/newsfirstlive-kannada/media/media_files/2026/02/02/muddu-sose-2026-02-02-13-09-54.jpg)
ಹೊಸ ಹೊಸ ತಿರುವು ಪಡೆದುಕೊಳ್ತಿರೋ ಮುದ್ದು ಸೊಸೆ ಧಾರಾವಾಹಿ ವೀಕ್ಷಕರಿಗೆ ದಿನದಿಂದ ದಿನಕ್ಕೆ ಕುತೂಹಲವನ್ನ ಹೆಚ್ಚು ಮಾಡ್ತಿದೆ. ಪ್ರತೀ ಎಪಿಸೋಡ್ ವೀಕ್ಷರನ್ನ ಇಂಪ್ರೆಸ್ ಮಾಡ್ತಿದೆ. ಇದೀಗ ಕಾಡಿನಲ್ಲಿ ವಿದ್ಯಾ ಹಾಗೂ ಭದ್ರೇಗೌಡ ಕಳೆದುಹೋಗಿದ್ದಾರೆ. ಹೌದು ಕಾಡಿಗೆ ಹೋಗಿರೋ ಭದ್ರಾನ ಸುಳಿವಿಲ್ಲದೇ ಮನೆಮಂದಿ ಕಂಗಾಲಾಗಿದ್ದಾರೆ. ತನ್ನ ಗಂಡನನ್ನ ಮನೆಗೆ ಕರೆದುಕೊಂಡು ಬರಬೇಕೆಂದು ದಿಟ್ಟ ನಿರ್ಧಾರ ಮಾಡಿ ವಿದ್ಯಾ ಕೂಡ ಕಾಡಿಗೆ ಹೋಗಿದ್ದಾಳೆ.
ಸೊಸೆ ವಿದ್ಯಾ ಗರ್ಭಿಣಿ ಎಂಬ ವಿಷಯ ತಿಳಿದು ಮನೆ ಮಂದಿ ಆಕೆಯನ್ನು ನಿಧಾನವಾಗಿ ಒಪ್ಪಿ ಮತ್ತೆ ಮನೆಗೆ ಬರುವಂತೆ ಮಾಡಿದ್ದಾರೆ. ವೈದ್ಯರ ಬಳಿ ಚೆಕಪ್ ಮಾಡಿಸಿದ ವಿದ್ಯಾಳಿಗೆ, ತಾನು ಗರ್ಭಿಣಿ ಅಲ್ಲ. ಇಷ್ಟು ದಿನ ತನ್ನ ತಾಯಿ ಎಲ್ಲರಿಗೂ ಸುಳ್ಳು ಹೇಳಿ ಮೋಸ ಮಾಡಿದ್ಲು ಎಂಬುದು ಗೊತ್ತಾಗಿದೆ. ಒಮ್ಮೆ ಮನೆಯವರ ಕೋಪಕ್ಕೆ ಗುರಿಯಾಗಿದ್ದ ವಿದ್ಯಾಳಿಗೆ ಈ ವಿಷಯವೂ ಗೊತ್ತಾದ್ರೆ ಮುಂದೆನಾಗುತ್ತೆ ಎಂಬ ಆತಂಕ ಇದೆ.
ಭದ್ರೇಗೌಡನಿಗೆ ತಂದೆಯಾಗ್ತಿರೋ ಸಂಭ್ರಮ. ಅದ್ರಲ್ಲೂ ತನ್ನ ತಾಯಿಯೇ ವಿದ್ಯಾ ಹೊಟ್ಟೆಯಲ್ಲಿ ಹುಟ್ಟಿ ಬರಬೇಕೆಂಬ ಬಯಕೆ ಭದ್ರೇಗೌಡನದ್ದು. ಈ ನಡುವೆ, ತಾಯಮ್ಮ, ಕಾಡಿನಲ್ಲಿ ಚಂದ್ರಕಿರಣವೆಂಬ ಹೂ ಸಿಗುತ್ತೆ. ಆ ಹೂವನ್ನ ತಂದು ಪೂಜೆ ಮಾಡಿ ದೀಪ ಹಚ್ಚಬೇಕು. ದೀಪ ಉರಿದ್ರೆ ಅವರಿಗೆ ಹೆಣ್ಣು ಮಗು ಆಗುತ್ತೆ ಎಂಬ ನಂಬಿಕೆ ಇದೆ ಎಂದು ಹೇಳ್ತಾರೆ. ಹೆಣ್ಣು ಮಗು ಬೇಕು ಎಂದು ಹಂಬಲಿಸ್ತಿರೋ ಭದ್ರ, ರಾತ್ರೋರಾತ್ರಿ ವಿಶೇಷ ಹೂ ಹುಡುಕಿ ಕಾಡಿಗೆ ಹೋಗ್ತಾನೆ.
ಇದನ್ನೂ ಓದಿ: IND vs PAK ಪಂದ್ಯ ರದ್ದಾದರೆ ₹4,500 ಕೋಟಿ ನಷ್ಟ! ಕ್ರಿಕೆಟ್ ಜಗತ್ತಿಗೆ ಪಾಕ್ ಹೇಗೆ ಬೆದರಿಕೆ ಹಾಕ್ತಿದೆ..?
