/newsfirstlive-kannada/media/media_files/2026/01/11/suraj-singh-2026-01-11-08-40-38.jpg)
ಸೂರಜ್ ಸಿಂಗ್ ಕರ್ನಾಟಕದ ಹೊಸ ಕ್ರಶ್. ಜೆನ್ ಜ್ಹೀ ಹುಡುಗಿಯರ ಮೊಬೈಲ್ ವಾಲ್‌ಪೇಪರ್. ಜೆನ್ ಜ್ಹೀ ಹುಡುಗಿಯರ ಕನಸಿನ ರಾಜ, ಜೆನ್ ಜ್ಹೀ ಹುಡುಗಿಯರ ಹೊಸ ರಣಧೀರ. ಬಿಗ್‌ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್‌ಫುಲ್‌ನಿಂದ ಎದ್ದು ಬಂದ ಆ ಮೊದಲ ಸೀನ್‌ಗೆ ಅದೆಷ್ಟು ಹುಡುಗಿಯರ ಹೃದಯ ಕರಗಿತೋ ಏನೋ. ಮನೇಲಿ ರಾಶಿಕಾ ಹೃದಯ ಕರಗಿತು ಅನ್ನೋದರಲ್ಲಿ ಸಂದೇಹ ಬೇಡಿ ಬಿಡ. ಆ ನಂತರ ಅವರಿಬ್ಬರು ಬೆಸ್ಟ್ ಫ್ರೆಂಡ್ಸ್ ಆದರು. ಈಗ ಇಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಫಸ್ಟ್ ಮೀಟ್ ಯಾವಾಗ ಮಾಡ್ತಾರೆ ಅನ್ನೋದರ ಬಗ್ಗೆ ಕ್ಯೂರಿಯಾಸಿಟಿನೂ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಈಗ ಎಲ್ಲಿ ನೋಡಿದ್ರು, ಸೂರಜ್ ಹೊಸ ಸೀರಿಯಲ್‌ನ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಈ ಮೊದಲು ಇದು ರೂಮರಾ ಅನ್ನೋ ಗುಮಾನಿ ಇತ್ತು. ಈಗ ಪ್ರೊಮೋ ಬಂದ್ಮೇಲೆ ಸತ್ಯವಾಗಿದೆ. ಪವಿತ್ರಾ ಬಂಧ ಸೀರಿಯಲ್ ಮೂಲಕ ಸೂರಜ್ ಸಿಂಗ್ ಲಾಂಚ್ ಆಗಿದ್ದಾರೆ. ಕಂಪನಿಯ ಸಿಇಓ ಪಾತ್ರ ನಿಭಾಯಿಸ್ತಿರೋ ಸೂರಜ್, ದೇವದತ್ ದೇಶಮುಖ್ ಅನ್ನೋ ಆ್ಯಂಟಿ ಹೀರೋ ಕ್ಯಾರೆಕ್ಟರ್‌ನಲ್ಲಿ ಮಿಂಚಲಿದ್ದಾರೆ. ಇಷ್ಟವಿಲ್ಲದ ಹುಡುಗಿಗೆ ತಾಳಿ ಕಟ್ಟುವ ಸೀನ್, ಸೀರಿಯಲ್‌ನ ಕಥಾಹಂದರದ ಇನ್‌ಟೆನ್‌ಸಿಟಿಯನ್ನ ಸಾರಿ ಹೇಳ್ತಿದೆ.
ಇದನ್ನೂ ಓದಿ:ಬಿಗ್ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!
/filters:format(webp)/newsfirstlive-kannada/media/media_files/2025/11/05/suraj-singh-2025-11-05-09-57-10.jpg)
ದಾಸ ಪುರಂದರ ಖ್ಯಾತಿಯ ಅಮೂಲ್ಯ ಭಾರಧ್ವಜ್ ಈ ಸೀರಿಯಲ್‌ಗೆ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಈ ಸೀರಿಯಲ್‌ಗೆ ಬಂಡವಾಳ ಹೂಡಿ, ನಿರ್ದೇಶನ ಮಾಡ್ತಿರುವವರು, ಉತ್ತಮ್ ಮಧು ಅವರು. ಜನಪ್ರಿಯ ಧಾರವಾಹಿಗಳ ನಿರ್ದೇಶನ ಮಾಡಿದ ಅನುಭವ ಅವರಿಗಿದೆ.
ಬಿಗ್‌ಬಾಸ್ ಬಂದ ನಂತರ ಇಂಟರ್‌ವ್ಯೂ ಗಾಗಿ ಸಿಕ್ಕ ಸೂರಜ್ ಆ ನಂತರ ಕಣ್ಮರೆಯಾಗಿದ್ದರು. ಯಾರ ಫೋನ್ ಕೂಡ ರಿಸೀವ್ ಮಾಡ್ತಿಲ್ಲ. ಬಟ್ ನಮ್ಮ ಜೊತೆ ಮಾತನಾಡಿದಾಗ, ಸಿನಿಮಾ ಮತ್ತು ಸೀರಿಯಲ್ ಫೀಲ್ಡ್‌ನಲ್ಲಿ ಕರಿಯರ್ ಬಿಲ್ಡ್ ಮಾಡಿಕೊಳ್ಳೋದೇ ನನ್ನ ಮುಂದಿನ ಗುರಿಯಾಗಿದೆ. ಹಾಗಾಗಿಯೇ ಐಟಿ ಕೆಲ್ಸಕ್ಕೆ ರಿಸೈನ್ ಮಾಡಿ ಬಂದಿದ್ದೇನೆ ಅಂತಾ ಹೇಳಿದ್ದರು.
ಆ ನಂತರ ನಮಗೆ ಸಿಕ್ಕ ಮಾಹಿತಿ ಏನಂದ್ರೆ, ಅವರು ಆ್ಯಕ್ಟಿಂಗ್ ವರ್ಕ್ ಶಾಪ್ ನಲ್ಲಿ ಬ್ಯುಸಿಯಾಗಿದ್ದರು. ಈಗ ಅವರೇ ಹೇಳಿರೋ ಪ್ರಕಾರ, ನಿದ್ರೆಯಿಲ್ಲದೆ ಕೆಲ್ಸ ಮಾಡ್ತಿದ್ದಾರಂತೆ. ಬಿಗ್‌ಬಾಸ್ ಮುಗಿದ ನಂತರ ಸೀರಿಯಲ್ ಲಾಂಚ್ ಮಾಡಲಿದ್ದಾರೆ ಅನ್ನೋ ಮಾಹಿತಿ ನಮಗೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಸೂರಜ್ ನಿಮ್ಮ ಮನೆಗೆ ಮತ್ತೆ ಹೊಸ ಅವತಾರದಲ್ಲಿ ಬರೋದು ಕನ್ಫರ್ಮ್.
ಇದನ್ನೂ ಓದಿ: ಸೀರಿಯಲ್‌ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್..! Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us