Advertisment

ಅಭಿಷೇಕ್ ಶರ್ಮಾಗೆ ಅನಾರೋಗ್ಯ, ಹೊಸ ಟೆನ್ಷನ್! ಬುಮ್ರಾ ಎಂಟ್ರಿಯಾದ್ರೆ ಸಿರಾಜ್ ಕತೆ ಏನು..?

ಟಿ 20 ವಿಶ್ವಕಪ್ 2026ರಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಅಮೆರಿಕ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 29 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

author-image
Ganesh Kerekuli
Abhishek sharma (7)
Advertisment

ನವದೆಹಲಿ: ಟಿ 20 ವಿಶ್ವಕಪ್ 2026ರಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಅಮೆರಿಕ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 29 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದ ಆಯ್ಕೆ ವಿಚಾರದಲ್ಲಿ ದೊಡ್ಡ ತಲೆನೋವು ಶುರುವಾಗಿದೆ. ಮುಂದಿನ ಪಂದ್ಯಕ್ಕೆ ತಂಡದ ಸ್ಟಾರ್ ಬೌಲರ್ ವಾಪಸಾಗುತ್ತಿದ್ದು, ಕಳೆದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಆಟಗಾರನನ್ನೇ ಕೈಬಿಡಬೇಕಾದ ಅನಿವಾರ್ಯತೆ ಎದುರಾಗಿದೆ.

Advertisment

ಅಭಿಷೇಕ್ ಶರ್ಮಾಗೆ ಅನಾರೋಗ್ಯ

ಅಮೆರಿಕ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ (ಮೊದಲ ಎಸೆತದಲ್ಲೇ ಔಟ್) ಆಗಿದ್ದ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬ್ಯಾಟಿಂಗ್ ವೈಫಲ್ಯದ ಬಳಿಕ ಅವರು ಫೀಲ್ಡಿಂಗ್‌ಗೂ ಬಂದಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಸಿರಾಜ್, "ಅಭಿಷೇಕ್ ಶರ್ಮಾ ಅವರಿಗೆ ಹೊಟ್ಟೆ ಕೆಟ್ಟಿತ್ತು (Stomach upset). ಹೀಗಾಗಿ ಅವರು ಫೀಲ್ಡಿಂಗ್‌ಗೆ ಬಂದಿರಲಿಲ್ಲ. ಆದರೆ ನಮೀಬಿಯಾ ವಿರುದ್ಧದ ಮುಂದಿನ ಪಂದ್ಯದ ಹೊತ್ತಿಗೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆರಡು ಜವಾಬ್ದಾರಿ ಬೆನ್ನಲ್ಲೇ ‘ಕರ್ನಾಟಕಕ್ಕೆ ಬಂಪರ್ ಗಿಫ್ಟ್’ ಘೋಷಿಸಿದ ಕುಮಾರಸ್ವಾಮಿ..!

Siraj Arshadeep

ಬುಮ್ರಾ ಬಂದ್ರೆ ಸಿರಾಜ್ ಔಟ್?

ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಜ್ವರದ ಕಾರಣದಿಂದ ಅಮೆರಿಕ ವಿರುದ್ಧದ ಮೊದಲ ಪಂದ್ಯವನ್ನು ಆಡಿರಲಿಲ್ಲ. ಹೀಗಾಗಿ ಹರ್ಷಿತ್ ರಾಣಾ ಬದಲಿಗೆ ತಂಡಕ್ಕೆ ತಡವಾಗಿ ಎಂಟ್ರಿಕೊಟ್ಟಿದ್ದ ಮೊಹಮ್ಮದ್ ಸಿರಾಜ್‌ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸಿರಾಜ್, 3 ವಿಕೆಟ್ ಪಡೆಯುವ ಮೂಲಕ ಅಮೆರಿಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಈಗ ಬುಮ್ರಾ ಚೇತರಿಸಿಕೊಳ್ಳುತ್ತಿದ್ದು ಫೆಬ್ರವರಿ 12 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆ ಇದೆ. ಒಂದು ವೇಳೆ ಬುಮ್ರಾ ತಂಡಕ್ಕೆ ಮರಳಿದರೆ, ಕಳೆದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರೂ ಸಿರಾಜ್ ಅವರನ್ನು ತಂಡದಿಂದ ಕೈಬಿಡಬೇಕಾದ ಕಠಿಣ ಪರಿಸ್ಥಿತಿ ನಾಯಕ ಸೂರ್ಯಕುಮಾರ್ ಯಾದವ್ ಮೇಲಿದೆ.

Advertisment

ವಾಷಿಂಗ್ಟನ್ ಸುಂದರ್ ಎಂಟ್ರಿ

ಇದೇ ವೇಳೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ದೆಹಲಿಯಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ. ಒಟ್ಟಿನಲ್ಲಿ ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಆಟಗಾರರ ಫಿಟ್‌ನೆಸ್ ಮತ್ತು ಆಯ್ಕೆ ಪ್ರಕ್ರಿಯೆ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ‘ಪ್ರಾಮಾಣಿಕತೆ ಇನ್ನೂ ಸತ್ತಿಲ್ಲ’; ಮರಳಿ ಕೈಸೇರಿದ 10 ಲಕ್ಷದ ಚಿನ್ನಾಭರಣ.. BMTC ಕಂಡಕ್ಟರ್ ದೊಡ್ಡ ಗುಣಕ್ಕೆ ಕಣ್ಣೀರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Abhishek Sharma
Advertisment
Advertisment
Advertisment