/newsfirstlive-kannada/media/media_files/2025/09/28/bigg-boss-kannada-12-2025-09-28-09-06-08.jpg)
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 12 (BBK12) ಇವತ್ತಿನಿಂದ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗಲಿದೆ. ಗ್ರ್ಯಾಂಡ್ ಓಪನಿಂಗ್ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ ರಿಯಾಲಿಟಿ ಶೋ ಪ್ರಸಾರವಾಗಲಿದೆ. ದೊಡ್ಮನೆಗೆ ಎಂಟ್ರಿ ನೀಡ್ತಿರುವ ಸ್ಪರ್ಧಿಗಳನ್ನ ಕಿಚ್ಚ ಸುದೀಪ್ (Kiccha Sudeep) ಇವತ್ತು ಪರಿಚಯ ಮಾಡಿಕೊಡಲಿದ್ದಾರೆ.
ಮೂವರ ಸ್ಪರ್ಧಿಗಳ ಹೆಸರು ರಿವೀಲ್..!
ಕಲರ್ಸ್ ಕನ್ನಡದಲ್ಲಿ ನಿನ್ನೆ ‘ಕ್ವಾಟ್ಲೆ ಕಿಚನ್’ ಫಿನಾಲೆ ನಡೆಯಿತು. ಈ ವೇಳೆ ಬಿಗ್​ಬಾಸ್​ ಮನೆಗೆ ಹೋಗ್ತಿರುವ ಮೂವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಕಲಾವಿದರಾದ ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇನ್ನುಳಿದ ಸ್ಪರ್ಧಿಗಳು ಯಾರು ಅನ್ನೋ ಕ್ಯೂರಿಯಾಸಿಟಿಗೆ ಇವತ್ತು ತೆರೆ ಬೀಳಲಿದೆ.
ಕಾಕ್ರೋಚ್ ಸುಧಿ
ಕಾಕ್ರೋಚ್ ಸುಧಿ ಇವರ ಮೂಲ ಹೆಸರು ಸುಧೀರ್ ಬಾಲರಾಜ್. ಶಿವಣ್ಣ ಅಭಿನಯದ ‘ಟಗರು’ ಸಿನಿಮಾದಲ್ಲಿ ‘ಕಾಕ್ರೋಚ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ಕಾಕ್ರೋಚ್ ಸುಧಿ’ ಎಂದೇ ಖ್ಯಾತರಾದರು. ಇತ್ತೀಚೆಗೆ ಅವರು ನಟಿಸುತ್ತಿರುವ ‘ಚೈಲ್ಡು’ ಚಿತ್ರ ಸೆಟ್ಟೇರಿದೆ. ಅವರು ನಾಯಕರಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಸುಮಾರು 10ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಕಾಕ್ರೋಚ್, ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಅಲ್ಲಿ ವೀಕ್ಷಕರನ್ನ ಹೇಗೆ ರಂಜಿಸುತ್ತಾರೆ ಎಂದು ಕಾದು ನೋಡಬೇಕು.
ಇದನ್ನೂ ಓದಿ:ಬಿಗ್ ಬಾಸ್ ಹೌಸ್ ಮೇಕಿಂಗ್ ವಿಡಿಯೋ ಬಿಡುಗಡೆ.. ಬಿಗ್ ಬಾಸ್ ಹೌಸ್ ಹೇಗಿದೆ? ನೋಡಿ.
ಸಿನಿಮಾದಲ್ಲಿ ವಿಲನ್ ಆಗಿ ಆರ್ಭಟಿಸ್ತಿದ್ದ ಕಾಕ್ರೋಚ್ ಸುಧಿ ಬಿಗ್ ಮನೆಯ ಮೊದಲನೇ ಕಂಟೆಸ್ಟೆಂಟ್.
— Colors Kannada (@ColorsKannada) September 27, 2025
ಬಿಗ್ ಬಾಸ್ GRAND OPENING | ನಾಳೆ ಸಂಜೆ 6 | ಪ್ರತಿ ರಾತ್ರಿ 9:30#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/pjyQAmEtzE
ಮಂಜು ಭಾಷಿಣಿ
ಮಂಜು ಭಾಷಿಣಿ ಕನ್ನಡ ನಟ. ಸಿನಿಮಾ ಹಾಗೂ ಸಿರೀಯಲ್​ಗಳಲ್ಲಿ ನಟಿಸಿದ್ದಾರೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಹೆಸರು ಇಂದು ಸಂಜೆಯೇ ಘೋಷಣೆ.. ಯಾರಾರು ಬಿಗ್ ಬಾಸ್ ಗೆ ಹೋಗ್ತಾರೆ ಗೊತ್ತಾ?
ಬಿಗ್ ಬಾಸ್ ಮನೆಯ ಎರಡನೇ ಕಂಟೆಸ್ಟೆಂಟ್ ಕಿರುತೆರೆ ನಟಿ ಮಂಜು ಭಾಷಿಣಿ
— Colors Kannada (@ColorsKannada) September 27, 2025
ಬಿಗ್ ಬಾಸ್ GRAND OPENING | ನಾಳೆ ಸಂಜೆ 6 | ಪ್ರತಿ ರಾತ್ರಿ 9:30#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/8I3rJAiCHW
ಮಲ್ಲಮ್ಮ
ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದಿರುವ ಮಲ್ಲಮ್ಮಮ ಯಾದಗಿರಿಯಿಂದ ಬಿಗ್​ಬಾಸ್​ ಮನೆಗೆ ಬಂದಿದ್ದಾರೆ. ಮಲ್ಲಮ್ಮ ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದರು. ಅವರು ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದರು. ಇದೀಗ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ವ್ಯಕ್ತಿತ್ವದ ಆಟಕ್ಕೆ ಹಳ್ಳಿಯಿಂದ ಬಿಗ್ ಮನೆಗೆ ಮೂರನೇ ಸ್ಪರ್ಧಿಯಾಗಿ ಬಂದ ಮಲ್ಲಮ್ಮ
— Colors Kannada (@ColorsKannada) September 27, 2025
ಬಿಗ್ ಬಾಸ್ GRAND OPENING | ನಾಳೆ ಸಂಜೆ 6 | ಪ್ರತಿ ರಾತ್ರಿ 9:30#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/4MTuhdbvkt
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