Advertisment

ಮಹಾಸತ್ಯ ಬಯಲು.. ಕುಸಿದು ಬಿದ್ದ ಮಯೂರ.. ಕುತೂಹಲ ಹೆಚ್ಚಿಸಿದ ಗಂಧದ ಗುಡಿ..!

ಶ್ರೀಗಂಧದ ಗುಡಿಯ ಮಯೂರನ ಜನ್ಮರಹಸ್ಯಕ್ಕೆ ತೆರೆ ಬಿದ್ದಿದೆ. ಮಯೂರ ಇಷ್ಟು ದಿನ ಮುತ್ತುರಾಜ್,​ ಕಂಠಿ, ಹರಿ ತನ್ನ ಸ್ವಂತ ಅಣ್ಣಂದಿರು ಅಂತಾ ತಿಳಿದುಕೊಂಡಿದ್ದ. ಆದ್ರೆ ಇದೀಗ ಮಯೂರನ ಮುಂದೆ ಗಂಧದಗುಡಿಯ ಮಹಾಸತ್ಯ ಬಯಲಾಗಿದೆ.

author-image
Ganesh Kerekuli
gandhada gudi
Advertisment

ಶ್ರೀಗಂಧದ ಗುಡಿಯ ಮಯೂರನ ಜನ್ಮರಹಸ್ಯಕ್ಕೆ ತೆರೆ ಬಿದ್ದಿದೆ. ಮಯೂರ ಇಷ್ಟು ದಿನ ಮುತ್ತುರಾಜ್,​  ಕಂಠಿ, ಹರಿ ತನ್ನ ಸ್ವಂತ ಅಣ್ಣಂದಿರು ಅಂತಾ ತಿಳಿದುಕೊಂಡಿದ್ದ. ಆದ್ರೆ ಇದೀಗ ಮಯೂರನ ಮುಂದೆ  ಗಂಧದಗುಡಿಯ ಮಹಾಸತ್ಯ ಬಯಲಾಗಿದೆ. ತಾನು ಸ್ವಂತ ತಮ್ಮ ಅಲ್ಲಾ ಅನ್ನೋದು ಮಯೂರನಿಗೆ ಗೊತ್ತಾಗಿದೆ. ಹಾಗದ್ರೆ ಮುಂದೆ ಮಯೂರ ಏನ್ಮಾಡ್ತಾನೆ? 

Advertisment

ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇ ಡಿನ್ನರ್ ಮುಗಿಸಿ ಮನೆಗೆ ಬಂದು ಪತ್ನಿಯನ್ನ ಬರ್ಬರವಾಗಿ ಮುಗಿಸಿದ; ಆ ರಾತ್ರಿ ನಡೆದಿದ್ದೇನು..?

gandhada gudi (1)

ಗಂಧದಗುಡಿ ಧಾರಾವಾಹಿ ವೀಕ್ಷಕರನ್ನ ಕಾತುರದಿಂದ ಕುಳಿತುಕೊಳ್ಳುವಂತೆ ಮಾಡಿದೆ. ದಿನದಿಂದ ದಿನಕ್ಕೆ ಒಂದೊಂದು ಟ್ವಿಸ್ಟ್​ ಕೊಡುತ್ತಾ ವೀಕ್ಷಕರ ಕುತುಹಲವನ್ನ ಹೆಚ್ಚಿಸ್ತಿದೆ. ಅದ್ರಂತೆ ಇದೀಗ ಮತ್ತೊಂದು ಟ್ವಿಸ್ಟ್​ ಬಂದಿದೆ. ಹೌದು.. ಇಷ್ಟು ದಿನ ಮುಚಿಟ್ಟಿದ್ದ ಮಯೂರನ ಜನ್ಮರಹಸ್ಯ ಬಯಲಾಗಿದೆ. ಇದ್ರಿಂದ ಮಯೂರ ಕುಸಿದು ಬಿದ್ದಿದ್ದಾನೆ. 

ಪೆಟ್ಟಿಗೆಯಲ್ಲಿ ಸಿಕ್ಕ ಹೆಂಗಸಿನ ಪೋಟೊವನ್ನ ಕಂಡ ಚಂದನಾ, ಹರಿ ಇದ್ಯಾರು ನಿಮ್ಮ ಅಮ್ಮನ ರೀತಿ ಕಾಣ್ತಿಲ್ವಾ ಅಂತಾ ಪ್ರಶ್ನಿಸಿದ್ದಾಳೆ. ಅದಕ್ಕೆ ಹರಿ ಇದು ನಮ್ಮ ಅಮ್ಮ ಅಲ್ಲಾ. ನಮ್ಮ ಅಮ್ಮನ ತಂಗಿ ಅಂತಾ ಹೇಳಿದ್ದಾನೆ. ಆದ್ರೆ ಮಯೂರನಿಂದ ಯಾವ ಫೋಟೊವನ್ನ ಮುಚ್ಚಿಡಲೂ ಮನೆಮಂದಿ ಪ್ರಯತ್ನ ಮಾಡಿದ್ರೋ ಆ ಫೋಟೊ ಮಯೂರನಿಗೆ ಸಿಗುತ್ತೆ. ಫೋಟೊ ಕಂಡು ಇದ್ದರಲ್ಲಿರುವ ಮಗು ನಾನು. ಆದ್ರೆ ಈ ಹೆಂಗಸು ಯಾರು ಅಂತಾ ಅಣ್ಣನ ಬಳಿ ಪ್ರಶ್ನೆ ಮಾಡಿದ್ದಾನೆ.  ಈ ವೇಳೆ ತಂದೆ ನಟರಾಜ, ಅವರ ತಾಯಿ ಬೇರೆ , ನಿನ್ನ ತಾಯಿ ಬೇರೆ ಅಂತಾ ಸತ್ಯವನ್ನ ಹೇಳ್ತಾನೆ.

