/newsfirstlive-kannada/media/media_files/2025/11/16/arvind-reddy-1-2025-11-16-14-21-48.jpg)
ಸ್ಯಾಂಡಲ್​ವುಡ್​ ನಟಿ V/S ನಿರ್ಮಾಪಕ ಅರವಿಂದ್ ರೆಡ್ಡಿ ಜಟಾಪಟಿ ತಾರಕಕ್ಕೇರ್ತಿದೆ. ಸಂತ್ರಸ್ಥೆ ನ್ಯೂಸ್​ಫಸ್ಟ್​​ ಜೊತೆ ಮಾತನಾಡಿ ಅರವಿಂದ್​​ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು. ಈ ಬೆನ್ನಲ್ಲೇ ಪ್ರೆಸ್​​ ಮೀಟ್​ ನಡೆಸಿದ ನಿರ್ಮಾಪಕ ಕೇಸ್​ಗೆ ಟ್ವಿಸ್ಟ್​ ಕೊಟ್ಟಿದ್ದಾರೆ. ಇದಕ್ಕೆ ಸಂತ್ರಸ್ಥೆ ಕೂಡ ಕೌಂಟರ್ ಕೊಟ್ರು. ಪೊಲೀಸ್ರು ಇಂದು ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:KSCA ಚುನಾವಣೆ ಮುಂದೂಡಿಕೆ, ವೆಂಕಟೇಶ್​ ಪ್ರಸಾದ್​ ಆಕ್ರೋಶ..!
/filters:format(webp)/newsfirstlive-kannada/media/media_files/2025/11/16/arvind-reddy-2025-11-16-12-53-33.jpg)
ಸ್ಯಾಂಡಲ್​ವುಡ್​ ನಟಿ, ಬಿಗ್​ಬಾಸ್​ ಬ್ಯೂಟಿ ಮತ್ತು ಉದ್ಯಮಿ, ನಿರ್ಮಾಪಕ ಅರವಿಂದ್ ರೆಡ್ಡಿ ಪ್ರೀತಿ ಪ್ರಕರಣ ಬೀದಿ ರಂಪವಾಗಿದೆ. ನಾನಾ ನೀನಾ ಅಂತ ಕುಸ್ತಿಗೆ ಇಳಿದಿರುವ ಇಬ್ಬರು ಆರೋಪ ಪ್ರತ್ಯಾರೋಪಗಳಲ್ಲೇ ಜಟಾಪಟಿ ಮುಂದುವರೆಸಿದ್ದಾರೆ.
ವಿಚಾರಣೆಗೆ ಹಾಜರಾಗಲು ನೋಟಿಸ್
ಅರವಿಂದ್ ರೆಡ್ಡಿಯಿಂದ ನನ್ನ ಬದುಕೇ ನರಕ ಆಗ್ಬಿಟ್ಟಿದೆ. ‘ನನ್ನನ್ನೇ ನಾನು ನಾಶ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದೇ ಅಂತ ಬಿಗ್​ಬಾಸ್​ ಬ್ಯೂಟಿ, ಅರವಿಂದ್​​ ಏನ್​ ಮಾಡಿದ್ರು. ಆತನಿಂದ ತಾನೆಷ್ಟು ಟಾರ್ಚರ್​​ ಅನುಭವಿಸಿದ್ದೇ ಅಂತ ನ್ಯೂಸ್​​ಫಸ್ಟ್​​​ ಮುಂದೆ ಗಳಗಳನೇ ಕಣ್ಣೀರು ಹಾಕಿದ್ರು. ಆತನ ವಿರುದ್ಧ ಕೇಸ್​​ ದಾಖಲಿಸಿ ಜೈಲಿಗೂ ಕಳಹಿಸಿದ್ರು. ಆದ್ರೆ ಉದ್ಯಮಿ ಆರ್​​ವಿ ಬೇಲ್​ ಪಡೆದು ಹೊರ ಬಂದಿದ್ದೇ ತಡ ನಟಿ ವಿರುದ್ಧ ಸಿಡಿದೆದಿದ್ದರು. ಅವಳಿಗಾಗಿ ನಾನು ಪೋರ್ಷೆ ಕಾರ್​​, ಸೈಟು​, ಮನೆ ಕೊಟ್ಟಿದ್ದೆ.. 3 ಕೋಟಿ ಖರ್ಚು ಮಾಡಿದ್ದೇ ಅಂತ ಹೇಳಿದ್ದ. ಈ ಜಟಾಪಟಿ ಆಗ್ತಿದ್ದಂತೆ. ಗೋವಿಂದರಾಜನಗರ ಪೊಲೀಸರು ಇಬ್ಬರಿಗೂ ನೋಟಿಸ್​​ ನೀಡಿದ್ದಾರೆ.
