/newsfirstlive-kannada/media/media_files/2026/01/19/ashwini-gowda-13-2026-01-19-16-28-25.jpg)
ಬಡವರ ಮಕ್ಕಳು ಗೆಲ್ಲಬೇಕು, ನಿಜ! ಆದರೆ ಬಡವರ ಮಕ್ಕಳ ರೀತಿಯಲ್ಲಿ ಗೆಟಪ್ ಹಾಕಿಕೊಂಡು ಗೆಲ್ಲಬಾರದು ಎಂದು ಅಶ್ವಿನಿ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಬಿಗ್​ ಬಾಸ್​ ಫಿನಾಲೆ ಬೆನ್ನಲ್ಲೇ ಅಶ್ವಿನಿ ಗೌಡ ಅವರು ಮಾಧ್ಯಮವೊಂದಕ್ಕೆ ಮಾತನ್ನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅಶ್ವಿನಿ ಆಡಿದ ಮಾತು ಹೀಗಿದೆ..
ಒಂದು ಹೇಳೋದು ಏನು ಅಂದ್ರೆ.. ಸರ್ ಇಲ್ಲಿ ಬಡವರ ಮಕ್ಕಳು ಗೆಲ್ಲಬೇಕು. ಅದು ನಮ್ಮ ಡಾಲಿ ಧನಂಜಯ್ ಅವರು ಹೇಳಿದ ಮಾತು. ಆದರೆ ಗಿಲ್ಲಿ ನಿಜವಾಗಿಯೂ ಬಡವನಾ? ಅದು ಬಹಳ ಮುಖ್ಯವಾಗುತ್ತದೆ. ನಿಜವಾದ ಬಡವ ಬೇರೆ. ಬಡವನ ರೀತಿ ಮುಖವಾಡ ಹಾಕಿಕೊಂಡು ಬದುಕೋದು ಬೇರೆ.
ಹಾಗಾಗಿ ಬಹುಶಃ ಅವರ ಆಟ ಎಲ್ಲರಿಗೂ ಇಷ್ಟವಾಗಿದೆ ಅಂತಾ ಹೇಳೋದಕ್ಕೆ ಇಷ್ಟ ಪಡ್ತೀನಿ. ಗಿಲ್ಲಿ ಬಡವ ಅಂತಾ ಹೇಳಿದ್ರೆ ತಪ್ಪಾಗುತ್ತದೆ. ಅದನ್ನು ನಾವು ಆಟದಲ್ಲಿ ಸ್ಟ್ಯಾಟರ್ಜಿ ಕಾರ್ಡ್ ಆಗಿ ಅದನ್ನು ಬಳಸಬಾರದು. ಇರಲಿ, ಗಿಲ್ಲಿ ಗೆದ್ದಿದ್ದಾರೆ. ಅವರ ಆಟದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ನನಗೆ ಖಂಡಿತವಾಗಿಯೂ ಹೆಮ್ಮೆ ಇದೆ.
ಯಾಕೆಂದರೆ ಅವರೂ ಕೂಡ ನನ್ನ ಜೊತೆ ಪ್ರಯಾಣ ಮಾಡಿದ ಒಬ್ಬ ಪ್ರತಿಸ್ಪರ್ಧಿ. ನಾನು ಯಾವತ್ತೂ ಅವರನ್ನು ಬಿಟ್ಟುಕೊಡಲು ಇಷ್ಟಪಡಲ್ಲ. ಯಾಕೆಂದರೆ ಯುದ್ಧ ಮಾಡಬೇಕಾದರೆ, ಕತ್ತಿಯನ್ನು ಕೈಯಲ್ಲಿ ಇಟ್ಕೊಂಡು ಇರ್ತೀವಿ. ಈಗ ಬಿಗ್ ಬಾಸ್ ಮುಗಿದಿದೆ. ಕತ್ತಿಯನ್ನ ಕೆಳಗೆ ಇಟ್ಟಿರ್ತೀವಿ. ಮತ್ತೆ ಅದನ್ನು ಎತ್ತಿಕೊಳ್ಳಲು ನನಗೆ ಇಷ್ಟವಿಲ್ಲ. ಅವರ ಭವಿಷ್ಯ ಉಜ್ವಲವಾಗಿರಲಿ. ಅವರು ನನ್ನನ್ನು ಅತ್ತೆಯ ಮಗಳು ಎಂದು ಕರೆದಿದ್ದಾರೆ. ನಾನು ಅವರನ್ನು ಮಾವನ ಮಗ ಎಂದು ಕರೆದಿದ್ದೀನಿ. ಎಲ್ಲರಿಗೂ ಒಳ್ಳೆಯದಾಗಲಿ. ಆದರೆ ಆ ಟ್ಯಾಗ್ ಲೈನ್ ಇದೆಯಲ್ಲ. ಬಡವರ ಮಕ್ಕಳು ಗೆಲ್ಲಬೇಕು. ಹೌದು, ನಿಜವಾಗಿಯೂ ಬಡವರ ಮಕ್ಕಳು ಗೆಲ್ಲಬೇಕು. ಬಡವರ ಮಕ್ಕಳ ಹಾಗೆ ಗೆಟಪ್ ಹಾಕಿಕೊಂಡು ಗೆಲ್ಲಬಾರದು. ಅದು ನನಗೆ ಸರಿ ಅನಿಸುತ್ತಿಲ್ಲ.
ಅಶ್ವಿನಿ ಗೌಡ, ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್
ಇದನ್ನೂ ಓದಿ: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್ ನಲ್ಲಿ ಮುಂದೇನಾಗುತ್ತೆ? ಸಂತ್ರಸ್ತರು ದೂರು ಕೊಟ್ಟರೇ ಸಂಕಷ್ಟ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us