/newsfirstlive-kannada/media/media_files/2025/11/12/gilli-3-2025-11-12-17-02-26.jpg)
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿಯನ್ನು ಟಫ್ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತೆ. ಆದ್ರೆ ಟಾಸ್ಕ್ ವಿಚಾರಕ್ಕೆ ಬಂದ್ರೆ ಗಿಲ್ಲಿ ಯಾವ ಟೀಂ ಅಲ್ಲಿ ಇರ್ತಾರೋ ಅವ್ರು ಸೋಲೋದು ಗ್ಯಾರಂಟಿ ಅನ್ನೋ ಹಾಗಾಗಿದೆ. ಗಿಲ್ಲಿನೇ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ.
ಈ ವಾರದ ಅದಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತು ಸೇಫ್ ಆಗಿರೋ ಸ್ಪರ್ಧಿಗಳ ನಡುವೆ ಟಾಸ್ಕ್ ಆರಂಭವಾಗಿದ್ದು, ಧನುಷ್, ಅಭಿಷೇಕ್, ರಘು ಹೀಗೆ ಘಟಾನುಘಟಿಗಳೆಲ್ಲ ನಾಮಿನೇಟ್ ಆಗದ ಸ್ಪರ್ಧಿಗಳ ತಂಡದಲ್ಲಿದ್ರು. ಹೀಗಾಗಿ ನಾಮಿನೇಟ್ ಆದ ಸ್ಪರ್ಧಿಗಳು ಸೋಲೋದು ಪಕ್ಕ ಅನ್ನೋದು ಎಲ್ಲರ ಲೆಕ್ಕಾಚಾರವೇ ಆಗಿತ್ತು. ಆದ್ರೆ ಯಾಕೋ ಈ ಲೆಕ್ಕಾಚಾರ ತಲೆಕೆಳಗಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಮಾತಿಗೆ ರೆಸ್ಪೆಕ್ಟೇ ಇಲ್ಲ.. ರಿಷಾ ಇನ್ನೂ ಬುದ್ಧಿ ಕಲಿತಿಲ್ಲ ಎಂದ ಫ್ಯಾನ್ಸ್ -VIDEO
ಬಲಿಷ್ಟ ಸ್ಪರ್ಧಿಗಳು ಇಲ್ಲದ ಹೊರತಾಗಿಯೂ ನಾಮಿನೇಟ್ ಆದ ಸ್ಪರ್ಧಿಗಳ ತಂಡವೇ ಗೆಲ್ತಿದೆ. ಗಿಲ್ಲಿಯೆ ಮುಂದಾಗಿ ಹೋಗಿ ಟಾಸ್ಕ್‌ನಲ್ಲಿ ಆಡಿದ್ರೂ ಅವರಿಂದ ಆಟ ಕಂಪ್ಲೀಟ್ ಮಾಡೋಕೆ ಆಗ್ತಿಲ್ಲ. ಎಲ್ಲರೂ ಗಿಲ್ಲಿ ಕಾರಣದಿಂದಲೇ ತಮಗೆ ಸೋಲಾಗ್ತಿದೆ ಅನ್ನೋ ಮಟ್ಟಕ್ಕೆ ಬಂದಾಗಿದೆ.
ಇಷ್ಟೆ ಆಗಿದ್ರೆ ಪ್ರತಿವಾರವೂ ಗಿಲ್ಲಿಯ ಬಗ್ಗೆ ಇಂತಹದ್ದೊಂದು ಒಪಿನಿಯನ್ ಇದ್ದೇ ಇದೆಯಲ್ಲ ಅನಿಸೋದು ಸಹಜ. ಅದ್ರೀಗ ಸ್ವತಃ ಗಿಲ್ಲಿಗೂ ತಾನಿದ್ದ ಟೀಂ ಸೋಲುತ್ತಾ ಅನ್ನೋ ಅನುಮಾನ ಮೂಡಿದೆ. ಪ್ರತಿ ಟಾಸ್ಕ್ ಆಡುವಾಗಲೂ ಗಿಲ್ಲಿ ಇದ್ರೆ ಸೋಲ್ತೀವಿ ಅಂತಿದ್ರು, ಆದ್ಯಾಕೋ ಈಗ ನನಗೂ ಹಾಗೆ ಅನಿಸೋಕೆ ಶುರುವಾಗಿದೆ. ಇಷ್ಟೆಲ್ಲ ಬಲಿಷ್ಟ ಆಟಗಾರರಿದ್ದೂ ನಾವು ಸೋಲ್ತಿರೋದ್ಯಾಕೆ ಅಂತ ಗಿಲ್ಲಿ ತಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗಿದೆ.
ಗೇಮ್ನಲ್ಲಿ ಸಮಸ್ಯೆ ಇದ್ಯಾ? ಗಿಲ್ಲಿನೇ ಸಮಸ್ಯೆ ಆದ್ರಾ?
— Colors Kannada (@ColorsKannada) November 12, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/XAnK8AKYQh
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us