ನಾನು ಯಾಕೆ ಮತ್ತೆ ಹೋಗಬಾರದು? ಈಗಾಗಲೇ ಬಿಗ್​ಬಾಸ್​ಗೆ ಹೋಗಿ ಎರಡು ವರ್ಷ ಕಳೆದಿದೆ. ನಾನು ತುಂಬಾ ಚೇಂಜ್ ಆಗಿದ್ದೀನಿ. ಇವಾಗ ಹೋದರೆ ತುಂಬಾನೇ ಯೂಸ್​ಫುಲ್ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.
ಅವಕಾಶ ಸಿಕ್ಕರೆ ಮತ್ತೆ ನೀವು ಬಿಗ್​​ಬಾಸ್​ಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಕೇಶ್ ಅಡಿಗ.. ಬಿಗ್​ಬಾಸ್​ ಮನೆಯಲ್ಲಿ ಯಾವುದೇ ಟ್ರೆಸ್ ಇರಲ್ಲ. ಬಿಲ್ ಕಟ್ಟಬೇಕು ಅನ್ನೋದು ಇರಲ್ಲ. ಇಎಂಐ ಕಟ್ಟೋದು ಇರಲ್ಲ. ವಾರ, ವಾರ ಬಂದು ಬೀಳುತ್ತ ಇರುತ್ತೆ. ಆಟ ಆಡಿಸ್ತಾರೆ. ಆಟ ಆಟು. ತಿನ್ನೋಕೆ ಕೊಡ್ತಾರೆ ತಿನ್ನು. ಪರಿಸ್ಥಿತಿಗೆ ಪ್ರತಿಕ್ರಿಯಿಸು. ಇದಕ್ಕಿಂತ ಈಜಿ ಗೇಮ್ ಇನ್ಯಾವುದೂ ಇಲ್ಲ ಎಂದಿದ್ದಾರೆ.
ಇನ್ನು ಬಿಗ್​ಬಾಸ್ ಪ್ರೊಮೋ ರಿಲೀಸ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು.. ತುಂಬಾ ಖುಷಿ ಇದೆ, ಮಸ್ತ್​ ಎಂಟರ್ಟೈನ್ಮೆಂಟ್. ಕೆಲವರು ಹೆಸರು ಇದ್ದೋರು ಹೋಗ್ತಾರೆ. ಇನ್ನೂ ಕೆಲವರು ಹಾಗೆ ಹೋಗ್ತಾರೆ. ಅಲ್ಲಿ ಹೋಗಿ ಕೆಲವರು ವಾಷ್ ಆಗಿ ಬರುತ್ತಾರೆ. ಇನ್ನು ಕೆಲವರು ಹೆಸರನ್ನು ಕೆಡಿಸಿಕೊಂಡು ಬರುತ್ತಾರೆ. ಇದೊಂದು ಪ್ರಯೋಗ. ಬಿಗ್​ ಬಾಸ್ ನೋಡುವಾಗಿ ನಾವು ಪರ್ಸನಲ್ಲಾಗಿ ಯಾರನ್ನೂ ನೋಡಬಾರದು. ಎಲ್ಲರನ್ನೂ ಸಮನಾಗಿ ನೋಡಬೇಕು. ಆಗಲೇ ಮಜಾ ಬರೋದು ಎಂದಿದ್ದಾರೆ.
‘ನಾನು ಮತ್ತು ಗುಂಡ 2’ ಸಿನಿಮಾ ರಿಲೀಸ್​ಗೆ ತಯಾರಾಗಿದೆ. ನಾಳೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ರಾಕೇಶ್ ಅಡಿಗ, ರಚನಾ ಇಂದರ್ ಬಾಲನಟ ಜೀವನ್ ಮುಂತಾದವರು ‘ನಾನು ಮತ್ತು ಗುಂಡ 2’ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡುವ ವೇಳೆ ಬಿಗ್​ಬಾಸ್ ಅನುಭವದ ಬಗ್ಗೆ ರಾಕೇಶ್ ಅಡಿಗ ಮಾತನಾಡಿದರು.
ಇದನ್ನೂ ಓದಿ:ಕಿರುತೆರೆ ನಟ ಆಶಿಶ್​ನನ್ನು ಅರೆಸ್ಟ್ ಮಾಡಿದ ಪೊಲೀಸರು.. ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us