Advertisment

ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂದು ಜೆಡಿಎಸ್ ಆಕ್ರೋಶ

ಜಾಲಿವುಡ್​ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಸ್ಟುಡಿಯೋಗೆ ಬೀಗ ಜಡಿದಿದ್ದಾರೆ.

author-image
Ganesh Kerekuli
Untitled
Advertisment

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ ಮನೆಗೆ ಬೀಗ ಹಾಕುತ್ತಿದ್ದಂತೆ ಜೆಡಿಎಸ್​​ ಎಕ್ಸ್​​ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಪೋಸ್ಟ್​ ಮಾಡಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್​ ಎಂದು ಜೆಡಿಎಸ್​​ ಪೋಸ್ಟ್​​ ಮಾಡಿದೆ.

Advertisment

ಇದನ್ನೂ ಓದಿ: ಬಿಗ್​​ಬಾಸ್‌ ಮನೆಗೆ ಬೀಗ.. ಈಗ ಸ್ಪರ್ಧಿಗಳು ಏನು ಮಾಡ್ತಿದ್ದಾರೆ..?

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 12 ಶೋ ನಡೆಸುತ್ತಿದ್ದು, ಬಿಗ್‌ಬಾಸ್‌ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಷ್ಟರಲ್ಲಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ತಹಶೀಲ್ದಾರ್, ಬಿಗ್​ಬಾಸ್​ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದು, ಕಂಟೆಸ್ಟಟ್​ಗಳನ್ನ ಮಾಸ್​ ಆಗಿ ಎಲಿಮಿನೇಟ್​ ಮಾಡಿದ್ದಾರೆ.

ಜಾಲಿವುಡ್​ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಸ್ಟುಡಿಯೋಗೆ ಬೀಗ ಜಡಿದಿದ್ದಾರೆ. 

ಇದನ್ನೂ ಓದಿ: ಯಂಗ್ ಬ್ಯಾಟರ್​ ಪೃಥ್ವಿ ಶಾ ಬ್ಯಾಟ್​ನಿಂದ ಬಿಗ್​ ಮೆಸೇಜ್​.. ಸೆಂಚುರಿ ಸಿಡಿಸಿದ ಇಬ್ಬರೂ ಓಪನರ್ಸ್​

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Bigg Boss Kannada 12 kiccha sudeep BBK12 Bigg boss
Advertisment
Advertisment
Advertisment