IND vs PAK ಪಂದ್ಯ ರದ್ದಾದರೆ ₹4,500 ಕೋಟಿ ನಷ್ಟ! ಕ್ರಿಕೆಟ್ ಜಗತ್ತಿಗೆ ಪಾಕ್ ಹೇಗೆ ಬೆದರಿಕೆ ಹಾಕ್ತಿದೆ..?

ಭಾರತ-ಪಾಕಿಸ್ತಾನ ಪಂದ್ಯವು ವಿಶ್ವ ಕ್ರಿಕೆಟ್‌ನ ಇಂಜಿನ್ ಇದ್ದಂತೆ. ಪಾಕಿಸ್ತಾನದ ಹಠಮಾರಿತನವು ಆ ಇಂಜಿನ್ ಅನ್ನೇ ಆಫ್ ಮಾಡಿದರೆ, ಅದರ ಬೆಲೆಯನ್ನು ಮುಂದಿನ ಹಲವು ವರ್ಷಗಳ ಕಾಲ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಪಾವತಿಸಬೇಕಾಗುತ್ತದೆ.

author-image
Ganesh Kerekuli
IDN vs PAK
Advertisment

ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಅದು ಕೇವಲ ಆಟವಲ್ಲ, ಅದೊಂದು ಭಾವನೆ. ಆಧುನಿಕ ಕ್ರಿಕೆಟ್ ಆರ್ಥಿಕತೆಯಲ್ಲಿ ಈ ಪಂದ್ಯವು ಇಡೀ ಟೂರ್ನಮೆಂಟ್ ಅನ್ನು ಸಲಹುವ ‘ಚಿನ್ನದ ಗಣಿ’. ಒಂದು ವೇಳೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಆಡಲು ನಿರಾಕರಿಸಿದರೆ, ಅದು ಕೇವಲ ರಾಜಕೀಯ ಪೇಚಾಟವಲ್ಲ, ಬದಲಾಗಿ ಜಾಗತಿಕ ಕ್ರಿಕೆಟ್ ಆರ್ಥಿಕತೆಗೆ ಬೀಳುವ ಪೆಟ್ಟು!

ಒಂದೇ ಒಂದು ಪಂದ್ಯ ಮೌಲ್ಯ 4,500 ಕೋಟಿ..!

ಲೆಕ್ಕಾಚಾರಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಒಂದೇ ಒಂದು ಟಿ20 ಪಂದ್ಯದ ಒಟ್ಟು ಮೌಲ್ಯ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು 4,500 ಕೋಟಿ ರೂಪಾಯಿ!). ಬ್ರಾಡ್‌ಕಾಸ್ಟ್ ರೈಟ್ಸ್, ಜಾಹೀರಾತು, ಸ್ಪಾನ್ಸರ್‌ಶಿಪ್, ಟಿಕೆಟ್ ಮಾರಾಟ ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ಸೇರಿಸಿದರೆ ಈ ಮೊತ್ತ ಬೆಚ್ಚಿಬೀಳಿಸುವಂತಿದೆ. ವಿಶ್ವದ ಬೇರೆ ಯಾವುದೇ ಕ್ರಿಕೆಟ್ ಪಂದ್ಯ ಇಷ್ಟು ದೊಡ್ಡ ಮಟ್ಟದ ಆದಾಯ ತಂದುಕೊಡುವುದಿಲ್ಲ.

ಇದನ್ನೂ ಓದಿ:PSL ಬ್ಯಾನ್, ಆರ್ಥಿಕ ನಿರ್ಬಂಧ! ಭಾರತ ಮೇಲೆ ಆಡದಿದ್ರೆ ಪಾಕ್​​ಗೆ ಐಸಿಸಿಯಿಂದ 5 ಕಠಿಣ ಶಿಕ್ಷೆ..!

India vs pakistan (1)

ಬ್ರಾಡ್‌ಕಾಸ್ಟರ್‌ಗಳಿಗೆ ಭಾರಿ ಹೊಡೆತ

ಜಾಹೀರಾತುದಾರರಿಗೆ ಈ ಪಂದ್ಯವೇ ‘ಕ್ರೌನ್ ಜ್ಯುವೆಲ್’. ಈ ಪಂದ್ಯದ ಅವಧಿಯಲ್ಲಿ ಕೇವಲ 10 ಸೆಕೆಂಡ್‌ನ ಜಾಹೀರಾತಿಗೆ 25 ರಿಂದ 40 ಲಕ್ಷ ರೂಪಾಯಿ ದರವಿದೆ! ಒಂದು ವೇಳೆ ಈ ಪಂದ್ಯ ರದ್ದಾದರೆ ಪ್ರಸಾರ ಹಕ್ಕು ಹೊಂದಿರುವ ಜಿಯೋಸ್ಟಾರ್ (JioStar) ನಂತಹ ಸಂಸ್ಥೆಗಳು ಐಸಿಸಿಯಿಂದ ಭಾರಿ ಮೊತ್ತದ ರಿಯಾಯಿತಿ (Rebate) ಕೇಳಲಿವೆ. ಇದರಿಂದ ಐಸಿಸಿಗೆ ಬರುವ ಆದಾಯದಲ್ಲಿ ಭಾರಿ ಕುಸಿತ ಉಂಟಾಗಲಿದೆ.

