‘ನಂದಗೋಕುಲ’ ಗಿರಿಜಾ ರಿಯಲ್ಲಾಗಿ ಹೇಗೆ ಕಾಣ್ತಾರೆ ನೋಡಿ..!

ನಂದಗೋಕುಲ ಕಲರ್ಸ್ ವಾಹಿನಿಯ ನಂಬರ್‌ ಒನ್ ಸೀರಿಯಲ್ ಅನ್ನೋದು ನಿಮಗೆ ಗೊತ್ತಿದೆ. ಸಾಕಷ್ಟು ಜನಪ್ರಿಯತೆ ಪಡೆದಿರುವ ಈ ಸೀರಿಯಲ್‌ನಲ್ಲಿನ ಗಿರಿಜಾ ಪಾತ್ರ ಜನ ಮೆಚ್ಚುಗೆ ಪಡೆದುಕೊಂಡಿದೆ. ಅವರ ರಿಯಲ್ ಗೆಟಪ್‌ ನಿಜಕ್ಕೂ ಬದಲಾಗಿದೆ. ಗಿರಿಜಾ, ರಿಯಲಿ ಗಿರಿಜಾ ಥರ ಕಾಣೋದೇ ಇಲ್ಲ.

author-image
Ganesh Kerekuli
amrutha naidu alias girija (5)
Advertisment

ನಂದಗೋಕುಲ ಕಲರ್ಸ್ ವಾಹಿನಿಯ ನಂಬರ್‌ ಒನ್ ಸೀರಿಯಲ್ ಅನ್ನೋದು ನಿಮಗೆ ಗೊತ್ತಿದೆ. ಸಾಕಷ್ಟು ಜನಪ್ರಿಯತೆ ಪಡೆದಿರುವ ಈ ಸೀರಿಯಲ್‌ನಲ್ಲಿನ ಗಿರಿಜಾ ಪಾತ್ರ ಜನ ಮೆಚ್ಚುಗೆ ಪಡೆದುಕೊಂಡಿದೆ. ಆದ್ರೆ, ಇವರ ಹೇರ್‌ಸ್ಟೈಲ್‌ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿತ್ತು. ಆರಂಭದಲ್ಲಿ ಅವರ ವಿಗ್‌ ಬಗ್ಗೆ ಕುಹಕವಾಡಿದ್ದು ಇದೇ. ಈಗ ಅವರ ರಿಯಲ್ ಗೆಟಪ್‌ ನಿಜಕ್ಕೂ ಬದಲಾಗಿದೆ. ಗಿರಿಜಾ, ರಿಯಲಿ ಗಿರಿಜಾ ಥರ ಕಾಣೋದೇ ಇಲ್ಲ.

ಇದನ್ನೂ ಓದಿ: ಶಿಕ್ಷಣ, ಪಠ್ಯ ಭೋಧನೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಳವಡಿಕೆ ಬಗ್ಗೆ ಕಾನ್ ಕ್ಲೇವ್‌: ದೆಹಲಿಯಲ್ಲಿ ನಾಳೆವರೆಗೂ ಕಾನ್ ಕ್ಲೇವ್‌

amrutha naidu alias girija (4)

ನಂದಗೋಕುಲ ಗಿರಿಜಾ ಬಗ್ಗೆ ಹೇಳೋದೇ ಬೇಡ ಬಿಡಿ. ಜನರಿಗೆ ಅವರ ಆ್ಯಕ್ಟಿಂಗ್ ಇಷ್ಟವಾಗ್ಬಿಟ್ಟಿದೆ. ಹಾಗಾಗಿ, ಅವರ ಬಗ್ಗೆ ಪ್ರತಿಯೊಂದು ಡೀಟೈಲ್‌ ಕೂಡ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸೀರಿಯಲ್‌ನಲ್ಲಿ ಅವರು ವೀಗ್ ಹಾಕುತ್ತಾರೆ ಅನ್ನೋದು ಜನರಿಗೆ ಗೊತ್ತು. ಈ ಬಗ್ಗೆ ನಮ್ ಜೊತೆ ಈ ಹಿಂದೆ ಗಿರಿಜಾ ಅವರೇ ಮಾತನಾಡಿದ್ದರು. ಇದರ ಹಿಂದಿನ ಸೀಕ್ರೆಟ್‌ ಹೇಳಿದ್ದರು.