ನಟಿ, ನಿರ್ಮಾಪಕನಿಗೆ ನೋಟಿಸ್​!
- ಪೋರ್ಷೆ ಕಾರ್​​, ಸೈಟು​, ಮನೆ, ಕೊಟ್ಟಿದ್ದಕ್ಕೆ ದಾಖಲೆ ನೀಡಲು ಸೂಚನೆ
- ಕೇಸ್​​ ಸಂಬಂಧ ಸಾಕ್ಷ್ಯಗಳು ಲಭ್ಯವಿದ್ದಲ್ಲಿ ಒದಗಿಸಲು ಉದ್ಯಮಿಗೆ ಸೂಚನೆ
- ಇಂದು ನಟಿಗೂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​
- ಇಬ್ಬರ ಜಗಳಕ್ಕೆ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ನಟಿ ಆರತಿಗೂ ನೋಟಿಸ್
- ಆರತಿ ಪಡುಬಿದ್ರೆ ಮೇಲೂ ಗಂಭೀರ ಆರೋಪ ಮಾಡಿದ್ದ ಸಂತ್ರಸ್ಥ ನಟಿ
- ನನ್ನನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸಿ ಅರವಿಂದ್​ಗೆ ಶೇರ್​​​ ಆರೋಪ
- ಹೀಗಾಗಿ ಯಾವಾಗ ಫೋಟೋ ರವಾನೆ ಆಯ್ತು ಅನ್ನೋದ್ರ ಬಗ್ಗೆ ತನಿಖೆ
ಇನ್ನು ಮಾಧ್ಯಮದ ಮುಂದೆ ಪ್ರತ್ಯಕ್ಷವಾಗಿದ್ದ ಆರೋಪಿ ಅರವಿಂದ್ ರೆಡ್ಡಿ ನಟಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ರು. ನ್ಯೂಸ್​ ಫಸ್ಟ್ ಜೊತೆಗೂ ಮಾತಾಡಿ ಹಲವು ವಿಚಾರ ಬಹಿರಂಗ ಮಾಡಿದ್ದಾರೆ. ನಾನು ಅವರ ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡಿಲ್ಲ. ಅವರು ಹೇಳಿದಂತೆ ನೂರು ಟ್ಯಾಬ್ಲೆಟ್ ತಿಂದವರು ಯಾರೂ ಬದುಕಲ್ಲ ಎಂದಿದ್ದಾರೆ.
ಇದನ್ನೂ ಓದಿ: BSNL ಅತಿದೊಡ್ಡ ಕೊಡುಗೆ.. ವಿದ್ಯಾರ್ಥಿಗಳಿಗಾಗಿ 100 GB ಡೇಟಾ, ಅನ್​ಲಿಮಿಟೆಡ್​ ಕಾಲ್ಸ್..!
ಒಟ್ಟಾರೆ ಯೋಚನೆ ಮಾಡದೆ ತೆಗೆದುಕೊಳ್ಳೋ ನಿರ್ಧಾರ ಬದುಕನ್ನ ಕಗ್ಗತ್ತಲಿಗೆ ತಳ್ಳಿಬಿಡ್ಬೋದು ಅನ್ನೋದಕ್ಕೆ ಇದು ಉದಾಹರಣೆ. ಈ ಆರೋಪ ಪ್ರತ್ಯಾರೋಪ ಮತ್ಯಾವ ರೂಪ ಪಡೆದುಕೊಳ್ಳುತ್ತೋ? ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us