ಯಾರಿಗೆ ಎಷ್ಟು ನಷ್ಟ?

ಐಸಿಸಿ ಮತ್ತು ಇತರ ದೇಶಗಳು: ಐಸಿಸಿಯ ಆದಾಯ ಕಡಿಮೆಯಾದರೆ, ಅದು ಇತರ ಸಣ್ಣ ಕ್ರಿಕೆಟ್ ಮಂಡಳಿಗಳಿಗೆ ನೀಡುವ ಅನುದಾನದ ಮೇಲೆ ಪರಿಣಾಮ ಬೀರುತ್ತದೆ. ಅಸೋಸಿಯೇಟ್ ದೇಶಗಳ ಕ್ರಿಕೆಟ್ ಅಭಿವೃದ್ಧಿಗೆ ಇದು ದೊಡ್ಡ ಹಿನ್ನಡೆಯಾಗಲಿದೆ. 

ಬಿಸಿಸಿಐ ಮತ್ತು ಪಿಸಿಬಿ: ವರದಿಗಳ ಪ್ರಕಾರ, ಪಂದ್ಯ ರದ್ದಾದರೆ ಎರಡೂ ಮಂಡಳಿಗಳು ತಲಾ 200 ಕೋಟಿ ರೂಪಾಯಿ ನೇರ ನಷ್ಟ ಅನುಭವಿಸಲಿವೆ. ಭಾರತಕ್ಕೆ ಇದು ಸಣ್ಣ ಹೊಡೆತವಾಗಬಹುದು. ಆದರೆ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ (PCB) ಇದು ‘ಅಸ್ತಿತ್ವದ ಪ್ರಶ್ನೆ’ ಯಾಗಲಿದೆ.

ಪಾಕ್​​ಗೆ ಕಾನೂನು ಸಂಕಷ್ಟ..!

  • ಐಸಿಸಿಯ ನಿಯಮಗಳ ಪ್ರಕಾರ, ಯಾವುದೇ ಬಲವಾದ ಕಾರಣವಿಲ್ಲದೆ (Force Majeure ಇಲ್ಲದೆ) ಪಂದ್ಯದಿಂದ ಹಿಂದೆ ಸರಿದರೆ:
  • ಯಾವುದೇ ವಿಮಾ ರಕ್ಷಣೆ (Insurance) ಸಿಗುವುದಿಲ್ಲ.
  • ಬ್ರಾಡ್‌ಕಾಸ್ಟರ್‌ಗಳಿಂದ ಕಾನೂನು ಮೊಕದ್ದಮೆ ಎದುರಿಸಬೇಕಾಗಬಹುದು.
  • ಐಸಿಸಿಯಿಂದ ಸಿಗುವ ವಾರ್ಷಿಕ ಅನುದಾನಕ್ಕೆ (ಅಂದಾಜು 34.51 ಮಿಲಿಯನ್ ಡಾಲರ್) ಕತ್ತರಿ ಬೀಳಬಹುದು.

ವಿಶ್ವಾಸಾರ್ಹತೆ ಕಳೆದುಕೊಳ್ಳುವ ಭೀತಿ

ಹಣದ ನಷ್ಟಕ್ಕಿಂತ ದೊಡ್ಡದು ‘ಗೌರವದ ನಷ್ಟ’. ಪದೇ ಪದೇ ಪಂದ್ಯ ಬಹಿಷ್ಕರಿಸುವ ಬೆದರಿಕೆ ಹಾಕುವುದರಿಂದ ಭವಿಷ್ಯದಲ್ಲಿ ಪಾಕಿಸ್ತಾನದ ಪಂದ್ಯಗಳಿಗೆ ಬ್ರಾಡ್‌ಕಾಸ್ಟರ್‌ಗಳು ಮತ್ತು ಸ್ಪಾನ್ಸರ್‌ಗಳು ಆಸಕ್ತಿ ತೋರಿಸುವುದಿಲ್ಲ. ಇದು ಪಾಕ್ ಕ್ರಿಕೆಟ್‌ನ ದೀರ್ಘಕಾಲದ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಈ ಪಂದ್ಯಕ್ಕಾಗಿ ಸಾವಿರಾರು ಅಭಿಮಾನಿಗಳು ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಮಾನ ಟಿಕೆಟ್, ಹೋಟೆಲ್ ಬುಕ್ ಮಾಡಿದ್ದಾರೆ. ಪಂದ್ಯ ರದ್ದಾದರೆ ಅವರ ಕನಸು ಮತ್ತು ಹಣ ಎರಡೂ ಮಣ್ಣು ಪಾಲಾಗಲಿವೆ. 

ಇದನ್ನೂ ಓದಿ: ಪಾಕ್​ಗೆ ಮರ್ಮಾಘಾತ ಕೊಟ್ಟ ಬಲೂಚ್​​ನ ಇಬ್ಬರು ಮಹಿಳಾ ಅಟ್ಯಾಕರ್; 200ಕ್ಕೂ ಹೆಚ್ಚು ಸೈನಿಕರು, ನಾಗರಿಕರು ಫಿನಿಶ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ind vs Pak india vs pakistan
Advertisment