/newsfirstlive-kannada/media/media_files/2026/02/10/krishnapriya-2026-02-10-16-06-36.jpg)
ನಂದಗೋಕುಲ ನಂದನ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೆನೀದು ಈಗಷ್ಟೇ ಮಾಧವನ ಮದುವೆ ಮುಗಿದಿದೆ. ಅದ್ಯಾವ ಗ್ಯಾಪ್​ನಲ್ಲಿ ರಕ್ಷಾ ಮದುವೆಯಾದ್ಲು ಅಂತಾ ಶಾಕ್​ ಆದ್ರಾ. ಕೂಲ್​ ಕೂಲ್. ನಾವ್​ ಹೇಳ್ತಿರೋದು ಸೀರಿಯಲ್​ ಕಥೆ ಅಲ್ಲಾ ನಿಜ ಜೀವನದ ಕಥೆ. ಅಂದ್ರೆ ರಕ್ಷಾ ಪಾತ್ರದಲ್ಲಿ ಅಭಿನಯಿಸ್ತಿರೋ ನಟಿ ಕೃಷ್ಣಪ್ರಿಯಾ ಭಟ್ ಬಗ್ಗೆ..
/filters:format(webp)/newsfirstlive-kannada/media/media_files/2026/02/10/krishnapriya-3-2026-02-10-16-07-16.jpg)
ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗ್ತಿರೋ ನಂದಗೋಕುಲ ಧಾರವಾಹಿ ಎಲ್ಲರಿಗೂ ಗೊತ್ತೆ ಇದೆ. ಸದ್ಯ ನಂದನ ಮಕ್ಕಳಲ್ಲಿ ಮೂವರು ಗಂಡು ಮಕ್ಕಳ ಮದುವೆ ಆಗೋಗಿದೆ. ಇನ್ನು ಉಳಿದಿರೋದು ಮಗಳು ರಕ್ಷಾ ಮಾತ್ರ.. ಮಾಧವ, ಕೇಶವ, ವಲ್ಲಭನ ಮುದ್ದಿನ ತಂಗಿಯಾಗಿ ಅಭಿನಯಿಸ್ತಿರೋ ರಕ್ಷಾ ವೀಕ್ಷಕರ ಮನಗೆದ್ದಿದ್ದಾರೆ. ಇದೀಗ ರಕ್ಷಾ ಅಂದ್ರೆ ರಕ್ಷಾ ಪಾತ್ರದಲ್ಲಿ ಅಭಿನಯಿಸ್ತಿರೋ ನಟಿ ಕೃಷ್ಣಪ್ರಿಯಾ ಭಟ್ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2026/02/10/krishnapriya-1-2026-02-10-16-06-49.jpg)
ನಟಿ ಕೃಷ್ಣಪ್ರಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೋಘ ಎಂಬುವರನ್ನ ಕೃಷ್ಣಪ್ರಿಯಾ ಭಟ್ ವಿವಾಹವಾಗಿದ್ದಾರೆ. ಕಳೆದ ವರ್ಷ ಆಗಸ್ಟ್​​ 24 ರಂದು ಇವರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಫೆಬ್ರವರಿ 6 ರಂದು ಬೆಳ್ತಂಗಡಿಯ ನಾರಾವಿಯಲ್ಲಿರುವ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಅದ್ದೂರಿಯಾಗಿ ಕೃಷ್ಣಪ್ರಿಯಾ ಭಟ್, ಅಮೋಘ ವಿವಾಹ ನೆರವೇರಿದೆ.
/filters:format(webp)/newsfirstlive-kannada/media/media_files/2026/02/10/krishnapriya-2-2026-02-10-16-07-02.jpg)
ನಟಿ ಕೃಷ್ಣಪ್ರಿಯಾ ಭಟ್ ಮದುವೆಯಾಗಿರುವ ಹುಡುಗ ಅಮೋಘ ಅವರು ಇಂಜಿನಿಯರಿಂಗ್​ ಪದವಿ ಪಡೆದುಕೊಂಡಿದ್ದು, ಟಾಟಾ EXXSI ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಟಿ ಕೃಷ್ಣಪ್ರಿಯಾ ಭಟ್ ಮದುವೆ ಫೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ಕಂಡ ನೆಟ್ಟಿಗರು ಜೋಡಿಗೆ ಒಳ್ಲೆಯದಾಗ್ಲಿ ಅಂತ ಶುಭ ಹಾರೈಸಿದ್ದಾರೆ. ಈಗಷ್ಟೇ ವಿವಾಹವಾಗಿರೋ ನಟಿ ಕೃಷ್ಣಪ್ರಿಯಾ ಭಟ್, ಮುಂದಿನ ದಿನಗಳಲ್ಲಿ ನಂದಗೋಕುಲ ಧಾರವಾಹಿಯಲ್ಲಿ ಮುಂದುವರೆಯುತ್ತಾರ ಎಂಬುದನ್ನ ಕಾದುನೋಡಬೇಕಾಗಿದೆ.
ಇದನ್ನೂ ಓದಿ:ಕಾಂತಲಕ್ಷ್ಮೀ ಮನೆಗೆ ವಿವೇಕ್ ಬಂದಾಯ್ತು.. ಬಯಲಾಗುತ್ತಾ ಸುಳ್ಳಿನ ಬಂಡವಾಳ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us