ಕರ್ಣ, ಅಣ್ಣಯ್ಯ, ಅಮೃತಧಾರೆ.. ಈ ವಾರ ವೀಕ್ಷಕರ ಹೃದಯಗೆದ್ದ ಸೀರಿಯಲ್ ಯಾವ್ದು ಗೊತ್ತಾ?

ಕನ್ನಡ ಸೀರಿಯಲ್​​ಗಳ ಟಿಆರ್​ಪಿ ಲಿಸ್ಟ್​ ಬಿಡುಗಡೆಯಾಗಿದ್ದು, ಟಾಪ್​ 10 ಸ್ಥಾನದಲ್ಲಿರೋ ಧಾರಾವಾಹಿಗಳ ವಿವರ ಇಲ್ಲಿದೆ. ರಿಯಾಲಿಟಿ ಶೋಗಳಿಗೆ ಬರೋದರೆ ಮಹಾನಟಿ 7, ನಾವು ನಮ್ಮವರು 5, ಕ್ವಾಟ್ಲೇ ಕಿಚನ್​ 3.4 ರೇಟಿಂಗ್​ ಪಡೆದುಕೊಂಡಿವೆ.

author-image
Ganesh Kerekuli
Updated On
Kannada serial TRP
Advertisment

ಕನ್ನಡ ಸೀರಿಯಲ್​​ಗಳ ಟಿಆರ್​ಪಿ ಲಿಸ್ಟ್​ ಬಿಡುಗಡೆಯಾಗಿದ್ದು, ಟಾಪ್​ 10 ಸ್ಥಾನದಲ್ಲಿರೋ ಧಾರಾವಾಹಿಗಳ ವಿವರ ಇಲ್ಲಿದೆ.

ಮೊದಲ ಸ್ಥಾನದಲ್ಲಿ ಕರ್ಣ (9.2 ಟಿಆರ್​ಪಿ), ಎರಡನೇ ಸ್ಥಾನವನ್ನ ಅಣ್ಣಯ್ಯ ಹಾಗೂ ಅಮೃತಧಾರೆ ಹಂಚಿಕೊಂಡಿದ್ದು (9 ಟಿಆರ್​ಪಿ), ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ (8.4 ಟಿಆರ್​ಪಿ), ನಾಲ್ಕನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ (8.2 ಟಿಆರ್​ಪಿ), ಐದನೇ ಸ್ಥಾನದಲ್ಲಿ ಬ್ರಹ್ಮಗಂಟು (6.9 ಟಿಆರ್​ಪಿ), ಆರನೇ ಸ್ಥಾನದಲ್ಲಿ ಶ್ರೀ ರಾಘವೇದ್ರ ಮಹಾತ್ಮೆ (6.5 ಟಿಆರ್​ಪಿ), ಎಳನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು (6 ಟಿಆರ್​ಪಿ), ಏಂಟನೇ ಸ್ಥಾನದಲ್ಲಿ ನಂದಗೋಕುಲ (5.9 ಟಿಆರ್​ಪಿ), ಒಂಭತ್ತನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ (5.7 ಟಿಆರ್​ಪಿ), ಹತ್ತನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 5.3 ಟಿಆರ್​ಪಿ ಪಡೆದುಕೊಂಡಿವೆ.

ಇದನ್ನೂ ಓದಿ: ಕರ್ಣನ ಜರ್ನಿಗೆ 50 ರ ಸಂಭ್ರಮ... ಈ ಸಂಭ್ರಮಲ್ಲಿ ಕರ್ಣನ ಲೈಫ್​ನಲ್ಲಿ ಏನ್​ ನಡೀತಿದೆ..?

karna

ರಾಯರ ಪವಾಡದ ಕಥೆ ಸಾರೋ ಧಾರಾವಾಹಿಗೆ ಲಾಂಚ್​ನಲ್ಲಿ ಕೊಂಚ ನಿರಸ ಪ್ರತಿಕ್ರಿಯೆ ದೊರಕಿದೆ. ಅಂದುಕೊಂಡಷ್ಟು ರೇಟಿಂಗ್​ ಗಳಿಸಿಲ್ಲ. ಭಕ್ತಿ ಪ್ರಧಾನ ಕಥೆಗಳು ನಿಧಾನಕ್ಕೆ ಜನರಿಗೆ ಮುಟ್ಟುತ್ತೆ. ಅದೇ ರೀತಿ ಶ್ರೀ ರಾಘವೇಂದ್ರ ಮಹಾತ್ಮೆ ಕೂಡ ವೀಕ್ಷಕರನ್ನ ತಲುಪುವ ಭರವಸೆ ಮೂಡಿಸಿದೆ.  ಶ್ರೀ ರಾಘವೇಂದ್ರ ಮಹಾತ್ಮೆಗೆ ಸ್ಲಾಟ್​ ಬಿಟ್ಟುಕೊಟ್ಟು ಸಂಜೆ ಸಮಯಕ್ಕೆ ಶಿಫ್ಟ್​ ಆಗಿರೋ ಶ್ರಾವಣಿ ಸುಬ್ರಮಣ್ಯ 4 ರೇಟಿಂಗ್​ ಪಡೆದುಕೊಂಡಿದೆ.

ಕಳೆದವಾರ ಉದಯ ವಾಹಿನಿಯಲ್ಲಿ ಲಾಂಚ್​ ಆಗಿರೋ ಮಾಂಗಲ್ಯ ಧಾರಾವಾಹಿ 3.6 ಟಿಆರ್​ಪಿ ಪಡೆದುಕೊಂಡಿದ್ದು, ಇಷ್ಟು ದಿನ ಉದಯ ವಾಹಿನಿಗೆ ಭರವಸೆ ಮೂಡಿಸಿದೆ ಧಾರಾವಾಹಿ. ಜಗನ್ ಹಾಗೂ ಐಶ್ವರ್ಯ ಪಿಸ್ಸೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ರಿಯಾಲಿಟಿ ಶೋಗಳಿಗೆ ಬರೋದದ್ರೇ ಮಹಾನಟಿ 7, ನಾವು ನಮ್ಮವರು 5, ಕ್ವಾಟ್ಲೇ ಕಿಚನ್​ 3.4 ರೇಟಿಂಗ್​ ಪಡೆದುಕೊಂಡಿವೆ.

ಇದನ್ನೂ ಓದಿ:ಲಕ್ಷೀ ನಿವಾಸದಿಂದ ಭವಿಷ್ ಹೊರಬಂದ ಸಿಕ್ರೇಟ್ ರಿವೀಲ್.. ಹೊಸ ವಿಶ್ವ ಯಾರು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiran raj, karna serial
Advertisment