/newsfirstlive-kannada/media/media_files/2025/10/02/mallamma-2025-10-02-12-18-07.jpg)
ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ನಿಧಾನವಾಗಿ ಬಿರುಸುಗೊಳ್ತಿದೆ. ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡಲು ಮುಂದಾಗಿರುವ ಬಿಗ್​ಬಾಸ್ (Bigg Boss), ಸ್ಪರ್ಧಿಗಳಿಗೆ ನಿತ್ಯವೋ ಒಂದೊಂದು ಸರ್ಪ್ರೈಸಿಂಗ್​ ವಿಚಾರಗಳನ್ನು ಮುಂದಿಡುತ್ತಿದ್ದಾರೆ.
ಹೀಗಾಗಿ ಸ್ಪರ್ಧಿಗಳು ಗೆಲುವಿಗಾಗಿ ತಮ್ಮದೆಯಾದ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ. ಮೊನ್ನೆಯಷ್ಟೇ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್​ಬಾಸ್ ಘೋಷಣೆ ಮಾಡಿದ್ದರು. ಈಗ ವಿಷಯ ಏನಪ್ಪ ಅಂದ್ರೆ ಮಲ್ಲಮ್ಮ (Bigg Boss Mallamma) ಅವರು, ಮೊದಲ ಫಿನಾಲೆ ಕಂಟೆಂಡರ್ ಆಗಿದ್ದಾರೆ.
ಮಲ್ಲಮ್ಮ ಬಿಗ್​​ಬಾಸ್​ಗೆ ಹೋಗಿದ್ದಾರೆ ಅನ್ನೋ ವಿಚಾರ ಗೊತ್ತಾಗುತ್ತಿದ್ದಂತೆಯೇ ಟ್ರೆಂಡಿಂಗ್​ನಲ್ಲಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಕಳೆಯುತ್ತಿರುವ ಪ್ರತಿ ಕ್ಷಣಗಳನ್ನೂ ವೀಕ್ಷಕರು ತಿಳಿದುಕೊಳ್ಳಲು ಕಾಯುತ್ತ ಇರುತ್ತಾರೆ. ಅದಕ್ಕೆ ಕಾರಣ, ಹಳ್ಳಿಗಾಡಿನ ಮಲ್ಲಮ್ಮರ ಮುಗ್ಧತೆ. ದೊಡ್ಡ ಮನೆಯಲ್ಲಿ ಎದುರಾಗುವ ಸವಾಲುಗಳನ್ನು ಅರ್ಥ ಮಾಡಿಕೊಂಡು ಹೇಗೆ ಅದನ್ನು ನಿಭಾಯಿಸಿ ಜನರ ಮನ ಗೆಲ್ಲುತ್ತಾರೆ ಎಂಬ ಕ್ಯೂರಿಯಾಸಿಟಿ ಇದೆ.
ಪ್ರಸ್ತುತ ಮಲ್ಲಮ್ಮ ಅವರಿಗೆ ಬಿಗ್​ಬಾಸ್ ಮನೆ ಅನ್ನೋದು ಯಾವುದೋ ಒಂದು ಹೊಸ ಲೋಕಕ್ಕೆ ಎಂಟ್ರಿ ಕೊಟ್ಟಂತೆ ಆಗಿದೆ. ಅಲ್ಲಿನ ನಿಯಮಗಳು, ಟಾಸ್ಕ್​ಗಳನ್ನ ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಿದ್ದೂ ಅವರು ಫಿನಾಲೆ ಕಂಟೆಂಡರ್​​ ಆಗಿದ್ದಾರೆ. ಅದಕ್ಕೆ ಕಾರಣ ಮಲ್ಲಮ್ಮ ಮೇಲೆ ಉಳಿದ ಸ್ಪರ್ಧಿಗಳಿಗೆ ಇರುವ ಸಿಂಪಥಿ! ಉಳಿದ ಸ್ಪರ್ಧಿಗಳ ಜೊತೆ ಮಲ್ಲಮ್ಮ ಸ್ಪರ್ಧೆ ಮಾಡೋದು ಕಠಿಣ ಆಗಲಿದೆ ಎಂಬುವುದನ್ನ ಅರಿತಿರುವ ಇತರೆ ಸ್ಪರ್ಧಿಗಳು ನೇರವಾಗಿ ಅವರನ್ನು ಫಿನಾಲೆ ಕಂಟೆಂಡರ್​​ ಮಾಡಿದ್ದಾರೆ.
ಬಿಗ್​ಬಾಸ್ ನೀಡಿದ ಚಟುವಟಿಕೆಯಲ್ಲಿ ಎಲ್ಲಾ ಸ್ಪರ್ಧಿಗಳ ಒಕ್ಕೂರಲಿನ ಅಭಿಪ್ರಾಯ ತಿಳಿಸಿರುವ ಅಶ್ವಿನಿ ಗೌಡ, ನಮ್ಮೆಲ್ಲರಿಗೂ ಫಿನಾಲೆಗೆ ಹೋಗುವ ಭರವಸೆ ಇದೆ. ಎಲ್ಲರೂ ಸೇರಿ ನಾವು ಒಮ್ಮತದಿಂದ ಮಲ್ಲಮ್ಮ ಅವರನ್ನು ಸೇವ್ ಮಾಡುತ್ತಿದ್ದೇವೆ ಎಂದಿದ್ದಾರೆ. ಅಂತೆಯೇ ಮಲ್ಲಮ್ಮ ಮೊದಲ ಫಿನಾಲೆ ಕಂಟೆಂಡರ್​ ಆಗಿದ್ದಾರೆ.
ಇದನ್ನೂ ಓದಿ:‘ನನ್ನೋಡು ನನ್ನೋಡು ಅನ್ನೋಕೆ ಮುಖದಲ್ಲಿ ಕೋತಿ ಕುಣಿತಿದ್ಯಾ?’ ಅಶ್ವಿನಿಗೆ ಗಿಲ್ಲಿ ನಟ ಕೌಂಟರ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