ನನಗೇ ವೋಟ್ ಜಾಸ್ತಿ ಬಿದ್ದಿದೆ, ಆದರೆ ನಾನೇ ಔಟ್ ಆದೆ..! ಆಕ್ರೋಶ ಹೊರ ಹಾಕಿದ ಮಾಳು

ಬಿಗ್​ ಬಾಸ್​ ಮನೆಯಿಂದ ಹೊರ ಬಂದಿರುವ ಮಾಳು ನಿಪನಾಳ ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನಲ್ಲಿ ತಮ್ಮ ಅನುಭವ ಹಂಚಿಕೊಂಡರು. ನಾನು ಫೈನಲ್​ವರೆಗೂ ಗೆಲ್ಲುವ ಸ್ಪರ್ಧಿ ಆಗಿದ್ದೆ ಎಂದು ಬೇಸರ ಹೊರಹಾಕಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ ಮನೆಯಿಂದ ಹೊರ ಬಂದಿರುವ ಮಾಳು ನಿಪನಾಳ ನ್ಯೂಸ್​ ಫಸ್ಟ್ ನಡೆಸಿದ ವಿಶೇಷ ಸಂದರ್ಶನಲ್ಲಿ ತಮ್ಮ ಅನುಭವ ಹಂಚಿಕೊಂಡರು. ನಾನು ಫೈನಲ್​ವರೆಗೂ ಗೆಲ್ಲುವ ಸ್ಪರ್ಧಿ ಆಗಿದ್ದೆ. ಆದರೆ ನನ್ನನ್ನ ಎಲಿಮಿನೇಟ್ ಮಾಡಿರುವ ವಿಚಾರದಲ್ಲಿ ಬೇಸರ ಇದೆ ಎಂದಿದ್ದಾರೆ. ಬಿಗ್​ ಬಾಸ್​ನಿಂದ ಹೊರ ಬಂದ ದಿನ ನಾನು ನಿದ್ರೆಯೇ ಮಾಡಲಿಲ್ಲ.

ಇದನ್ನೂ ಓದಿ: ನನ್ನ ಬಿಟ್ಟು ಯಾರೇ ಬಿಗ್​ಬಾಸ್ ಗೆದ್ದರೂ ಅದು ಸರಿ ಇಲ್ಲ -ಮಾಳು ಆಕ್ರೋಶ

ನನ್ನ ಎಲ್ಲಾ ಸೋಶಿಯಲ್ ಮೀಡಿಯಾ ಅಕೌಂಟ್​ಗಳನ್ನು ತೆಗೆದು ಕ್ಯಾಲ್ಕುಲೇಟ್ ಮಾಡುತ್ತ ಕೂತಿದ್ದೆ. ಅದನ್ನು ನೋಡಿದಾಗ ಅಲ್ಲಿರುವ ಯಾವುದೇ ಸ್ಪರ್ಧಿಗಿಂತ ನಾನು ಕಡಿಮೆ ಇಲ್ಲ ಅನಿಸಿತು. ನಾನು ಯಾಕೆ ಹೀಗೆ ಆಯಿತು ಅಂತಾ ದಿಗಿಲು ಬಡಿಯಿತು. ಎಷ್ಟೋ ಮಂದಿ ನನ್ನ ಗೆಲುವಿಗಾಗಿ ಹರಕೆ ಹೊತ್ತಿದ್ದಾರೆ. ಫ್ಯಾನ್ಸ್ ಫಾಲೋಯಿಂಗ್ ಜಾಸ್ತಿ ಆಗುತ್ತಲೇ ಇದೆ. ಹೀಗಿದ್ದೂ ಯಾಕೆ ಹೊರಗೆ ಬಂದೆ ಅನ್ನೋದೇ ಗೊತ್ತಾಗ್ತಿಲ್ಲ ಎಂದಿದ್ದಾರೆ. ಮಾಳು ಅವರು ಏನೆಂದು ಹೇಳಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ.. 

ಇದನ್ನೂ ಓದಿ:ನಟಿ ನಂದಿನಿ ಪ್ರಕರಣಕ್ಕೆ ಟ್ವಿಸ್ಟ್​.. ಸಿಕ್ಕ ಡೈರಿಯಲ್ಲಿ ಏನಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Malu Nipanal Bigg boss
Advertisment