ರಾಮಾಚಾರಿ, ದೃಷ್ಟಿಬೊಟ್ಟು ಅಲ್ಲ.. ಕಲರ್ಸ್​​ನ ಇನ್ನೊಂದು ಫೇಮಸ್ ಸೀರಿಯಲ್ ಕೂಡ ವೈಂಡ್​​ಅಪ್​​..?

ಬಿಗ್​​ಬಾಸ್ ಸೀಸನ್ 12ಕ್ಕೆ ಕೌಂಡೌನ್​ ಶುರುವಾಗಿದೆ. ಈ ನಡುವೆ 3 ಧಾರಾವಾಹಿಗಳು ಮುಕ್ತಾಯವಾಗ್ತಿವೆ. ರಾಮಾಚಾರಿ ಹಾಗೂ ದೃಷ್ಟಿಬೊಟ್ಟು ಮುಕ್ತಾಯ ಪಕ್ಕಾಗಿದೆ. ಮತ್ತೊಂದು ಯಾವುದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
ninagagi serial (1)
Advertisment

ಬಿಗ್​​ಬಾಸ್ ಸೀಸನ್ 12ಕ್ಕೆ ಕೌಂಡೌನ್​ ಶುರುವಾಗಿದೆ. ಈ ನಡುವೆ 3 ಧಾರಾವಾಹಿಗಳು ಮುಕ್ತಾಯವಾಗ್ತಿವೆ. ರಾಮಾಚಾರಿ ಹಾಗೂ ದೃಷ್ಟಿಬೊಟ್ಟು ಮುಕ್ತಾಯ ಪಕ್ಕಾಗಿದೆ. ದೃಷ್ಟಿಬೊಟ್ಟು ತನ್ನ ಕೊನೆಯ ಸಂಚಿಕೆಗಳ ಶೂಟಿಂಗ್​ ಮುಗಿಸಿದೆ. ಅಂತಿಮವಾಗಿ ಎಲ್ಲಾ ಕಲಾವಿದರಿಗೆ ವಿದಾಯ ಹೇಳಿದ್ದಾರೆ ನಿರ್ಮಾಪಕರಾದ ನಟ ರಕ್ಷ್​ ಹಾಗೂ ಅವ್ರ ಪತ್ನಿ ಅನುಷಾ.

ದೃಷ್ಟಿಬೊಟ್ಟು ಇದೇ ಸೆಪ್ಟಂಬರ್​ 21 ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಆಗಲಿದೆ. ಇನ್ನು ಸೀರಿಯಲ್​ನಿಂದ ಹೊರಬಂದ ವಿಜಯ್ ಸೂರ್ಯ ಬಿಗ್​​ಬಾಸ್​ಗೆ ಕಾಲಿಡ್ತಿದ್ದಾರೆ ಎಂಬ ಮಾತು ಜೋರಾಗಿದೆ. ಇನ್ನು ರಾಮಾಚಾರಿ ಧಾರಾವಾಹಿ ಅಂತಿಮ ಹಂತ ತಲುಪಿದ್ದು, ಇನ್ನು ಬಿಗ್​ಬಾಸ್​ ಶುರುವಾದ ನಂತರವೂ ಧಾರಾವಾಹಿ ಮೂಡಿಬರಲಿದೆ. ಸಾವಿರದ ಗಡಿ ದಾಟಿದ ನಂತರ ರಾಮಾಚಾರಿಗೆ ವಿದಾಯ ಹೇಳಲಿದ್ದಾರೆ. ಅಂದರೆ ಇನ್ನು, ಸುಮಾರು 60 ಸಂಚಿಕೆಗಳು ಪ್ರಾಸಾರವಾಗಲಿವೆ. 

ಇದನ್ನೂ ಓದಿ:‘ಲಕ್ಷ್ಮಿ ನಿವಾಸ’ದ ಬಗ್ಗೆ ಬೇಸರ ಹೊರ ಹಾಕಿದ ನಟಿ ಅಂಜಲಿ..! ಅಸಲಿಗೆ ಆಗಿದ್ದೇನು?

divya uruduga
ದಿವ್ಯ ಉರುಡುಗ

ಆ ಮೂರನೇ ಧಾರಾವಾಹಿ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದ್ದು, ನಿನಗಾಗಿ ಎನ್ನಲಾಗ್ತಿದೆ. ಹೌದು, ಸಮ್​ಪೃಥ್ವಿ ನಿರ್ದೇಶನದ ದಿವ್ಯಾ ಉರುಡುಗ ಹಾಗೂ ರಿತ್ವಿಕ್​ ಮಠದ್​ ಮುಖ್ಯಭೂಮಿಕೆಯಲ್ಲಿರೋ ನಿನಗಾಗಿ ಕಳೆದ ವರ್ಷ ಅದ್ಧೂರಿಯಾಗಿಯೇ ಲಾಂಚ್​ ಆಗಿತ್ತು. ಹಲವು ತಿರುವುಗಳ ಜೊತೆ ವೀಕ್ಷಕರನ್ನ ರಂಜಿಸಿತ್ತು. ಸದ್ಯ ಮುಕ್ತಾಯದ ಸೂಚನೆ ಸಿಗ್ತಿದೆ.

ಧಾರಾವಾಹಿ ಕಥೆ ವೇಗ ಪಡೆದುಕೊಂಡಿದ್ದು, ದೇವಿ ಸತ್ಯ ಬಯಲು ಮಾಡಿದ್ದಾಳೆ ರಚನಾ. ಅತ್ತ ಬ್ಯುಸಿನೆಸ್​ನಲ್ಲಿ ನಡೀತಿರೋ ಅನ್ಯಾಯದ ಸುಳಿವು ಜೀವಾಗೆ ಸಿಕ್ಕಿದೆ. ಈ ನಡುವೆ ದುಷ್ಟ ಕಪಿಲ್ ಹಂತಹಂತವಾಗಿ ಬದಲಾಗ್ತಿದ್ದಾನೆ. ಈ ಎಲ್ಲಾ ಬೆಳವಣಿಗೆಗಳು ಸೀರಿಯಲ್​ ವಿದಾಯ ಹೇಳ್ತಿರೋದು ಪಕ್ಕಾ ಎನ್ನುವಂತಿದೆ. ಒಟ್ನಲ್ಲಿ ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಲಿದ್ದು, ರಾಮಾಚಾರಿ, ದೃಷ್ಟಿಬೊಟ್ಟು ಹಾಗೂ ನಿನಗಾಗಿ ಮುಕ್ತಾಯಕ್ಕೆ ಸಜ್ಜಾಗಿವೆ.

ಇದನ್ನೂ ಓದಿ:ಬೆಳ್ಳಿ ಗೊಂಬೆಯಾದ ಮಾನ್ಸಿ ಜೋಶಿ.. ಮಿರಮಿರ ಮಿಂಚಿದ ಚೆಂದುಳ್ಳಿ -Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ninagagi serial
Advertisment