/newsfirstlive-kannada/media/media_files/2025/08/03/ritvvikk-mathad5-2025-08-03-13-15-56.jpg)
ತಾಯಿ ಹಾಗೂ ಗರ್ಭದಲ್ಲಿರೋ ಮಗುಗೆ ಆರೋಗ್ಯ, ಆಯುಷ್ಯ ಹೆಚ್ಚಲಿ ಅಂತ ಸೀಮಂತ ಕಾರ್ಯಕ್ರಮ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ಪದ್ದತಿ. ಆದ್ರೆ ಉದ್ದೇಶ ಒಂದೇ. ನಮ್ಮ ಸೀರಿಯಲ್ ತಾರೆಯರ ಮನೆಯಲ್ಲೂ ಈ ಸಂಭ್ರಮ ಜೋರಾಗಿಯೇ ನಡೀತಿದೆ. ನಮ್ಮ ಕನ್ನಡ ಕಿರುತೆರೆಯಲ್ಲೂ ಸ್ಟಾರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಶ್ವೇತ ಬಣ್ಣದ ಉಡುಪಿನಲ್ಲಿ ಮಿಂಚಿದ ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾ ನಾಗ್.. ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ!
ಕಿರುತೆರೆಯ 2 ಮುದ್ದಾದ ಜೋಡಿಗಳು ಮಗುವಿನ ನಿರೀಕ್ಷೆಯಲ್ಲಿವೆ. ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ತಾಯಿಯಾಗೋ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ಬ್ಯೂಟಿಫುಲ್ ಫೋಟೋಶೂಟ್ ಮೂಲಕ ಸಿಹಿ ಸುದ್ದಿ ಕೊಟ್ಟಿದ್ರು ನಟಿ.
ತುಂಬು ಗರ್ಭಿಣಿ ರಶ್ಮಿ ಪ್ರಭಾಕರ್ ಅವರ ಸೀಮಂತ ಕಾರ್ಯಕ್ರಮ ಜರುಗಿದೆ. ಕುಟುಂಬದ ಹಿರಿಯರು, ಆತ್ಮೀಯರು ರಶ್ಮಿ ಪ್ರಭಾಕರ್ಗೆ ಆಶೀರ್ವದಿಸಿದ್ದು, ಪತಿ ನಿಖಿಲ್ ಪ್ರೀತಿಯಿಂದ ರಶ್ಮಿ ಪ್ರಭಾಕರ್ಗೆ ಕುಂಕುಮ ಇಟ್ಟು ಅಪ್ಪನ ಸ್ಥಾನಕ್ಕೆ ಭಡ್ತಿ ಪಡಿತಿರೋ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನೂ, ಮತ್ತೊಂದು ಜೋಡಿ ಗಿಣಿರಾಮ, ನಿನಗಾಗಿ ಖ್ಯಾತಿಯ ನಟ ರಿತ್ವಿಕ್ ಮಠದ್ ಸುಮನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದೆ. ರಿತ್ವಿಕ್ ತಂದೆ ಆಗ್ತಿರೋ ಸಂಭ್ರಮದಲ್ಲಿದ್ದಾರೆ. ಪತ್ನಿ ಸುಮನ್ ಅವರಿಗೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ ನಟ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ ನೀಡಲಾಗಿದೆ.. ರಾತ್ರಿಯೆಲ್ಲ ಕಣ್ಣೀರಿಟ್ಟ ಮಾಜಿ ಸಂಸದ..!
ಕಾರ್ಯಕ್ರಮದಲ್ಲಿ ನಿನಗಾಗಿ ಕಲಾವಿದರಾದ ದಿವ್ಯ ಉರುಡುಗ, ಮಗಳ ಪಾತ್ರ ಮಾಡ್ತಿರೋ ಬಾಲ ನಟಿ ಸಿರಿ ಸಿಂಚನ ಕುಟುಂಬ, ರಚನಾ ತಂಗಿ ಪಾತ್ರ ಮಾಡ್ತಿರೋ ಸುಮೋಕ್ಷ ರಾಯನ್, ರೋಹಿ ಕ್ರಿಶ್, ಬಾಲ ಪಾತ್ರ ಮಾಡ್ತಿರೋ ನಟ, ಹಾಗೂ ಚಿಕ್ಕಪ್ಪ ಪಾತ್ರ ಮಾಡ್ತಿರೋ ಪುನೀತ್ ಸೇರಿದಂತೆ ಆತ್ಮಿಯರು ಭಾಗಿಯಾಗಿ ಶುಭ ಕೊರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