಯೋ ಒಂದನ್ನ ಹಂಚಿಕೊಂಡಿದ್ದು, ಅದರಲ್ಲಿ ಕಿಚ್ಚ ಸುದೀಪ್ ಮಲ್ಲಮ್ಮಗೆ ಗ್ರ್ಯಾಂಡ್ ವೆಲ್​ಕಮ್ ಹೇಳಿದ್ದಾರೆ. ಪ್ರೊಮೋ ವಿಡಿಯೋ ಇದಾಗಿದ್ದು, ಬಿಗ್​ಬಾಸ್​ ವೇದಿಕೆಗೆ ಕಿಚ್ಚ ಮಲ್ಲಮ್ಮ ಅವರನ್ನು ಕರೆಯುತ್ತಾರೆ. ವೇದಿಕೆ ಬರುತ್ತಿದ್ದಂತೆಯೇ ಬಿಗ್​ಬಾಸ್​​ ಬಗ್ಗೆ ನಿಮಗೆ ಏನು ಗೊತ್ತು ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ. 

ಇದನ್ನೂ ಓದಿ:ಹಾಯ್ ಫ್ರೆಂಡ್ಸ್​.. ಬಿಗ್​ಬಾಸ್​ ಮನೆಗೆ ಬಂದ ಈ ಮಲ್ಲಮ್ಮ ಯಾರು..?

ಬಿಗ್​ ಬಾಸ್​​ ರೀ.. ಅಲ್ಲಿ ಆಟ ಆಡೋದ್ರಿ.. ಎನ್ನತಾರೆ. ಆಗ ಸುದೀಪ್, ನಾಮಿನೇಷನ್, ಟಾಸ್ಕ್​, ಎಲಿಮಿನೇಷನ್ ಅಂದರೆ ನಿಮಗೆ ಅವೆಲ್ಲ ಗೊತ್ತಾ ಎಂದು ಕೇಳ್ತಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಲ್ಲಮ್ಮ.. ಅವೆಲ್ಲ ನಂಗೆ ಗೊತ್ತಿಲ್ಲ. ನೀವು ಹೇಳಿಕೊಡಬೇಕು ಎನ್ನುತ್ತಾರೆ. ಆಗ ಕಿಚ್ಚ ಪ್ರೀತಿಯಿಂದ ತಬ್ಬಿಕೊಂಡು ಮನೆಯ ಒಳಗೆ ಕಳುಹಿಸಿ ಕೊಡ್ತಾರೆ. 

Advertisment

ಯಾರು ಈ ಮಲ್ಲಮ್ಮ..? 

ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದಿರುವ ಮಲ್ಲಮ್ಮಮ ಯಾದಗಿರಿಯಿಂದ ಬಿಗ್​ಬಾಸ್​ ಮನೆಗೆ ಬಂದಿದ್ದಾರೆ. ಮಲ್ಲಮ್ಮ ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದರು. ಅವರು ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದರು. ಇದೀಗ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂವರು ಸ್ಪರ್ಧಿಗಳು.. ಯಾರಿವರು..?  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

bigg boss season 12 kannada, kannada bigg boss, kiccha sudeep BBK12 kiccha sudeep Bigg boss mallamma Bigg Boss Kannada 12
Advertisment
Advertisment
Advertisment