/newsfirstlive-kannada/media/media_files/2025/10/07/mallamma-dance-2025-10-07-12-21-33.jpg)
ಬಿಗ್​ಬಾಸ್ ಮಲ್ಲಮ್ಮರ ಕ್ರೇಜ್​ಗೆ ಮೆಚ್ಚಲೇಬೇಕು. ಇದೀಗ ದೊಡ್ಮನೆಯಲ್ಲಿ ಮಾಡಿರುವ ಡ್ಯಾನ್ಸ್ ಒಂದು ಸೋಶಿಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಯುವಕರೂ ನಾಚಿ ನೀರಾಗುವಂತೆ ಮಾಡಿದ ಡ್ಯಾನ್ಸ್ ಇದಾಗಿದ್ದು, ಮಲ್ಲಮ್ಮ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಮಲ್ಲಮ್ಮ ಡ್ಯಾನ್ಸ್ ಮಾಡಿದ ವಿಡಿಯೋ ಪ್ರಸಾರವಾಗಿದೆ. ಬಿಗ್​ಬಾಸ್ ಮನೆಯಲ್ಲಿ ಬೆಳಗ್ಗೆ ಸಾಂಗ್ ಪ್ಲೇ ಮಾಡಲಾಗುತ್ತದೆ. ಇದು ಕೆಲವು ಸ್ಪರ್ಧಿಗಳನ್ನ ಹಾಸಿಗೆಯಿಂದ ಬಡಿದೆಬ್ಬಿಸಿದ್ರೆ, ಇನ್ನು ಕೆಲವ್ರಿಗೆ ಮುಂಜಾನೆಯ ಮೊಬ್ಬಿಗೆ ಜೋಸ್ ತುಂಬುತ್ತದೆ. ಅಂತೆಯೇ ನಿನ್ನೆ ಪ್ರಸಾರವಾದ ಎಕ್ಕಾ ಸಿನಿಮಾದ ‘ಎಕ್ಕಾ ಮಾರ್’ ಹಾಡಿಗೆ ಮಲ್ಲಪ್ಪ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
ಇದನ್ನೂ ಓದಿ: ತನಿಷಾಗೆ ಕ್ಷಮೆ ಕೇಳಿದ ವರ್ತೂರು.. ಇವರಿಬ್ಬರ ಮಧ್ಯೆ ಏನಾಯ್ತು..?
ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಕೈಕೈ ಹಿಡಿದು ಕುಣಿದು ಕುಪ್ಪಳಿಸಿದ್ದು, ಅಭಿಮಾನಿಗಳ ಮುದಗೊಳಿಸಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮಲ್ಲಮ್ಮ ಅವರಿಗೆ ಇರುವ ಕ್ರೇಜ್ ಉಳಿದ ಸ್ಪರ್ಧಿಗಳನ್ನ ಹುರಿದುಂಬಿಸುತ್ತಿದೆ.
ಅದೇ ರೀತಿ ಸಂಭಾಷಣೆಯೊಂದು ವೈರಲ್ ಆಗಿದೆ. ಸೇವಕರು ಮತ್ತು ರಾಜಮಾತೆಯರ ಗಲಾಟೆಯಿಂದ ಮನೆಯಲ್ಲಿ ಬಳಸಿದ ಪಾತ್ರೆಗಳನ್ನೂ ಯಾರೂ ತೊಳೆದಿರಲಿಲ್ಲ. ಅದನ್ನು ನೋಡಿದ ರಕ್ಷಿತಾ ಶೆಟ್ಟಿ, ತಾವು ಯುವರಾಣಿಯಾದರೂ ತೊಳೆಯುತ್ತಿರುತ್ತಾರೆ. ಅಲ್ಲಿಗೆ ಬರುವ ಮಲ್ಲಮ್ಮ, ನೀನ್ಯಾಕೆ ಪಾತ್ರೆ ತೊಳೆಯುತ್ತಿದ್ದೀಯಾ? ನಾವು ತೊಳೆಯಂಗಿಲ್ಲ. ಅದು ಅವರ ಕೆಲಸ. ಬನ್ನಿ ಆಚೆ ಹೋಗೋಣ ಎನ್ನುವ ಮೂಲಕ ಮಲ್ಲಮ್ಮ, ರಕ್ಷಿತಾಗೆ ಬಿಗ್​ಬಾಸ್ ಆಟವನ್ನು ಹೇಳಿಕೊಟ್ಟಿದ್ದಾರೆ.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಯನ್ನೂ ‘ಕಾರ್ಟೂನ್’ ಎಂದು ಕರೆದ ಅಶ್ವಿನಿ ಗೌಡ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