/newsfirstlive-kannada/media/media_files/2025/11/29/bigg-boss-3-2025-11-29-10-32-40.jpg)
ಬಿಗ್​ ಬಾಸ್ ಇವತ್ತು ಏನು ನಡೆಯಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್​ ಅವರು, ಪಂಚಾಯ್ತಿ ನಡೆಸಿಕೊಡಲು ವೇದಿಕೆಗೆ ಎಂದಿನಂತೆ ಬರುತ್ತಿದ್ದಾರೆ. ಕಿಚ್ಚನ ಪಂಚಾಯ್ತಿಲ್ಲಿ ಏನೆಲ್ಲ ಚರ್ಚೆ ಆಗಲಿದೆ? ಸುದೀಪ್ ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
​ಅತಿಥಿ ಸತ್ಕಾರದಲ್ಲಿ ಸೋತಿದ್ದು ಯಾರು..?
ಬಿಗ್​ಬಾಸ್ ಮನೆಗೆ ಈ ವಾರ ಸೀಸನ್ -11 ಸ್ಪರ್ಧಿಗಳು ಅತಿಥಿಗಳಾಗಿ ಎಂಟ್ರಿ ನೀಡಿದ್ದರು. ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ನೆಪದಲ್ಲಿ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಜತ್ ಕಿಶನ್ ಮನೆಗೆ ಆಗಮಿಸಿದ್ದರು. ಅತಿಥಿಗಳ ಆಗಮನ ಹಿನ್ನೆಲೆಯಲ್ಲಿ ಬಿಗ್ ​ಬಾಸ್​ ಮನೆಯಲ್ಲಿ ಪ್ಯಾಲೆಸ್​ ಆಗಿ ಪರಿವರ್ತನೆ ಮಾಡಲಾಗಿತ್ತು.
ಇದನ್ನೂ ಓದಿ:BBK: ಹೋಗುವಾಗ ಕಣ್ಣೀರಿಟ್ಟ ಮಾಜಿಗಳು.. ಭಾವುಕರಾದ ಹಾಲಿ ಸ್ಪರ್ಧಿಗಳು..! ವಿಡಿಯೋ
ಮಾಜಿ ಸ್ಪರ್ಧಿಗಳು, ಹಳೆಯ ಸ್ಪರ್ಧಿಗಳಿಗೆ ಇನ್ನಿಲ್ಲದ ಕಾಟ ಕೊಟ್ಟಿದ್ದಾರೆ. ಸ್ಪರ್ಧಿಗಳನ್ನು ತಮಗೆ ಹೇಗೆ ಬೇಕೋ ಹಾಗೆ ನಡೆಸಿಕೊಂಡಿದ್ದಾರೆ. ಅತಿಥಿಗಳು ಹೇಳಿದ್ದಕ್ಕೆಲ್ಲ ಸತ್ಕಾರ ಮಾಡೋರು ಕೋಲೆ ಬಸವ ರೀತಿಯಲ್ಲಿ ತಲೆ ಅಲ್ಲಾಡಿಸಿದ್ದಾರೆ. ಆ ಮೂಲಕ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮತನವನ್ನು ಬಿಟ್ಟುಕೊಟ್ಟಿದ್ದಾರೆ. ಅದಕ್ಕೆ ಕಿಚ್ಚ ಕ್ಲಾಸ್ ಏನಾಗಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಮತ್ತೊಂದು ಧ್ರವಂತ್ vs ಸೂರಜ್, ಧನುಷ್, ಸ್ಪಂದನಾ ಮಧ್ಯೆ ಗಲಾಟೆ ಆಗಿದೆ. ಧ್ರುವಂತ್ ಅವರ ಆಕ್ಷೇಪಾರ್ಹ ಪದ ಬಳಕೆಗೆ ಗಲಾಟೆಯಾಗಿದ್ದು, ಅದಕ್ಕೆ ಸುದೀಪ್ ಏನು ಹೇಳ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಮನೆಯಿಂದ ಹೊರ ಹೋಗೋದು ಯಾರು..?
ಕಳೆದ ವಾರ ಮನೆಯಿಂದ ರಿಷಾ ಗೌಡ ಬಿಗ್​ ಬಾಸ್​ನಿಂದ ಔಟ್ ಆಗಿದ್ದರು. ಈ ವಾರ ಯಾರು ಮನೆಗೆ ಹೋಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಒಟ್ಟು ಅಶ್ವಿನಿ ಗೌಡ, ಜಾನ್ವಿ, ಧ್ರುವಂತ್, ಗಿಲ್ಲಿ ನಟ, ಕಾವ್ಯ, ಮ್ಯುಟಂಟ್ ರಘು ಹಾಗೂ ಮಾಳು ಅವರು ನಾಮಿನೇಟ್ ಆಗಿದ್ದಾರೆ. ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, 6 ಮಂದಿ ಸೇವ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ, ಅಭಿಷೇಕ್, ಸ್ಪಂದನಾ, ಧನುಷ್, ರಾಶಿಕಾ, ಸೂರಜ್ ಸೇವ್ ಆಗಿದ್ದಾರೆ.
ಇದನ್ನೂ ಓದಿ: ಸಿದ್ದು-ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್.. ಕ್ಷಣ ಕ್ಷಣದ LIVE UPDATES
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us