/newsfirstlive-kannada/media/media_files/2025/11/18/ashwini-gowda-jahnavi-2025-11-18-08-59-40.jpg)
ಬಿಗ್​ಬಾಸ್ ಮನೆಯ ಒಳಗೆ ಯಾರೂ ಕೂಡ ಪಿಸುಧ್ವನಿಯಲ್ಲಿ ಮಾತನಾಡುವಂತಿಲ್ಲ. ಇದು ಬಿಗ್ ಬಾಸ್ ಆಟದಲ್ಲಿನ ಮೂಲ ನಿಮಯಗಳಲ್ಲಿ ಒಂದು. ಆದರೆ ಜಾಹ್ನವಿ ಮತ್ತು ಅಶ್ವಿನಿ ಗೌಡಗೆ ಇದು ಲೆಕ್ಕಕ್ಕೇ ಇಲ್ಲ. ಪದೇ ಪದೆ ನಿಯಮಗಳನ್ನು ದಿಕ್ಕರಿಸಿ ಅತಿರೇಕದ ವರ್ತನೆ ಮಾಡ್ತಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಬಿಗ್​ಬಾಸ್, ಮನೆಯಿಂದ ಹೊರ ಹೋಗಲು ನೇರ ನಾಮಿನೇಟ್ ಮಾಡಿದ್ದಾರೆ.
ಡ್ರೆಸಿಂಗ್ ರೂಮ್​ಗೆ ಹೋಗಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಕಳೆದ ಸಂಚಿಕೆಯಲ್ಲಿ ಎಚ್ಚರಿಸಿದ್ದರು. ಅದಕ್ಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಇದು ಬಿಗ್​​ಬಾಸ್​​ನ ಕೋಪಕ್ಕೆ ಕಾರಣವಾಗಿದೆ. 50 ದಿನ ಕಳೆದರೂ ಸದಸ್ಯರು ಮನೆಯ ನಿಯಮ ಮುರಿಯುತ್ತಿದ್ದಾರೆ. ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆ ಮೀರಿಯೂ ಮತ್ತೆ ಪಿಸುದನಿಯಲ್ಲಿ ಮಾತನಾಡಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್​ಬಾಸ್ ಬ್ಯೂಟಿ, ಅರವಿಂದ್ ರೆಡ್ಡಿಗೆ ಇಬ್ಬರಿಗೂ ಶಾಕ್ ಕೊಟ್ಟ ಪೊಲೀಸರು..!
ಅಲ್ಲದೇ ತಪ್ಪು ಮಾಡಿದ ಜಾಹ್ನವಿ ಮತ್ತು ಅಶ್ವಿನಿ ಗೌಡ ವಿಡಿಯೋ ಪ್ರದರ್ಶಿಸಲಾಯಿತು. ಆ ವಿಡಿಯೋ ಪ್ಲೇ ಆಗುವಾಗಲೂ ಅಶ್ವಿನಿ ಗೌಡ ಮತ್ತು ಜಾಹ್ನವಿ ನಗುತ್ತಿದ್ದರು. ಅವರ ಮುಖದಲ್ಲಿ ತಪ್ಪು ಮಾಡಿದ ಭಾವನೆ ಕಾಣುತ್ತಿರಲಿಲ್ಲ. ಇದರಿಂದ ಬಿಗ್ ಬಾಸ್​​ ಇನ್ನಷ್ಟು ಅಸಮಾಧಾನಗೊಂಡರು. ನಂತರ ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಬಿಗ್​​ಬಾಸ್ ಆಟದಲ್ಲಿ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದ್ರೆ ಬಿಗ್​ಬಾಸ್​ ಶಿಕ್ಷೆ ನೀಡುತ್ತಾರೆ. ಕಿಚ್ಚ ಸುದೀಪ್ ಕೂಡ ಸ್ಪರ್ಧಿಗಳಿಗೆ ಆಗಾಗ ಎಚ್ಚರಿಕೆ ನೀಡುತ್ತಿರುತ್ತಾರೆ. ಹೀಗಿದ್ದೂ ಕೆಲವು ಸ್ಪರ್ಧಿಗಳು ತಪ್ಪು ಮಾಡುತ್ತಲೇ ಇರುತ್ತಾರೆ.
ಇದನ್ನೂ ಓದಿ: ‘ಸುಧಿ ಎಲಿಮಿನೇಟ್ ಆಗಲು ಕಾರಣ ಮಾಳುನಾ..’ ಏನಂದ್ರು ಕಾಕ್ರೋಚ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us