Advertisment

‘ನನ್ನೋಡು ನನ್ನೋಡು ಅನ್ನೋಕೆ ಮುಖದಲ್ಲಿ ಕೋತಿ ಕುಣಿತಿದ್ಯಾ?’ ಅಶ್ವಿನಿಗೆ ಗಿಲ್ಲಿ ನಟ ಕೌಂಟರ್​

ಬಿಗ್​ಬಾಸ್​ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಮಧ್ಯೆ ವಾಗ್ಯುದ್ಧ ಜೋರಾಗಿದೆ. ಇಂದು ಬೆಳಗ್ಗೆ ಕಲರ್ಸ್​ ಕನ್ನಡ ಸ್ಪೆಷಲ್ ಪ್ರೊಮೋ ರಿಲೀಸ್ ಮಾಡಿದ್ದು, ಅದರಲ್ಲಿ ಇಬ್ಬರು ಮಾತಿಗೆ ಮಾತು ಬೆಳಸಿ ಕೂಗಾಡಿಕೊಂಡಿದ್ದಾರೆ.

author-image
Ganesh Kerekuli
Ashwini Gowda
Advertisment

ಬಿಗ್​ಬಾಸ್ (Bigg Boss)​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮಾತಿನ ಜಿದ್ದಾಜಿದ್ದಿಯ ಕಿತ್ತಾಟ ಇವತ್ತೂ ಮುಂದುವರಿದಿದೆ. ಗಿಲ್ಲಿ ನಟ ಹಾಗೂ ಅಶ್ವಿನಿ ನಡುವೆ ಮಾತಿನ ಚಕಮಕಿ ಜೋರಾಗಿದೆ.  

Advertisment

ಇಂದು ಬೆಳಗ್ಗೆ ಕಲರ್ಸ್ ಕನ್ನಡ ಪ್ರೊಮೋ ಒಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಅದರಲ್ಲಿ ಅಡುಗೆ ಮನೆಯ ಸಿಂಕ್ ಗಲೀಜು ವಿಚಾರಕ್ಕೆ ಅಸಮಾಧಾನ ವ್ಯಕ್ತವಾಗಿರೋದನ್ನು ತೋರಿಸಲಾಗಿದೆ. ನಂತರ ಬೆಡ್​ ಮೇಲೆ ಕೂತಿದ್ದ ಅಶ್ವಿನಿ ಗೌಡ, ದರ್ಪ ತೋರಿಸಿ ನಾನು ಇಲ್ಲಿಂದಲೇ  ನೋಡ್ತೀನಿ ಎಂದಿದ್ದಾರೆ. ಆಗ ಧ್ರುವಂತ್, ಸೇವಕರಿಗೆ ಸೇವಕರು ಬೇಕಾಗಿಲ್ಲ ಅಂತಾ ಜೋರಾಗಿ ಕೂಗಿದ್ದಾರೆ. 

ಇದನ್ನೂ ಓದಿ: ಬಿಗ್​ ಬಾಸ್​ಗೆ ಬಿಗ್ ಶಾಕ್ ಕೊಟ್ಟ ಮಲ್ಲಮ್ಮ.. ಈ ಕಾರಣಕ್ಕೆ ಸರಿ ಇಲ್ಲ ಎಂದೇ ಬಿಟ್ಟರು!

bigg boss (1)

ನಂತರ ಲೀವಿಂಗ್ ಏರಿಯಾದಲ್ಲಿ ಸೇವಕರು ಮತ್ತು ಅಧಿಪತಿಗಳು ಎದುರು ಬದುರು ಕೂತು ಮಾತನ್ನಾಡ್ತಿರ್ತಾರೆ. ಆಗ ಮಾತನ್ನಾಡುವ ಅಶ್ವಿನಿ ಗೌಡ.. ನಾವು, ನೀವು ಒಂದೇ ಅಲ್ಲ. ನೀವು ಸೇವಕರು. ಈ ವೇಳೆ ಮಾತಿಗೆ ಮಾತು ಬೆಳೆದಂತೆ ಕಾಣ್ತಿದೆ. ಆಗ ಗಿಲ್ಲಿ ನಟ ಹಾಗೂ ಕಾವ್ಯ ಮೇಲೆ ಆಕ್ರೋಶ ವ್ಯಕ್ತಪಡಿಸುವ ಅಶ್ವಿನಿ ಗೌಡ, ‘ಇಲ್ಲಿ ನನ್ನ ಕಣ್ಣು ಇದೆಯಲ್ವಾ?, ನನ್ನ ಕಣ್ಣನ್ನು ನೋಡಿ.. ನೀವಿಬ್ಬರೂ ನನ್ನನ್ನು ನೋಡಿ’ ಎಂದು ಗದರಿದ್ದಾರೆ. 

