Advertisment

ತಾಳಿ ಕಟ್ಟೋ ವೇಳೆ ಮಂಟಪಕ್ಕೆ ನುಗ್ಗಿದ ಮೊದಲ ಪತ್ನಿ.. ಯುವತಿಗೆ ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಅಂತಿದ್ದವ್ನಿಗೆ ಶಾಕ್..!

ಕಲ್ಯಾಣ ಮಂಟಪದಲ್ಲಿ ಸಂಭ್ರಮ ಮನೆ ಮಾಡಿತ್ತು. ವರ ಮತ್ತು ವಧು ಹಾರ ಬದಲಾಯಿಸಿಕೊಂಡು ಇನ್ನೇನು ತಾಳಿ ಕಟ್ಟಿಸಿಕೊಳ್ಳಲು ಸಜ್ಜಾಗಿದ್ದರು. ಸರಿಯಾಗಿ ಮುಹೂರ್ತದ ಸಮಯಕ್ಕೇ ‘ರಿಯಲ್ ವಿಲನ್’ ಥರ ಎಂಟ್ರಿ ಕೊಟ್ಟ ಮೊದಲ ಪತ್ನಿ ಮದುವೆಯನ್ನು ನಿಲ್ಲಿಸಿ, ಗಂಡನಿಗೆ ಶಾಕ್ ನೀಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

author-image
Ganesh Kerekuli
tumakuru marriage drama (2)
Advertisment
  • ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಸಿನಿಮೀಯ ಶೈಲಿಯ ಘಟನೆ
  • ಬೆಂಗಳೂರು ಮೂಲದ ಹರೀಶ್ ಪ್ರಸಾದ್ 2ನೇ ಮದುವೆಗೆ ಬ್ರೇಕ್
  • ವರ, ವಧು ಹಾಗೂ ಮೊದಲ ಪತ್ನಿ ಎಲ್ಲರೂ ಪೊಲೀಸ್ ಠಾಣೆಗೆ

ತುಮಕೂರು: ಕಲ್ಯಾಣ ಮಂಟಪದಲ್ಲಿ ಸಂಭ್ರಮ ಮನೆ ಮಾಡಿತ್ತು. ವರ ಮತ್ತು ವಧು ಹಾರ ಬದಲಾಯಿಸಿಕೊಂಡು ಇನ್ನೇನು ತಾಳಿ ಕಟ್ಟಿಸಿಕೊಳ್ಳಲು ಸಜ್ಜಾಗಿದ್ದರು. ಸರಿಯಾಗಿ ಮುಹೂರ್ತದ ಸಮಯಕ್ಕೇ ‘ರಿಯಲ್ ವಿಲನ್’ ಥರ ಎಂಟ್ರಿ ಕೊಟ್ಟ ಮೊದಲ ಪತ್ನಿ ಮದುವೆಯನ್ನು ನಿಲ್ಲಿಸಿ, ಗಂಡನಿಗೆ ಸರಿಯಾದ ಶಾಕ್ ನೀಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

Advertisment

ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿರುವ ಎಸ್.ಎಲ್.ಎನ್ (SLN) ಕನ್ವೆನ್ಷನ್ ಹಾಲ್ ಈ ಹೈಡ್ರಾಮಾಗೆ ಸಾಕ್ಷಿಯಾಗಿದೆ.

ಏನಿದು ಘಟನೆ?

ಬೆಂಗಳೂರು ಮೂಲದ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಎಂಬಾತ, ಮಂಡ್ಯ ಮೂಲದ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಜ್ಜಾಗಿದ್ದ. ಗುಟ್ಟಾಗಿ ನಡೆಯುತ್ತಿದ್ದ ಈ ಮದುವೆಗೆ ಎರಡೂ ಕಡೆಯ ಸಂಬಂಧಿಕರು ಸಾಕ್ಷಿಯಾಗಿದ್ದರು. ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕಿತ್ತು.

ಇದನ್ನೂ ಓದಿ:  ಕೊಪ್ಪಳದಲ್ಲಿ ಸಾರಾಯಿ ಎಂದು ‘ಸ್ಪಿರಿಟ್’ ಕುಡಿದ ಇಬ್ಬರು ಯುವಕರು.. ಮುಂದೇನಾಯ್ತು..?

Advertisment

tumakuru marriage drama (1)

ಆದರೆ, ತನ್ನ ಪತಿ ತನಗೆ ಮೋಸ ಮಾಡಿ ಎರಡನೇ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ತಿಳಿದ ಮೊದಲ ಪತ್ನಿ ವಿಶಾಲಾಕ್ಷಿ (ಹೆಸರು ಬದಲಾಯಿಸಲಾಗಿದೆ), ಸುಮ್ಮನೆ ಕೂರಲಿಲ್ಲ. ನೇರವಾಗಿ ವಕೀಲರು, ಪೊಲೀಸರು ಹಾಗೂ ತನ್ನ ಸಂಬಂಧಿಕರ ಪಡೆಯೊಂದಿಗೆ ಕಲ್ಯಾಣ ಮಂಟಪಕ್ಕೆ ಲಗ್ಗೆ ಇಟ್ಟಿದ್ದಾರೆ.

ಮಂಟಪದಲ್ಲಿ ಜಟಾಪಟಿ

ತಾಳಿ ಕಟ್ಟುವ ವೇಳೆಗೇ ಪೊಲೀಸರೊಂದಿಗೆ ಮೊದಲ ಪತ್ನಿ ಎಂಟ್ರಿ ಕೊಡುತ್ತಿದ್ದಂತೆ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಎರಡನೇ ಮದುವೆಯಾಗಲು ಬಂದಿದ್ದ ವಧುವಿನ ಕಡೆಯವರಿಗೂ ಶಾಕ್ ಆಗಿದೆ. ಈ ವೇಳೆ ಮಂಟಪದಲ್ಲಿ ಕೆಲಕಾಲ ಮಾತಿನ ಚಕಮಕಿ ಹಾಗೂ ಜಟಾಪಟಿ ನಡೆಯಿತು.

tumakuru marriage drama (3)

ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು, ವರ ಹಾಗೂ ಆತನ ಕಡೆಯವರಿಗೆ ಕಾನೂನು ಪಾಠ ಮಾಡಿದರು. ಮದುವೆಯನ್ನು ಅಲ್ಲಿಗೆ ನಿಲ್ಲಿಸಿ, ವರ, ಮೊದಲ ಪತ್ನಿ ಹಾಗೂ ಎರಡನೇ ಮದುವೆಗೆ ಸಜ್ಜಾಗಿದ್ದ ಯುವತಿಯ ಮನೆಯವರನ್ನು ಅಮೃತೂರು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ:ಮತ್ತೆರಡು ಜವಾಬ್ದಾರಿ ಬೆನ್ನಲ್ಲೇ ‘ಕರ್ನಾಟಕಕ್ಕೆ ಬಂಪರ್ ಗಿಫ್ಟ್’ ಘೋಷಿಸಿದ ಕುಮಾರಸ್ವಾಮಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

marriage Tumakuru News
Advertisment
Advertisment
Advertisment