Advertisment

4 ಫೈನಲಿಸ್ಟ್ ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಚಂದ್ರಪ್ರಭ, ಸತೀಶ್ ಹೆಸರು.. ಉಳಿದ ಸ್ಪರ್ಧಿಗಳು ಶಾಕ್..!

ಬಿಗ್​​ಬಾಸ್ ಮನೆಯಲ್ಲಿ ಈ ವಾರದ ಎಲ್ಲಾ ಟಾಸ್ಕ್​ಗಳು ಮುಕ್ತಾಯಗೊಂಡಿದ್ದು, ಮೊದಲ ನಾಲ್ಕು ಫೈನಲಿಸ್ಟ್​ ಅಭ್ಯರ್ಥಿಗಳ ಆಯ್ಕೆಯಾಗಿದೆ. ಅವರಲ್ಲಿ ಜಂಟಿ ತಂಡದ ಸತೀಶ್ ಹಾಗೂ ಚಂದ್ರಪ್ರಭ ಹೆಸರು ಇದ್ದು, ವಿಷಯ ಕೇಳಿ ಉಳಿದು ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಗಿದ್ದೇನು ಅನ್ನೋ ವಿವರ ಹೀಗಿದೆ..

author-image
Ganesh Kerekuli
Chandraprabha and dog satish
Advertisment

ಬಿಗ್​​ಬಾಸ್ ಮನೆಯಲ್ಲಿ ಈ ವಾರದ ಎಲ್ಲಾ ಟಾಸ್ಕ್​ಗಳು ಮುಕ್ತಾಯಗೊಂಡಿದ್ದು, ಮೊದಲ ನಾಲ್ಕು ಫೈನಲಿಸ್ಟ್​ ಅಭ್ಯರ್ಥಿಗಳ ಆಯ್ಕೆಯಾಗಿದೆ. ಅವರಲ್ಲಿ ಜಂಟಿ ತಂಡದ ಸತೀಶ್ ಹಾಗೂ ಚಂದ್ರಪ್ರಭ ಹೆಸರು ಇದ್ದು, ವಿಷಯ ಕೇಳಿ ಉಳಿದು ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Advertisment

ನಿನ್ನೆ ಪ್ರಸಾರವಾದ ಎಪಿಸೋಡ್​​ನಲ್ಲಿ ಬಿಗ್​ಬಾಸ್​ ಈ ವಿಶೇಷ ಘೋಷಣೆ ಮಾಡಿದ್ದಾರೆ. ಮೊದಲ ವಾರದ ಎಲ್ಲಾ ಸರಣಿ ಟಾಸ್ಕ್​ಗಳು ಮುಕ್ತಾಯಗೊಂಡಿವೆ. ಮೂರು ಟಾಸ್ಕ್​​ಗಳ ಸರಣಿಯ ಅಂತ್ಯದಲ್ಲಿ ನಾಲ್ವರನ್ನ ಫೈನಲಿಸ್ಟ್​ ಆಗಿ ಆಯ್ಕೆ ಮಾಡಲಾಗಿದೆ ಎಂದು ಬಿಗ್​ಬಾಸ್ ತಿಳಿಸಿದರು. 

ಇದನ್ನೂ ಓದಿ:ನಿನ್ನೆ ಒಂದೇ ದಿನ ಕಾಂತಾರ ಚಾಪ್ಟರ್ -1 ಸಿನಿಮಾದಿಂದ 60 ಕೋಟಿ ಗಳಿಕೆ: ಇಂದು 100 ಕೋಟಿ ದಾಟುವ ಕಲೆಕ್ಷನ್‌

ಬಿಗ್​ಬಾಸ್ ನೀಡಿದ ಮೂರು ಟಾಸ್ಕ್​​ಗಳನ್ನು ಒಂಟಿ ತಂಡ ಗೆದ್ದುಕೊಂಡಿದೆ. ಆ ಮೂಲಕ ಜಂಟಿ ತಂಡ ಯಾವುದೇ ಟಾಸ್ಕ್​ಗಳನ್ನು ಗೆದ್ದಿಲ್ಲ. ಒಂಟಿ ತಂಡದಿಂದ ಮಲ್ಲಮ್ಮ, ಧನುಷ್ ಗೌಡ ಹಾಗೂ ಸುಧೀ ಫೈನಲಿಸ್ಟ್ ಆಗಿದ್ದಾರೆ. 

Advertisment

ಇನ್ನು ಜಂಟಿ ತಂಡವು ಯಾವುದೇ ಟಾಸ್ಕ್​ ಗೆಲ್ಲದಿದ್ದರೂ ವಿಶೇಷ ಕೋಟಾದಡಿ ಚಂದ್ರಪ್ರಭ ಮತ್ತು ಸತೀಶ್ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದರು. ಬಳಿಕ ಚಂದ್ರಪ್ರಭ ಹಾಗೂ ಸತೀಶ್ ಹೇಗೆ ಆಯ್ಕೆ ಆದರು ಎಂಬುದನ್ನ ಸ್ಪರ್ಧಿಗಳಿಗೆ ತಿಳಿಸಲು ಹೇಳಿದರು. ಬಿಗ್​ ಬಾಸ್ ನಮ್ಮನ್ನು​ ಕರೆದು ಸ್ಪೆಷಲ್ ಟಾಸ್ಕ್​ ನೀಡಿದ್ದರು. ಅದೇನೆಂದರೆ ಜಂಟಿಗಳ ತಂಡದಲ್ಲಿದ್ದ ನಾವು, ನಮ್ಮ ತಂಡವನ್ನೇ ಸೋಲಿಸಬೇಕಾಗಿತ್ತು. ಬಿಗ್​ಬಾಸ್ ನೀಡಿದ ಮೂರು ಟಾಸ್ಕ್​ಗಳಲ್ಲೂ ನಮ್ಮ ತಂಡ ಸೋಲುವಂತೆ ಮಾಡಿಕೊಂಡೆವು. ಆ ಮೂಲಕ ನಾವು ಗೆಲುವು ಸಾಧಿಸಿದೇವು ಎಂದಿದ್ದಾರೆ. 

ಬಿಗ್​ಬಾಸ್​ ಚಂದ್ರಪ್ರಭ ಹಾಗೂ ಸತೀಶ್ ಕೂಡ ಫೈನಲಿಸ್ಟ್​ ಅಭ್ಯರ್ಥಿಗಳು ಎಂದಾಗ ಉಳಿದ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಕೊನೆಗೆ ವಿಷಯ ಗೊತ್ತಾದ ಮೇಲೆ ಓ.. ಹಿಂಗ್ಯಾ ಅಂತಾ ಉದ್ಘಾರ ತೆಗೆದಿದ್ದಾರೆ! 

ಇದನ್ನೂ ಓದಿ:ಸೆಂಚುರಿ ಬಾರಿಸಿ ಶಿಳ್ಳೆ ಹೊಡೆದ ರಾಹುಲ್.. ತವರಿನಲ್ಲಿ ಈ ಕ್ಷಣಕ್ಕಾಗಿ ಕಾದಿದ್ದು ಎಷ್ಟು ವರ್ಷ ಗೊತ್ತಾ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್ BBK12 Bigg Boss Kannada 12
Advertisment
Advertisment
Advertisment