/newsfirstlive-kannada/media/media_files/2025/11/03/risha-gowda-2025-11-03-17-50-47.jpg)
ಮಾಳು ಕ್ಯಾಪ್ಟನ್ ಆಗುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಿದ್ರು. ರಿಷಾಗೂ ಬಾತ್‌ರೂಂ ತೊಳೆಯುವ ಕೆಲಸ ನೀಡಲಾಗಿತ್ತು. ಆದ್ರೂ ಮಾಡಲ್ಲ ಅಂತ ಕ್ವಾಟ್ಲೆ ತೆಗೀತಿದ್ದಾರೆ.
ಮಾಳು ರಿಷಾಗೆ ಬಾತ್‌ರೂಂ ತೊಳೆಯೋ ಕೆಲ್ಸ ಎಂದು ವಹಿಸಿದಾಗಲೇ ರಿಷಾ ಆಗಲ್ಲ ಎಂದಿದ್ದರು. ಕೊನೆಗೆ ಮೂರು ದಿನಗಳ ನಂತರ ಮಾಡಬೇಕು ಎಂದು ಮಾತಾಗಿತ್ತು. ಇದನ್ನೇ ಇಟ್ಟುಕೊಂಡು ಮಾಳು ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿದ್ದಳು.
ಇದನ್ನೂ ಓದಿ: ಗಿಲ್ಲಿ, ರಕ್ಷಿತಾಗೆ ಹೊರಗಡೆ ಸಿಗ್ತಿರುವ ಸಪೋರ್ಟ್ ಬಗ್ಗೆ ಚಂದ್ರಪ್ರಭ ಹೇಳಿದ್ದೇನು..? VIDEO
ಬಿಗ್‌ಬಾಸ್ ಮನೆ ಅಂದ ಮೇಲೆ ಎಲ್ಲರೂ ಎಲ್ಲ ಕೆಲಸವನ್ನೂ ಹಂಚಿಕೊಂಡು ಮಾಡುವುದು ಅನಿವಾರ್ಯ. ಹೀಗಿದ್ದರೂ ರಿಷಾ ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಮೂರು ದಿನಗಳ ನಂತರವೂ ಬಾತ್‌ರೂಂ ತೊಳೆಯದಿರೋಕೆ ಇಲ್ಲ ಸಲ್ಲದ ಕಾರಣಗಳನ್ನು ನೀಡ್ತಿದ್ದಾರೆ.
ಟಾಸ್ಕ್, ಸ್ಟ್ರಾಟಜಿ ಅನ್ನೋದರಲ್ಲಿ ಬಿಝಿ ಇದ್ದಿದ್ದರಿಂದ ತಾನು ಕ್ಲೀನ್ ಮಾಡೋಕೆ ಆಗಿಲ್ಲ ಅಂತಾರೆ. ನಂತರ ಬೆಳಗ್ಗೆ ಸಂಜೆ ಎರಡು ಟೈ ಕ್ಲೀನ್ ಮಾಡ್ಲೇಬೇಕು ಎಂದು ಮಾಳು ಹೇಳುತ್ತಿದ್ದರೆ, ಆಗೋದೆ ಇಲ್ಲ ಏನ್ ಮಾಡ್ತೀರಾ? ಅಂತ ಮಾಳುಗೆ ತಿರುಗಿಸಿ ಪ್ರಶ್ನೆ ಬೇರೆ ಮಾಡಿದ್ದಾರೆ.
ಹಾಗಾದ್ರೆ ಕ್ಯಾಪ್ಟನ್ ಮಾಳು ಮಾತಿಗೆ ಬೆಲೆಯೇ ಇಲ್ವಾ? ಕಳೆದವಾರವಷ್ಟೇ ಇನ್ನೇನು ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋದ್ರೇನೋ ಅಂದಾಗ ವಾರ್ನಿಂಗ್ ಪಡೆದುಕೊಂಡು ಮನೆಯಲ್ಲಿ ಉಳಿದುಕೊಂಡರು. ಇಷ್ಟಾದ್ರೂ ರಿಷಾ ಬುದ್ದಿ ಬದಲಾಗ್ಲೆ ಇಲ್ವಾ?
ಇದನ್ನೂ ಓದಿ: ಬದುಕು ಮುಗಿಸಿದ ಗಡ್ಡಪ್ಪ.. ಈ ಫೋಟೋಗಳನ್ನ ನೋಡಿ ಗಡ್ಡಪ್ಪನ ಮೆಲುಕು ಹಾಕಿ..!
ಕ್ಯಾಪ್ಟನ್ ಮಾಳು ಮಾತಿಗೆ ಬೆಲೆನೇ ಇಲ್ವಾ?
— Colors Kannada (@ColorsKannada) November 12, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/gVVr0SoBa2
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us