/newsfirstlive-kannada/media/media_files/2025/09/28/bigg-boss-mallamma-2-2025-09-28-10-20-56.jpg)
ಬಿಗ್​ಬಾಸ್ ಅಂದ್ರೆ ವ್ಯಕ್ತಿತ್ವದ ಆಟ! ಅದಕ್ಕೆ ಇಲ್ಲಿಗೆ ಬರುವ ಸ್ಪರ್ಧಿಗಳ ಮೇಲೆ ವೀಕ್ಷಕರು ಸಾಕಷ್ಟು ಎಕ್ಸೈಟ್​​ಮೆಂಟ್ ಇಟ್ಕೊಂಡು ಇರ್ತಾರೆ. ಎಂಟ್ರಿ ನೀಡುವ ಪ್ರತಿಯೊಬ್ಬ ಸ್ಪರ್ಧಿಯೂ ನೋಡುಗರಿಗೆ ಸರ್ಪ್ರೈಸ್ ಆಗಿರುತ್ತದೆ. ಅದೇ ಕಾರಣ ಪ್ರತಿಸಲ ಬಿಗ್​​ ಬಾಸ್ ಬಂದಾಗ, ಕಂಟೆಸ್ಟೆಂಟ್ ಮೇಲೆ ಜನ ತುಂಬಾನೇ ಕ್ಯೂರಿಸಿಟಿ ಇಟ್ಕೊಂಡಿರ್ತಾರೆ. ಅಂತೆಯೇ ಇದೀಗ ಅಚ್ಚರಿಯ ಹೆಸರೊಂದು ರಿವೀಲ್ ಆಗಿದೆ.
ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂವರು ಸ್ಪರ್ಧಿಗಳು.. ಯಾರಿವರು..?
ಅವರೇ ನಮ್ಮ ಹಳ್ಳಿ ಅಜ್ಜಿ, ಮಾತಿನ ಮಲ್ಲಿ ಮಲ್ಲಮ್ಮ! ನಿನ್ನೆ ಕಲರ್ಸ್ ಕನ್ನಡ ‘ಕ್ವಾಟ್ಲೆ ಕಿಚನ್​’ ಫಿನಾಲೆ ಇತ್ತು ಈ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಮನೆಗೆ ಹೋಗುವ ಮೂವರು ಸ್ಪರ್ಧಿಗಳ ಹೆಸರನ್ನು ಅಧಿಕೃತವಾಗಿ ರಿವೀಲ್ ಮಾಡಿದೆ. ಅವರಲ್ಲಿ ಮಲ್ಲಮ್ಮ ಕೂಡ ಒಬ್ಬರು.
ಯಾರು ಈ ಮಲ್ಲಮ್ಮ..?
ಮಲ್ಲಮ್ಮ ಉತ್ತರ ಕರ್ನಾಟಕದ ಅಪ್ಪಟ ಹಳ್ಳಿಯ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದು, ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು.
ಇವರ ಸ್ಪೆಷಲ್ ಏನಪ್ಪ ಅಂದ್ರೆ ಮಾತೂ ಮಾತು. ಬರೀ ಮಾತು. ಅಂದ್ಹಾಗೆ ಬರೀ ಮಾತೊಂದೇ ಅಲ್ಲ. ಇಂದಿನ ಯುವಕರನ್ನೂ ಮೀರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್. ತಮ್ಮದೇ ಸ್ವಂತ ಇನ್​ಸ್ಟಾಗ್ರಾಮ್, ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. mallamma_talks ಎಂಬ ಸೋಶಿಯಲ್ ಮೀಡಿಯಾ ಖಾತೆ ಹೊಂದಿರೋ ಇವರು, ಇನ್​ಸ್ಟಾಗ್ರಾಮ್​ನಲ್ಲಿ 1.69 ಲಕ್ಷ ಮಂದಿ ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ 16 ಸಾವಿರ ಫಾಲೋವರ್ಸ್​ ಯೂಟ್ಯೂಬ್​​ನಲ್ಲಿದ್ದಾರೆ.
ಹಾಯ್​ ಫ್ರೆಂಡ್ಸ್..
ಮಾತನ್ನೇ ಬಂಡವಾಳವನ್ನಾಗಿ ಮಾಡ್ಕೊಂಡಿರೋ ಮಾತಿನ ಮಲ್ಲಿ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಾಗಿದೆ. ಹಾಯ್​ ಫ್ರೆಂಡ್ಸ್​ ಮಲ್ಲಮ್ಮ ಹಿಯರ್​..
ಅಲ್ಲಿ ಅವರು ಬರುವ ವಿಚಿತ್ರ ವಿಚಿತ್ರ ಸ್ಪರ್ಧಿಗಳಿಗೆ ಹೇಗೆ ಪೈಪೋಟಿ ಕೊಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಜೊತೆಗೆ ಬಿಗ್​ಬಾಸ್​ ಮನೆಯಂಥ ಕೆಲವು ಕಠಿಣ ನಿಯಮಗಳಿಗೆ ಹೊಂದಿಕೊಂಡು ಹೋಗೋದು ಕೂಡ ಸವಾಲ್ ಆಗಿದೆ. ಹೀಗಾಗಿ ಮಲ್ಲಮ್ಮ ಮೇಲೆ ಬಿಗ್​ಬಾಸ್ ವೀಕ್ಷಕರು ಭಾರೀ ನಿರೀಕ್ಷೆ ಇಟ್ಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಹೆಸರು ಇಂದು ಸಂಜೆಯೇ ಘೋಷಣೆ.. ಯಾರಾರು ಬಿಗ್ ಬಾಸ್ ಗೆ ಹೋಗ್ತಾರೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