/newsfirstlive-kannada/media/media_files/2025/11/12/priyanka-upednra-2025-11-12-16-17-37.jpg)
ಬೆಂಗಳೂರು: ಉಪೇಂದ್ರ ದಂಪತಿ ಫೋನ್​​​ ಹ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 15ರಂದು ಉಪೇಂದ್ರ ದಂಪತಿ ಫೋನ್ ಹ್ಯಾಕ್ ಆಗಿತ್ತು. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂಪಾಯಿಯನ್ನು ಖದೀಮರು ದೋಚಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಫೋನ್​​​ ಹ್ಯಾಕ್​..​ ಆರೋಪಿ ಅರೆಸ್ಟ್!
ಆನ್​​​​ಲೈನ್​​​​ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಅವರ ಮೊಬೈಲ್​​ಗೆ ಸೈಬರ್ ಖದೀಮರು ಕಾಲ್ ಮಾಡಿ ಮೊಬೈಲ್​​ಗೆ ಲಿಂಕ್ ಕಳುಹಿಸಿದ್ದೇವೆ. ಅದನ್ನು ಓಪನ್ ಮಾಡುವಂತೆ ತಿಳಿಸಿದ್ದಾರೆ.
ಹೌದೆಂದು ನಂಬಿದ ಪ್ರಿಯಾಂಕ, ಲಿಂಕ್ ಓಪನ್ ಮಾಡಿದ್ದಾರೆ. ಲಿಂಕ್ ಓಪನ್ ಮಾಡುತ್ತಿದ್ದಂತೆಯೇ, ವಾಟ್ಸ್​ ಆ್ಯಪ್​ ಹ್ಯಾಕ್ ಆಗಿದೆ. ಪ್ರಿಯಾಂಕಾ ಕಾಂಟಾಕ್ಟ್​ನಲ್ಲಿದ್ದವರಿಗೆ 55 ಸಾವಿರ ಕಳುಹಿಸಿ ಎಂದು ಮೆಸೇಜ್ ಮಾಡಿದ್ದಾರೆ.
ಇತ್ತ ಪ್ರಿಯಾಂಕಾ ಮೆಸೇಜ್ ನೋಡಿ ಕರೆ ಮಾಡಿದವರ ಕಾಲ್ ಕಟ್ ಆಗ್ತಿತ್ತು. ಎಮರ್ಜೆನ್ಸಿ ಇದೆ ಹಣ ಹಾಕಿ ಅಂತ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಮಾಡಿದ್ದರಿಂದ ​ಕೆಲವರು ತುರ್ತಾಗಿ ಅಗತ್ಯ ಇರಬಹುದು ಎಂದು ಹಣ ಕಳುಹಿಸಿದ್ದರು. ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್​​ಗೆ ಐವತ್ತು ಸಾವಿರ ಹಣಹಾಕಿದ್ದರು. ಅದೇ ರೀತಿ ಒಂದೂವರೆ ಲಕ್ಷ ಹಣವನ್ನು ಸೈಬರ್ ವಂಚಕರು ಅಕೌಂಟ್​​ಗೆ ಹಾಕಿಸಿಕೊಂಡಿದ್ದರು.
ಇದನ್ನೂ ಓದಿ: ಬದುಕು ಮುಗಿಸಿದ ಗಡ್ಡಪ್ಪ.. ಈ ಫೋಟೋಗಳನ್ನ ನೋಡಿ ಗಡ್ಡಪ್ಪನ ಮೆಲುಕು ಹಾಕಿ..!
ವಿಚಾರ ಗೊತ್ತಾಗ್ತಿದ್ದಂತೆಯೇ ಗಾಬರಿಯಾಗಿದ್ದ ಉಪೇಂದ್ರ ದಂಪತಿ, ಸದಾಶಿವನಗರ ಠಾಣೆಗೆ ಬಂದು ದೂರು ನೀಡಿದ್ದರು. ಬೆಂಗಳೂರು ಪೊಲೀಸರು ಸೈಬರ್ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಖದೀಮರು ಬಿಹಾರದ ದಶರತಪುರದ ನಿವಾಸಿಗಳು ಎಂದು ಗೊತ್ತಾಗಿತ್ತು. ದಶರತಪುರದ ಗ್ರಾಮದ 20 - 25 ವರ್ಷದ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಗ್ರಾಮದ 150 ಯುವಕರು ಸೈಬರ್ ಅಪರಾಧದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ.. ಸದ್ಯ ಬಿಹಾರದ ದಶರತಪುರದಲ್ಲಿ ಆರೋಪಿ ವಿಕಾಸ್​​ನನ್ನ ಬಂಧಿಸಿ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಮಾತಿಗೆ ರೆಸ್ಪೆಕ್ಟೇ ಇಲ್ಲ.. ರಿಷಾ ಇನ್ನೂ ಬುದ್ಧಿ ಕಲಿತಿಲ್ಲ ಎಂದ ಫ್ಯಾನ್ಸ್ -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us