/newsfirstlive-kannada/media/media_files/2025/11/10/gilli-dhruvant-1-2025-11-10-15-58-22.jpg)
ಬಿಗ್‌ಬಾಸ್ ಮನೆಗೆ ಬಂದ ಆರಂಭದಲ್ಲಿ ದಾನಶೂರ ಕರ್ಣನ ರೀತಿ ಕಾಣುತ್ತಿದ್ದ ದ್ರುವಂತ್ ವಾರಗಳು ಕಳೆಯುತ್ತಿದ್ದಂತೆಯೇ ಹೊಸ ಹೊಸ ಮುಖ ತೋರಿಸುತ್ತಿದ್ದಾರೆ. ಅಷ್ಟಕ್ಕೂ ಗಿಲ್ಲಿ ಹಾಗೂ ರಕ್ಷಿತಾ ಇವ್ರ ಶತ್ರು ಆಗಿದ್ದು ಯಾಕೆ?
ದ್ರುವಂತ್ ಕಳೆದೊಂದೆರಡು ವಾರಗಳಿಂದ ತುಂಬಾ ಬದಲಾದಂತೆ ಕಾಣಿಸುತ್ತಿದ್ದಾರೆ. ಗಿಲ್ಲಿಯೊಂದಿಗೆ ಕಾಲು ಕರೆದು ಜಗಳಕ್ಕೆ ನಿಲ್ಲುತ್ತಿರುತ್ತಾರೆ. ಮಾತ್ರವಲ್ಲ ಮೊನ್ನೆ ಮೊನ್ನೆವರೆಗೂ ತಂಗಿ ತಂಗಿ ಎನ್ನುತ್ತಿದ್ದ ರಕ್ಷಿತಾ ಬಗ್ಗೆಯೂ ಎಲ್ಲರ ಮನದಲ್ಲಿ ಇಲ್ಲಸಲ್ಲದ ಅಭಿಪ್ರಾಯವನ್ನು ತುಂಬುತ್ತಿರುವುದು ಮಾತ್ರವಲ್ಲದೆ ರಕ್ಷಿತಾ ಅಂದ್ರೆ ಫೇಕ್ ಅಂತ ಹೇಳುತ್ತಲೇ ಇರುತ್ತಾರೆ. ಇದೀಗ ರಕ್ಷಿತಾ ಎದುರೇ ನಾಟಕ ಮಾಡ್ತಾಳೆ ಅಂದಿದ್ದಾರಿವರು.
ಇದನ್ನೂ ಓದಿ: ಮಾತೇ ಮುಳುವಾಯ್ತು.. ರಾಶಿಕಾ ಬಗ್ಗೆ ಕೇವಲವಾಗಿ ಮಾತಾಡಿಬಿಟ್ರೆ ಧ್ರುವಂತ್​..? VIDEO
/filters:format(webp)/newsfirstlive-kannada/media/media_files/2025/11/10/gilli-dhruvant-2025-11-10-15-59-10.jpg)
ಗಿಲ್ಲಿ ಮನೆಯಲ್ಲಿ ಬನಿಯನ್ ಹಾಕಿಕೊಂಡು ಸಿಂಪಲ್ ಟೀ ಶರ್ಟ್ ಹಾಕಿಕೊಂಡು ತಿರುಗುತ್ತಿರುತ್ತಾರೆ. ಇದು ಕಿಚ್ಚನ ಪಂಚಾಯ್ತಿಯಲ್ಲೂ ಸುದ್ದಿಯಾಗಿತ್ತು. ಎಲ್ಲ ಬಟ್ಟೆಗಳನ್ನು ತೊಳೆದು ಕೊಡಬೇಕು ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದರು. ಇದೇ ವಿಚಾರವನ್ನು ದ್ರುವಂತ್ ಮನೆಯಲ್ಲಿ ಎತ್ತಿದ್ದು, ನೂರು ಕುರಿ ಸಾಕುತ್ತಿರುವ ಗಿಲ್ಲಿ ಹೀಗೆ ಬನಿಯನ್ ಹಾಕಿಕೊಂಡು ಮೈ ಕೈ ಎಲ್ಲ ಪರಚಿಕೊಂಡು ತಮ್ಮನ್ನು ತಾವು ಏನೆಂದು ಪೋರ್‌ಟ್ರೇ ಮಾಡೋಕೆ ಹೊರಟಿದ್ದಾರೆ ಎಂದು ಕೇಳಿದ್ದಾರೆ.
ರಕ್ಷಿತಾ ಬಗ್ಗೆ ದ್ರುವಂತ್ ಕಿಡಿ ಕಾಡುತ್ತಿರುವುದು ಯಾಕೆ ಎಂದು ಕ್ಯಾಪ್ಟನ್ ಮಾಳು ಕೇಳಿದ ಪ್ರಶ್ನೆಗೂ ಉತ್ತರಿಸಿದ ದ್ರುವಂತ್, ನಾನೂ ಮಂಗಳೂರಿನವನೇ. ಮಂಗಳೂರಲ್ಲಿ ಯಾರೂ ಇವಳ ರೀತಿ ಕನ್ನಡ ಮಾತಾಡಲ್ಲ. ರಕ್ಷಿತಾಗೆ ಶನಿವಾರ ಮಾತ್ರ ಕನ್ನಡ ಬರೋದೆ ಇಲ್ಲ. ಯಾರೊಂದಿಗಾದ್ರೂ ಜಗಳ ಆಡೋಕೆ ಬಿಟ್ರೆ ಸರಾಗವಾಗಿ ಕನ್ನಡ ಮಾತಾಡ್ತಾರೆ ಇದು ನಾಟಕ ಅಲ್ಲದೆ ಇನ್ನೇನಾಗಿರೋಕೆ ಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ; ರಕ್ಷಿತಾ ಕಂಡ್ರೆ ಅಶ್ವಿನಿಗೆ ಯಾಕೆ ಆಗಲ್ಲ -ಅಸಲಿ ವಿಚಾರ ಹೇಳಿದ ಚಂದ್ರಪ್ರಭ -VIDEO
/filters:format(webp)/newsfirstlive-kannada/media/media_files/2025/11/10/dhruvant-2025-11-10-15-43-20.jpg)
ಮನೆಗೆ ಬಂದಾಗ ತುಂಬಾ ಸರಳ ಸಜ್ಜನಿಕೆ ವ್ಯಕ್ತಿಯಂತೆ ಕಾಣುತ್ತಿದ್ದ ದ್ರುವಂತ್ ಇದ್ದಕ್ಕಿದ್ದಂತೆ ಬದಲಾದಂತೆ ಕಾಣಿಸುತ್ತಿದ್ದಾರೆ, ಮಾತ್ರವಲ್ಲ ಅವರ ಮಾತು ನಡವಳಿಕೆ ಎಲ್ಲದರಲ್ಲೂ ಬದಲಾವಣೆಯಾಗಿದೆ. ಇದೂ ನಾಟಕ ಅಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us