ನಂದನ ಕನಸು ಈಡೇರಲು ನಾನಾ ವಿಘ್ನಗಳು.. ಚಂದ್ರಕಾಂತ್‌ನ ಷಡ್ಯಂತ್ರ ಬಯಲಾಗೋದು ಯಾವಾಗ?

ಪಾಪಾ ಅದ್ಯಾಕೋ, ನಂದನ ಕನಸು ಈಡೇರಲು ನಾನಾ ವಿಘ್ನಗಳು ಎದುರಾಗ್ತನೇ ಇವೆ. ಮಾಧವನ ಮದುವೆಯನ್ನ ಕುಟುಂಬದ ಸಮ್ಮುಖದಲ್ಲಿ ಮಾಡುವ ನಂದನ ಆಸೆಗೆ ಸೂರ್ಯಕಾಂತ್ ಮತ್ತು ಚಂದ್ರಕಾಂತ್‌ ಅಡೆತಡೆಯಾಗಿದ್ದಾರೆ. ಇನ್ನೇನು ಮಾಧುವನ ಮದುವೆಯಾಯ್ತು ಅನ್ನೋವಾಗ್ಲೇ, ಕಲ್ಯಾಣ ಮಂಟಪದಿಂದ ಮಾಧವನೇ ಕಣ್ಮರೆಯಾಗಿದ್ದಾನೆ.

author-image
Ganesh Kerekuli
nandagokula
Advertisment

ಪಾಪಾ ಅದ್ಯಾಕೋ, ನಂದನ ಕನಸು ಈಡೇರಲು ನಾನಾ ವಿಘ್ನಗಳು ಎದುರಾಗ್ತನೇ ಇವೆ. ಮಾಧವನ ಮದುವೆಯನ್ನ ಕುಟುಂಬದ ಸಮ್ಮುಖದಲ್ಲಿ ಮಾಡುವ ನಂದನ ಆಸೆಗೆ ಸೂರ್ಯಕಾಂತ್ ಮತ್ತು ಚಂದ್ರಕಾಂತ್‌ ಅಡೆತಡೆಯಾಗಿದ್ದಾರೆ. ಇನ್ನೇನು ಮಾಧುವನ ಮದುವೆಯಾಯ್ತು ಅನ್ನೋವಾಗ್ಲೇ, ಕಲ್ಯಾಣ ಮಂಟಪದಿಂದ ಮಾಧವನೇ ಕಣ್ಮರೆಯಾಗಿದ್ದಾನೆ.

ಮದುವೆ ಮುಹೂರ್ತಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಅಷ್ಟರಲ್ಲಾಗೇ, ಮಾಧವ ಮದುವೆ ಮಂಟಪದಿಂದ ಹೊರ ನಡೆಯುತ್ತಾನೆ. ಯಾರಿಗೂ ತಿಳಿಯದಂತೆ. ಆದ್ರೆ, ಇದನ್ನ ನೋಡಿದ ಸೂರ್ಯಕಾಂತ್ ಮತ್ತು ಚಂದ್ರಕಾಂತ್‌ ಕಲ್ಯಾಣ ಮಂಟಪಕ್ಕೆ ಎಂಟ್ರಿ  ಕೊಡುತ್ತಾರೆ.

ಇದನ್ನೂ ಓದಿ: ಬೆಂಗಳೂರು ಜಲಮಂಡಳಿ ಗುಂಡಿಗೆ ಬಿದ್ದು ಬಾಲಕ ಸಾವು!! ಈ ಸಾವು ನ್ಯಾಯವೇ?!

Nanda Gokula (2)

ಇತ್ತ ಕೇಶವ ಮತ್ತು ವಲ್ಲಭ ಮಾಧವನ ನೋಡಲು ರೂಮಿಗೆ ಬರ್ತಾರೆ. ಆದ್ರೆ, ಆತ ಅಲ್ಲಿ ಇರೋದೇ ಇಲ್ಲ. ಎಲ್ಲಾ ಕಡೆ ಹುಡುಕಾಡಿದ ನಂತರ, ನಂದನಿಗೆ ಮಕ್ಕಳು ನಿಜ ಹೇಳ್ತಾರೆ. ಆಗ ಗಿರಿಜಾಗೇ, ಎದೆ ಝಲ್ ಎನ್ನುತ್ತೆ.

ಒಂದ್ಕಡೆ, ಮಾಧವ ಫೋನ್ ಸ್ವಿಚ್‌ ಆಫ್ ಆಗಿದೆ. ಕಲ್ಯಾಣ ಮಂಟಪದಲ್ಲಿ ಸೂರ್ಯಕಾಂತ್, ಚಂದ್ರಕಾಂತ್‌ ಆರ್ಭಟ ಜೋರಾಗಿದೆ. ನಂದನಿಗೆ ಏನ್ ಮಾಡ್ಬೇಕು ಅಂತಾನೇ ಗೊತ್ತಾಗುತ್ತಿಲ್ಲ. ಆದ್ರೆ, ಮಾಧುವ ಮಾತ್ರ ಸುಕನ್ಯಾಳ ಮನೆಗೆ ಹೋಗಿಬಿಟ್ಟಿದ್ದಾನೆ. ಹೋಗಿದ್ದಾನೆ ಓಕೆ. ಆದ್ರೆ, ಆಕೆಯ ಎದುರು ನಿನ್ನಂದ್ರೆ ನನಗೆ ಇಷ್ಟ ಅಂತಾನೂ ಹೇಳಿಬಿಡ್ತಾನೆ. ಕಥೆಗೆ ಟ್ವಿಸ್ಟ್ ಸಿಗೋದೇ ಇಲ್ಲಿ.

ಮನೆಯವರ ನಿರೀಕ್ಷೆಯಂತೆ ಮಾಧುವ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡ್ತಾನೇ. ಆದ್ರೆ, ಗೆಳತಿ ಸುಕನ್ಯಾ ಜೊತೆ. ಆಗ ಶುರುವಾಗೋದೇ ಅಸಲಿ ಆಟ. ಅಷ್ಟಕ್ಕೂ ಮುಂದೇನಾಗುತ್ತೆ ಅನ್ನೋದು ತುಂಬಾ ಕುತೂಹಲ ಕೆರಳಿಸಿದೆ. ಅದೇ ಮಂಟಪದಲ್ಲಿ ಮಾಧುವ ಸುಕನ್ಯಾಳ ವರಿಸುತ್ತಾನಾ? ಅಥ್ವಾ ಸೂರ್ಯಕಾಂತ್, ಚಂದ್ರಕಾಂತ್‌ನ ಷಡ್ಯಂತ್ರ ಬಯಲು ಮಾಡ್ತಾನಾ? ನಂದ ಕನಸು ಕಂಡಂತೆ ಮದ್ವೆ ನಡೆಯುತ್ತಾ? ಅನ್ನೋದೇ ಸದ್ಯ ಉಳಿದುಕೊಂಡಿರುವ ಪ್ರಶ್ನೆ.

ಇದನ್ನೂ ಓದಿ: ವೀಕ್ಷಕರ ಕುತೂಹಲ ಹೆಚ್ಚಿಸಿದ ಮುದ್ದು ಸೊಸೆ; ಭದ್ರೇಗೌಡನ ಆಸೆ ಈಡೇರುತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nandagokula serial
Advertisment