/filters:format(webp)/newsfirstlive-kannada/media/post_attachments/wp-content/uploads/2025/02/trivikram-1.jpg)
ಭದ್ರೇಗೌಡನ ಸುಳಿವಿಲ್ಲದೇ ಮನೆಯವರು ಟೆಶ್ಯನ್​ ಆಗ್ತಾರೆ. ಈ ನಡುವೆ ತನ್ನ ಪತಿಯನ್ನ ಹುಡುಕಿಕೊಂಡು ಬರಬೇಕೆಂದು ವಿದ್ಯಾ ಪತ್ರ ಬರೆದಿಟ್ಟು, ತಾನು ಕೂಡ ಕಾಡಿಗೆ ಹೋಗ್ತಾಳೆ. ಕಾಡಿನಲ್ಲಿ ಗಂಡನಿಗಾಗಿ ಹುಡುಕಾಡ್ತಾಳೆ. ಇತ್ತ ಭದ್ರನ ವಿರುದ್ಧ ಈಶ್ವರಿ ಹೊಸ ಪಿತೂರಿ ಮಾಡ್ತಾಳೆ.. ಭದ್ರೇಗೌಡನ ಬಗ್ಗೆ ಅಪಪ್ರಚಾರ ಮಾಡೋ ಪ್ಲಾನ್​ ಮಾಡ್ತಾಳೆ...
ಈ ನಡುವೆ ಭದ್ರೇಗೌಡ ಆನೆ ಕಾಟದಿಂದ ಬೇಸತ್ತು ಮರವನ್ನೇರಿ ಆನೆ ಬರುತ್ತಾ ಎಂದು ನೋಡ್ತಾ ಇರ್ತಾನೆ. ಇನ್ನು, ವಿದ್ಯಾ ಪತಿಯನ್ನ ಹುಡುಕಿಕೊಂಡು ಬರುವಾಗ ಆಕೆಯ ಮುಂದೆ ಆನೆ ಕಾಣಿಸಿಕೊಳ್ಳುತ್ತೆ. ಎದುರಿಂದ ವಿದ್ಯಾ ಕೆಲ ದೂರ ಹೋಡ್ತಾಳೆ. ಬಳಿಕ ಆನೆಯ ಬಳಿ ತನ್ನನ್ನ ಏನು ಮಾಡದಂತೆ ಪ್ರಾರ್ಥನೆ ಮಾಡ್ತಾಳೆ. ಆದ್ರೆ ಆನೆ ವಿದ್ಯಾಳ ಬಳಿ ಬರುತ್ತೆ.. ಇದೇ ವೇಳೆ ಭದ್ರೇಗೌಡ ಎಂಟ್ರಿ ಕೊಟ್ಟು ಪಂಜಿನಿಂದ ಆನೆಯನ್ನ ಎದುರಿಸಲು ಪ್ರಯತ್ನಿಸಿ, ಇಬ್ಬರೂ ಆನೆಯಿಂದ ತಪ್ಪಿಸಿಕೊಳ್ತಾರೆ.
ಕಾಡಿನಲ್ಲಿ ಕಳೆದು ಹೊದ ವಿದ್ಯಾ ಹಾಗೂ ಭದ್ರೆಗೌಡನಿಗೆ ಮತ್ತೇ ಆನೆಯ ಶಬ್ದ ಕೇಳುತ್ತೆ.. ಹೀಗಾಗಿ ಆನೆಯಿಂದ ತಪ್ಪಿಸಿಕೊಳ್ಳಲು ಓಡಲು ಶುರು ಮಾಡ್ತಾರೆ.. ಆದ್ರೆ ಅಚಾನಕ್​ ಆಗಿ ದೊಡ್ಡದೊಂದು ಗುಂಡಿಗೆ ಬೀಳ್ತಾರೆ..
ಕಾಡಿನಲ್ಲಿ ಕಳೆದುಹೋಗಿರೋ ವಿದ್ಯಾಳಿಗೆ ಭದ್ರೇಗೌಡನ ಪ್ರೀತಿ ಸಿಗುತ್ತಾ? ವಿದ್ಯಾ ಮಗುವಿನ ಗುಟ್ಟನ್ನ ಭದ್ರೇಗೌಡನ ಮುಂದೆ ಹೇಳ್ತಾಳ? ಇದು ಈ ಟ್ವಿಸ್ಟ್‌ನಿಂದ ಹುಟ್ಟಿರುವ ಪ್ರಶ್ನೆಗಳು. ಧಾರವಾಹಿಗಳು ಅಂದ್ರನೇ ತಿರುವುಗಳು. ಈ ತಿರುವು ಮತ್ತ್ಯಾವ ತಿರುವು ಪಡೆದುಕೊಳ್ಳುತ್ತೋ ಏನೋ. ಆದ್ರೆ, ಈ ಸೀನ್‌ಗಳು ಮಾತ್ರ ಪುಟ್ಟಗೌರಿ ಮದುವೆ ಸೀರಿಯಲ್ ನೆನಪಿಸಿದ್ದು ಸುಳ್ಳಲ್ಲ.
ಇದನ್ನೂ ಓದಿ:ಬೆಂಗಳೂರು ಜಲಮಂಡಳಿ ಗುಂಡಿಗೆ ಬಿದ್ದು ಬಾಲಕ ಸಾವು!! ಈ ಸಾವು ನ್ಯಾಯವೇ?!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us