Advertisment

ಜೀ ಕನ್ನಡ ವೀಕ್ಷಕರಿಗೆ ಗುಡ್​​ನ್ಯೂಸ್​.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ..

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಭರ್ಜರಿ ತಯಾರಿ ನಡೀತಿದೆ. ಧಾರಾವಾಹಿ ಟೈಟಲ್​ ಸಣ್ಣ ಟೀಸರ್​ ರಿಲೀಸ್​ ಮಾಡಿದೆ ವಾಹಿನಿ. ಅದುವೆ ಆದಿಲಕ್ಷ್ಮೀ ಪುರಾಣ..

author-image
Ganesh Kerekuli
Adi lakshmi purana (1)
Advertisment

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಭರ್ಜರಿ ತಯಾರಿ ನಡೀತಿದೆ. ಧಾರಾವಾಹಿ ಟೈಟಲ್​ ಸಣ್ಣ ಟೀಸರ್​ ರಿಲೀಸ್​ ಮಾಡಿದೆ ವಾಹಿನಿ.  ಅದೇ ಆದಿಲಕ್ಷ್ಮೀ ಪುರಾಣ..

Advertisment

ಟೈಟಲ್​ನಲ್ಲೇ ಹೇಳುವಂತೆ ಇದೊಂದು ನಾಯಕಿ ಪ್ರಧಾನ ಕಥೆ ಹೊಂದಿದ್ದು, ತುಂಬು ಕುಟುಂಬಕ್ಕೆ ಪ್ರೀತಿಯ ತೋರಣ ಕಟ್ಟೋ ಚಲುವೆ ಯಾರು ಅನ್ನೋದು ಶೀಘ್ರದಲ್ಲೇ ರಿವೀಲ್ ಆಗಲಿದೆ. ಸೀರಿಯಲ್​ನ ನಿರ್ಮಾಣ ಸಂಸ್ಥೆ, ನಿರ್ದೇಶಕರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಿರುತೆರೆಯಲ್ಲಿ ಸಾಲು ಸಾಲು ಸೂಪರ್​ ಹಿಟ್​ ಧಾರಾವಾಹಿಗಳನ್ನ ಕೊಡುಗೆ ನೀಡಿರೋ ಸಂತೋಷ್​ ಕೋಟಿ ನಿರ್ದೇಶನದಲ್ಲಿ ಆದಿಲಕ್ಷ್ಮೀ ಪುರಾಣ ಮೂಡಿಬರಲಿದ್ದು, ತಮ್ಮ ಹೊಸ ನಿರ್ಮಾಣ ಸಂಸ್ಥೆ ಮೂಲಕ ಈ ಧಾರಾವಾಹಿಗೆ ಬಂಡವಾಳ ಹೂಡಿದ್ದಾರೆ ಸಂತೋಷ್​ ಕೋಟಿ ಎನ್ನಲಾಗ್ತಿದೆ. 

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆೆ : ಧ್ರುವಂತ್‌ಗೆ ಸ್ಪಂದನಾ ಜೊತೆ ಗಲಾಟೆಯೇ ಮುಳುವಾಯ್ತು!

Adi lakshmi purana

ಈ ಹಿಂದೆ ಪುಟ್ಟಗೌರಿ ಮದುವೆ, ಅಕ್ಕ, ವಿದ್ಯಾ ವಿನಾಯಕ, ರಾಧಾ ರಮಣ, ನಾಗಕನ್ನಿಕೆ, ಪತ್ತೆಧಾರಿ ಪ್ರತಿಭಾ, ಇಂತಿ ನಿಮ್ಮ ಆಶಾ, ಸರಸು ಸೇರಿದಂತೆ ಹಲವು ಸೂಪರ್​ ಹಿಟ್​ ಸೀರಿಯಲ್​ಗಳಿಗೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ ಸಂತೋಷ್​ ಕೋಟಿ. ಆದಿಲಕ್ಷ್ಮೀ ಪುರಾಣ ಎರಡು ಭಾಷೆಗಳಲ್ಲಿ ಒಟ್ಟಿಗೆ ಶುರುವಾಗ್ತಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರಲಿದೆ. ಆದಿಲಕ್ಷ್ಮೀ ಪುರಾಣ ಮತ್ತಷ್ಟು ಇಂಟ್ರಸ್ಟಿಂಗ್​ ಮಾಹಿತಿಗಳನ್ನ ನಿಮ್ಮ ಮನೆ ಮನೆ ಮೀನಾಕ್ಷಿಯಲ್ಲಿ ನಿರೀಕ್ಷಿಸಿ.

Advertisment

ಇದನ್ನೂ ಓದಿ: ವೈಷ್ಣವಿ ಗೌಡ ಗಂಡನ ಎಷ್ಟು ಪ್ರೀತಿ ಮಾಡ್ತಾರೆ ನೋಡಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Adilakshmi Puran
Advertisment
Advertisment
Advertisment