/newsfirstlive-kannada/media/media_files/2025/11/10/dhruvant-2025-11-10-15-43-20.jpg)
ಕಳೆದೊಂದು ವಾರದಿಂದ ಅಶ್ವಿನಿ ಗೌಡ ಬಿಗ್‌ಬಾಸ್ ಮನೆಯಲ್ಲಿ ಸೈಲೆಂಟ್ ಆಗುವ ಪ್ರಯತ್ನದಲ್ಲಿದ್ದರೆ ಅವರ ಸ್ಥಾನವನ್ನು ರಿಷಾ ಹಾಗೂ ದ್ರುವಂತ್ ತೆಗೆದುಕೊಂಡಿರುವಂತೆ ಕಾಣಿಸ್ತಿದೆ. ಗಿಲ್ಲಿ ಹಾಗೂ ರಕ್ಷಿತಾರೊಂದಿಗೆ ಜಗಳಕ್ಕೆ ನಿಂತಿದ್ದ ದ್ರುವಂತ್ ಈಗ ರಾಶಿಕಾರನ್ನೂ ಎದುರು ಹಾಕಿಕೊಂಡಿದ್ದಾರೆ.
ದ್ರುವಂತ್ ಆರಂಭದಲ್ಲಿ ಒಳ್ಳೆ ಹುಡುಗ ಅನ್ನೋ ಮುಖವಾಡ ಹಾಕಿಕೊಂಡಿದ್ರೋ ಗೊತ್ತಿಲ್ಲ ಈಗಂತೂ ಅವರ ನಿಜಬಣ್ಣ ಬಯಲಾಗ್ತಿದೆ. ಗಿಲ್ಲಿ ಹಾಗೂ ರಕ್ಷಿತಾರನ್ನು ಟಾರ್ಗೆಟ್ ಮಾಡಿದಂತೆ ಮಾತಾಡುತ್ತಿದ್ದ ಅವರೇ ಈಗ ಎಲ್ಲರ ಟಾರ್ಗೆಟ್ ಆದಂತೆ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: ರಕ್ಷಿತಾ ಕಂಡ್ರೆ ಅಶ್ವಿನಿಗೆ ಯಾಕೆ ಆಗಲ್ಲ -ಅಸಲಿ ವಿಚಾರ ಹೇಳಿದ ಚಂದ್ರಪ್ರಭ -VIDEO
ದ್ರುವಂತ್ ಕಾವ್ಯರೊಂದಿಗೆ ರಾಶಿಕಾ ಬಗ್ಗೆ ಹೇಳಿದ ಮಾತೊಂದು ಈಗ ಅವರ ಬೆನ್ನಿಗೆ ಮುಳುವಾಗಿದೆ. ರಾಶಿಕಾ ಈ ಬಗ್ಗೆ ನೇರವಾಗಿ ದ್ರುವಂತ್ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ದ್ರುವಂತ್ ಕಾವ್ಯ ಜೊತೆಯಲ್ಲಿ ರಾಶಿಕಾ ಅವರು ಮೊದಲು ಅಭಿಷೇಕ್ ಹತ್ರ ಹೋದ್ರು ವರ್ಕ್ ಆಗ್ಲಿಲ್ಲ, ನನ್ನ ಹತ್ರ ಬಂದ್ರು ವರ್ಕ್ ಆಗ್ಲಿಲ್ಲ. ಈಗ ಸೂರಜ್ ಹತ್ರ ಹೋಗಿದ್ದಾರೆ ಎಂದು ಹೇಳಿದ್ದರು.
ಈ ಬಗ್ಗೆ ರಾಶಿಕಾ ನೇರವಾಗಿ ದ್ರುವಂತ್ ಅವರಲ್ಲೇ ಮಾತನಾಡಿದ್ದು, ತಾನು ಹೇಳಿದ್ದರಲ್ಲಿ ತಪ್ಪೇ ಇಲ್ಲ ಅನ್ನೋ ರೀತಿಯಲ್ಲಿ ದ್ರುವ್ ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ ತನಗೆ ಹೆಣ್ಣು ಮಕ್ಕಳೊಂದಿಗೆ ಮಾತನಾಡಿ ಏನೂ ಆಗಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಇದಕ್ಕೆ ಸರಿಯಾಗೇ ಉತ್ತರಿಸಿರುವ ಕಾವ್ಯ ನಿಮಗೆ ಹೆಣ್ಣು ಮಕ್ಕಳೊಂದಿಗೆ ಮಾತನಾಡಲು ಇಷ್ಟ ಇಲ್ಲ ಎಂದಲ್ಲ. ಇಲ್ಲಿರುವ ಯಾವ ಹೆಣ್ಣು ಮಕ್ಕಳಿಗೂ ನಿಮ್ಮೊಂದಿಗೆ ಮಾತನಾಡಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ದ್ರುವಂತ್ ಮೊನ್ನೆಯಿಂದಲೂ ಒಬ್ಬರ ಬಗ್ಗೆ ಇನ್ನೊಬ್ಬರಲ್ಲಿ ಮಾತನಾಡಿಕೊಂಡು ಬರುತ್ತಲೇ ಇದ್ದಾರೆ. ಈ ಮೂಲಕ ಯಾವುದೋ ಹೊಸ ಸ್ಟ್ರಾಟಜಿ ಪ್ಲಾನ್ ಮಾಡಿದಂತೆ ಕಾಣಿಸಿರುವುದು ಸತ್ಯ. ಆದ್ರೆ ಈ ಬಾರಿ ಅವರ ಸ್ಟ್ರಾಟಜಿ ಅವರಿಗೇ ತಿರುಗಿ ಬಿದ್ದಂತೆ ಕಾಣಿಸುತ್ತಿದೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತವರ್ಷಿಣಿ’ ಖ್ಯಾತಿಯ ರಜಿನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us