Advertisment

ಇದನ್ನೂ ಓದಿ: SSLC-PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ರಿಸಲ್ಟ್ ಡೇಟ್ ಕೂಡ ಫಿಕ್ಸ್!

gandhada gudi (2)

ನಟರಾಜ್​ ಮಾತು ಕೇಳಿ ಮಯೂರ ಶಾಕ್​ ಆಗ್ತಾನೆ. ನಮ್ಮ ಅಮ್ಮ ನಿಮ್ಮ ಅಮ್ಮ ಬೇರೆನಾ.. ಹಾಗಾದ್ರೆ ನಾನು ನಿಮ್ಮ ಸ್ವಂತ ತಮ್ಮ ಅಲ್ವಾ ಅಂತಾ ಮಯೂರಾ ಅಣ್ಣ ಮುತ್ತು​ ಬಳಿ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಮುತ್ತು, ಹಾಗೇನು ಇಲ್ಲ.  ನಾವೇಲ್ಲ ಒಂದೇ ತಾಯಿಯ ಮಕ್ಕಳು ಎಂದಿದ್ದಾನೆ. ಆದ್ರೆ ಸತ್ಯವನ್ನ ಅರಗಿಸಿಕೊಳ್ಳಲಾಗದೇ ಮಯೂರ ಕುಸಿದು ಬಿದ್ದಿದ್ದಾನೆ.. ಇನ್ನು ಮಯೂರನ್ನ ಕಂಡು ಮನೆಮಂದಿ ಕೂಡ ನೊಂದುಕೊಂಡಿದ್ದಾರೆ.

ನಂತರ ಚಂದನಾ ನಿಜವಾಗ್ಲೂ ಏನಾಗಿತ್ತು ನಿಮ್ಮ ತಂದೆ ಇನ್ನೊಂದು ಮದುವೆಯಾಗಿದ್ರ ಅಂತಾ ಹರಿ ಬಳಿ ಪ್ರಶ್ನೆ ಮಾಡ್ತಾಳೆ.. ಅದಕ್ಕೆ ಹರಿ ಗೊತ್ತಿಲ್ಲಾ.. ಅಪ್ಪ ಜೈಲಿಗೆ ಹೋಗಿ ತುಂಬಾ ದಿನ ಆದ ಮೇಲೆ ಮನೆಗೆ ಬಂದ್ರು. ಬಳಿಕ ಅಣ್ಣನ ಬಳಿ ತಮ್ಮಂದಿರನ್ನ ನೋಡಿಕೋ ಅಂತಾ ಹೇಳಿ ಲಾರಿ ಎತ್ತಿಕೊಂಡ್ರು ಹೋದ್ರು. ಅಪ್ಪ ಯಾವತ್ತು ಮನೆಗೆ ಬರೋದೆ ಇಲ್ಲಾ ಅಂತಾ ಅಂದುಕೊಂಡಿದ್ವಿ.. ಆದ್ರೆ ಒಂದು ದಿನ ಅಪ್ಪ ಮನಗೆ ಬಂದ್ರು.. ಜೊತೆಗ ಒಂದು ಚಿಕ್ಕ ಮಗು ಎತ್ತಿಕೊಂಡು  ಒಂದು ಹೆಂಗಸು ಬಂದ್ಲು.. ನಾವು ಕೇಳಿದ್ದಕ್ಕೆ ಅಮ್ಮನ ತಂಗಿ ಅಂತಾ ಹೇಳ್ದ ಅಂತಾ ಹೇಳಿದ್ದಾನೆ. ಆ ಚಿಕ್ಕ ಮಗುನೇ ಮಯೂರ ಅಂತಾ ಹೇಳಿದ್ದಾನೆ.

gandhada gudi (3)

ಒಟ್ನಲ್ಲಿ ಮಯೂರನ ಮುಂದೆ  ಮಹಾಸತ್ಯ ಬಯಲಾಗಿದೆ.. ಸತ್ಯವನ್ನ ಅರಗಿಸಿಕೊಳ್ಳಲಾಗದೇ ಮಯೂರ ಕುಸಿದು ಬಿದ್ದಿದ್ದಾನೆ... ಮುಂದೆ ಮಯೂರಾ ಏನ್​ ಮಾಡ್ತಾನೆ.. ಹಾಗಾದ್ರೆ ಮಯೂರಾನಾ ತಾಯಿ ಏನಾದ್ಲು... ಮಯೂರಾನಾ ತಾಯಿಗೂ  ನಟರಾಜನಿಗೂ  ಏನು ಸಂಬಂಧ ಅನ್ನೊಂದು ಸದ್ಯಕಿರೋ ಕುತೂಹಲ.

Advertisment

ಇದನ್ನೂ ಓದಿ:ಇಶಾನ್​​​​​​​​​​​​​​​​ ಬಗ್ಗೆ ನಿಮಗೆ ತಿಳಿದಿಲ್ಲ ಈ ವಿಷಯಗಳು.. ಕ್ರಿಕೆಟ್​ ಮೇಲಿನ ವ್ಯಾಮೋಹದಿಂದ ಶಾಲೆ ಬಿಟ್ಟಿದ್ರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

colors kannada, ShreeGandhadagudi, Kannada News
Advertisment
Advertisment
Advertisment