Advertisment

ಚಂದದ ಕುಟುಂಬ ಹಾಳು ಮಾಡಲು ಬಂದಳಾ ಪ್ರಿಯಾ..? ನಂದಗೋಕುಲ ವೀಕ್ಷಕರಲ್ಲಿ ಕಾಡಿದ ಆತಂಕ..!

ಅಂತು ಇಂತು ಮಾಧವನ ಮದುವೆಯಾಗಿದೆ. ನಂದಕುಮಾರ ಪಾಲಿಗೆ ಮಾಧವ ಸಾಕ್ಷತ್​ ಶ್ರೀ ರಾಮ ಆಗಿದ್ದಾನೆ. ಯಾಕಂದ್ರೆ ನೂರೆಂಟು ವಿಘ್ನಗಳ ನಡುವೆಯೇ ಮಾಧವ, ಅಪ್ಪ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾನೆ. ಇದ್ರಿಂದ ನಂದಗೋಕುಲದಲ್ಲಿ ಸಂಭ್ರಮದ ವಾತವಾರಣ ಮನೆಮಾಡಿದೆ.

author-image
Ganesh Kerekuli
nandagokula (1)
Advertisment

ಅಂತು ಇಂತು ಮಾಧವನ ಮದುವೆಯಾಗಿದೆ. ನಂದಕುಮಾರ ಪಾಲಿಗೆ ಮಾಧವ ಸಾಕ್ಷತ್​ ಶ್ರೀ ರಾಮ ಆಗಿದ್ದಾನೆ. ಯಾಕಂದ್ರೆ ನೂರೆಂಟು ವಿಘ್ನಗಳ ನಡುವೆಯೇ ಮಾಧವ, ಅಪ್ಪ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾನೆ. ಇದ್ರಿಂದ ನಂದಗೋಕುಲದಲ್ಲಿ ಸಂಭ್ರಮದ ವಾತವಾರಣ ಮನೆಮಾಡಿದೆ. 

Advertisment

ಮಾಧವನಿಂದಾಗಿ ನಂದಕುಮಾರ್​ ಕನಸು ನುಚ್ಚುನಾರಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ತಂದೆಯ ಆಸೆಯಂತೆ ತಂದೆ ಇಷ್ಟಪಟ್ಟ ಹುಡುಗಿಯನ್ನೇ ಮಾಧವ ಮದುವೆಯಾಗಿದ್ದಾನೆ. ಎಷ್ಟೇ ಕಷ್ಟ ಬಂದ್ರೂ, ವಿಲನ್​ಗಳು ನೂರಾರು ಕುತಂತ್ರ ಮಾಡಿದ್ರೂ ಮಾಧವ ಎದೆಗುಂದದೇ, ತನ್ನ ತಂದೆ ನಂದಕುಮಾರ್​ ಆಸೆಯನ್ನ ನೇರವೇರಿಸಿದ್ದಾನೆ.

nandagokula

ಕೊನೆಗೂ ಮಾಧವ, ಪ್ರಿಯಾ ಕೊರಳಿಗೆ ತಾಳಿ ಕಟ್ಟಿದ್ದಾನೆ. ನಂದನ ಮನೆಗೆ ಸೊಸೆಯಾಗಿ ಪ್ರಿಯಾ ಸೇರೊದ್ದು ಬಂದಿದ್ದಾಳೆ. ಗಿರಿಜಾ ಎರಡು ಸೊಸೆಯಂದಿರ ಜೊತೆ ಪ್ರಿಯಾಳನ್ನೂ ತನ್ನ ಸೊಸೆಯಾಗಿ ಒಪ್ಪಿಕೊಂಡಿದ್ದಾಳೆ.. ಆದ್ರೆ ಮಾಧವ ಹಿರಿಮಗನಾಗಿದ್ರೂ, ಸೊಸೆ ಪ್ರಿಯಾಳಿಗೆ ಹಿರಿ ಸೊಸೆ ಪಟ್ಟ ಸಿಕ್ಕಿಲ್ಲ.