ಇದನ್ನೂ ಓದಿ:ಟಾರ್ಗೆಟ್​ 300! ಟೀಂ ಇಂಡಿಯಾದ ಕನಸು ಇವತ್ತು ನನಸಾಗುತ್ತಾ..?

amrutha naidu alias girija (2)

ಮಗ ಹುಟ್ಟಿದ ಹಿನ್ನೆಲೆಯಲ್ಲಿ ತಿರುಪತಿಗೆ ಮುಡಿ ಕೊಟ್ಟಿದ್ದರಿಂದ ವಿಗ್‌ ಹಾಕುವ ಪ್ರಮೇಯ ಸೃಷ್ಟಿಯಾಯ್ತು ಅನ್ನೋದನ್ನ ಗಿರಿಜಾ ಪಾತ್ರಧಾರಿ ಅಮೃತಾ ಹೇಳಿದ್ದರು. ಇದು ವಿಗ್‌ನ ಹಿಂದಿರುವ ಕಹಾನಿ. ಶಾರ್ಟ್‌ ಹೇರ್‌ನಲ್ಲಿ ಅಮೃತಾ ನಾಯ್ಡು ಅವರು ಸಖತ್ ಯಂಗ್ ಆಗಿ ಕಾಣಿಸ್ತಿದ್ದಾರೆ. ಸೀರಿಯಲ್ ಲುಕ್‌ ಮತ್ತು ರಿಯಲ್‌ ಲುಕ್‌ನ ಅಕ್ಕಪಕ್ಕ ನೋಡಿದಾಗ, ನಿಮಗೆ ನಿಜಕ್ಕೂ ನಂಬೋಕೆ ಆಗೋಲ್ಲ.

ಸೀರಿಯಲ್‌ನಲ್ಲಿ ಅಭಿನಯಿಸುವ ಅನೇಕ ನಟ - ನಟಿಯರಿಗೆ ಇಂತಹದೊಂದು ಅನುಭವವಾಗುತ್ತೆ. ರಿಯಲ್‌ ಲೈಫ್‌ನಲ್ಲಿ ಅವರು ಏಜೇ ಬೇರೇ ಇರುತ್ತೆ, ಸೀರಿಯಲ್‌ನಲ್ಲಿ ಅವರ ಪಾತ್ರವೇ ಬೇರೇ ರೀತಿ ಇರುತ್ತೆ. ಅಮೃತಾ ಅವರದ್ದು ಕೂಡ. ಅವರ ಮಗ ಇನ್ನೂ ಚಿಕ್ಕವನು. ಬಹುಶಃ ಇನ್ನೂ ಸ್ಕೂಲಿಗೂ ಹೋಗ್ತಿಲ್ಲ. ಆದ್ರೆ, ಸೀರಿಯಲ್‌ನಲ್ಲಿ ನೋಡಿದ್ರೆ, ಅವರ ಮೂವರು ಮಕ್ಕಳಿಗೆ ಮದ್ವೆಯಾಗಿದೆ. ಎಂಥಾ ವಿಚಿತ್ರ ಅಲ್ವಾ..?

ಅದೇನೇ ಇರ್ಲಿ, ಗಿರಿಜಾ ಪಾತ್ರಕ್ಕೆ ಜೀವ ತುಂಬಿರುವ ಅಮೃತಾ ನಾಯ್ಡು ಅವರಿಗೆ ಜನರಿಂದ ಪ್ರಶಂಸೆಗಳ ಸುರಿಮಳೆ ಸಿಗ್ತಿದೆ. ಸೀರಿಯಲ್ ಕೂಡ ಟಾಪ್‌ನಲ್ಲಿರೋದು ಅವರಿಗೆ ಡಬಲ್ ಖುಷಿ ನೀಡಿದೆ.

ಇದನ್ನೂ ಓದಿ:ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 5 ಸಾವಿರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ: ಕರ್ನಾಟಕದಲ್ಲೂ ಹುದ್ದೆಗಳಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Amrutha Naidu
Advertisment