Advertisment

ಅದಕ್ಕೆ ತಿರುಗೇಟು ನೀಡುವ ಗಿಲ್ಲಿ ನಟ, ‘ಕೇಳಿಸಿಕೊಳ್ತಿದ್ದೇವೆ, ಅಷ್ಟೇ’ ಎಂದಿದ್ದಾರೆ. ಅದಕ್ಕೆ ಸಿಟ್ಟಿಗೇಳುವ ಅಶ್ವಿನಿ, ‘ಹಾಗಿದ್ದರೆ ನೀವು ಕೇಳಿಸಿಕೊಳ್ಳೋದು ಬೇಡ. ರೂಮ್​​ಗೆ ಹೋಗಿ’ ಎಂದಿದ್ದಾರೆ. ಅದಕ್ಕೆ ಗಿಲ್ಲಿ ನಟ, ‘ಅದನ್ನು ಹೇಳೋಕೆ ನೀವು ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ‘ಗಿಲ್ಲಿ ನೀವು ತಂಬಾ ಮತನ್ನಾಡ್ತಿದ್ದೀರಿ ಎಂದು ಕೈ ಮಾಡಿ ತೋರಿಸಿದ್ದಾರೆ ಅಶ್ವಿನಿ. ಅದಕ್ಕೆ ಸುಮ್ಮನಾಗದ ಗಿಲ್ಲಿ, ‘ನೀವೂ ಕೂಡ ತುಂಬಾ ಮಾತನ್ನಾಡ್ತೀದ್ದೀರಿ’ ಎನ್ನುತ್ತಾರೆ. 

ಇದನ್ನೂ ಓದಿ:ಬಿಗ್​ ಬಾಸ್​ ಮನೆಯಲ್ಲಿ 19 ಕಂಟೆಸ್ಟೆಂಟ್ಸ್​.. ಒಂಟಿಯಾಗಿ ದೊಡ್ಮನೆಗೆ ಎಂಟ್ರಿಯಾದವ್ರು ಯಾರು?

ಅದಕ್ಕೆ ಮತ್ತಷ್ಟು ರೊಚ್ಚಿಗೇಳುವ ಅಶ್ವಿನಿ ಗೌಡ, ‘ನಿಮ್ಮಿಂದಲೇ ನಮ್ಮೆಲ್ಲರ ಊಟ ಕಿತ್ಕೊಂಡಿರೋದು. ಪಶ್ಚಾತಾಪ ಇದೆಯಾ ನಿಮ್ಮಿಬ್ಬರಿಗೂ? ಎಂದು ಆಕ್ರೋಶ ವ್ಯಕ್ತಪಡಿಸ್ತಾರೆ. ಆಗ ಗಿಲ್ಲಿ ನಟ ‘ಇಲ್ಲ’ ಎನ್ನುತ್ತಾರೆ. ನಂತರ ಅಲ್ಲಿಂದ ಆಚೆ ಬರುವ ಗಿಲ್ಲಿ ನಟ ಹಾಗೂ ಕಾವ್ಯ, ಅಶ್ವಿನಿ ಬಗ್ಗೆ ಟೀಕೆ ಮಾಡಿದ್ದಾರೆ. ನನ್ನೋಡು ನನ್ನೋಡು ಅಂತಾರೆ. ಮುಖದಲ್ಲಿ ಕೋತಿ ಕುಣಿತಿದ್ಯಾ? ಎನ್ನುತ್ತ ಸಿಟ್ಟನ್ನು ಹೊರ ಹಾಕಿದ್ದಾರೆ. ಇಂದು ರಾತ್ರಿ ಈ ಹೀಟ್ ಸಂಭಾಷಣೆ ಪ್ರಸಾರವಾಗಲಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

kiccha sudeep Bigg Boss Kannada 12 ಬಿಗ್​ಬಾಸ್ BBK12 Ashwini Gowda Bigg Boss
Advertisment
Advertisment
Advertisment