ನಿಜ.. ಸೊಸೆ ಪ್ರಿಯಾಳ ಬದಲು ಮೀನಾಗೆ ನಂದಕುಮಾರ್​ ಹಿರಿ ಸೊಸೆ ಪಟ್ಟ ನೀಡಿದ್ದಾನೆ.. ಕೇಶವ ಪ್ರೀತಿಸಿ ಮದುವೆಯಾದ್ರೆ, ವಲ್ಲಭನದ್ದಂತು ಅನಿರೀಕ್ಷಿತ ಮದುವೆ. ಪ್ರತಿಸಿ ಮದುವೆಯಾದ್ರು ಎಂಬ ಕಾರಣಕ್ಕೆ ಮೀನಾಳನ್ನು ನಂದಕುಮಾರ ಇಷ್ಟಪಟ್ಟಿರಲಿಲ್ಲ. ಆದ್ರೆ ಮೀನಾ ಸ್ವಭಾವ ನಂದಕುಮಾರ್​ಗೆ ಇಷ್ಟವಾಗಿ ಇದೀಗ ಮೀನಾಳನ್ನ ಒಪ್ಪಿಕೊಂಡಿದ್ದಾನೆ... ಮನೆಯಲ್ಲಿ ಮಾಧವ ಹಿರಿಯನಾದ್ರೂ ಮದುವೆಯಾಗಿದ್ದು ಮಾತ್ರ ಕೊನೆಯಲ್ಲಿ.  ಹೀಗಾಗಿ ನಂದಕುಮಾರ್​ ಪ್ರಿಯಾಳ ಬದಲು  ಮೀನಾಗೆ ಹಿರಿ ಸೊಸೆ ಪಟ್ಟ ನೀಡಿದ್ದಾನೆ.

Advertisment

ಇದನ್ನೂ ಓದಿ: ತಾಳಿ ಕಟ್ಟೋ ವೇಳೆ ಮಂಟಪಕ್ಕೆ ನುಗ್ಗಿದ ಮೊದಲ ಪತ್ನಿ.. ಯುವತಿಗೆ ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಅಂತಿದ್ದವ್ನಿಗೆ ಶಾಕ್..!

ಕೇಶವ ಹಾಗೂ ಮೀನಾ ಫೋಟೋ ಕೆಳಗೆ ಮಾಧವ ಹಾಗೂ ಪ್ರಿಯಾ ಫೋಟೋ ಇಡಲಾಗಿದೆ. ಇದನ್ನು ನೋಡಿ ಮೀನಾ ಸಖತ್​ ಖುಷಿಯಾಗಿದ್ದಾಳೆ.. ಮನೆಯಲ್ಲಿ ಸಂಭ್ರಮದ ವಾತವಾರಣ ಕೂಡ ಸೃಷ್ಟಿಯಾಗಿದೆ.. ಆದ್ರೆ ಸೇರೊದ್ದು ಬಂದ ಪ್ರಿಯಾ ವರ್ತನೆ ಯಾಕೋ ಅನುಮಾನ ಹುಟ್ಟಿಸಿದೆ. 

ಸೇರೊದ್ದು ಮನೆಗೆ ಬಂದ್ಮೇಲೆ ಮಾವನ ಆಜ್ಞೆಯಂತೆ ಪ್ರಿಯಾ, ತನ್ನ ಮತ್ತು  ಮಾಧವನ ಫೋಟೋವನ್ನು ಗೋಡೆಗೆ ನೇತು ಹಾಕಿದ್ದಾಳೆ . ಆದ್ರೆ ಮೀನಾಗೆ ಹಿರಿ ಸೊಸೆ ಪಟ್ಟ ನೀಡಿದ್ದು ಯಾಕೋ ಪ್ರಿಯಾಳಿಗೆ ಇಷಟ್ವಾಗಿಲ್ಲ ಅನ್ನುತ್ತೆ.. ಮಾವನ ಮಾತು ಕೇಳ್ತಿದ್ದಂತೆ ಪ್ರಿಯಾ ಕಣ್ಣು ಕೆಂಪಾಗಿದೆ. 

Advertisment

ಇಷ್ಟು ದಿನ ನಂದಕುಮಾರ್​ ಮನೆಯಲ್ಲಿ ವಿಲನ್​ಗಳೇ ಇರ್ಲಿಲ್ಲ.. ಆದ್ರೆ ಇದೀಗ ಪ್ರಿಯಾ ಎಂಟ್ರಿ ಯಾಕೋ ಅನುಮಾನ ಮೂಡಿಸಿದೆ..ಚೆಂದದ ಕುಟುಂಬವನ್ನು ಪ್ರಿಯಾ ಹಾಳು ಮಾಡ್ತಾಳಾ ? ಮುಂದೆ ಧಾರವಾಹಿ ಏನ್​ ಟ್ವೀಸ್ಟ್​ ಪಡೆದುಕೊಳ್ಳುತ್ತೆ ಎಂಬುದೇ ಸದ್ಯಕಿರೋ ಕುತುಹಲ.

ಇದನ್ನೂ ಓದಿ: ಅಭಿಷೇಕ್ ಶರ್ಮಾಗೆ ಅನಾರೋಗ್ಯ, ಹೊಸ ಟೆನ್ಷನ್! ಬುಮ್ರಾ ಎಂಟ್ರಿಯಾದ್ರೆ ಸಿರಾಜ್ ಕತೆ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nandagokula serial Bigg boss
Advertisment
Advertisment
Advertisment