ತಿರುಗಿಬಿದ್ದ ಕರ್ಣ.. ಕತೆಯಲ್ಲಿ ಹೊಸ ಟ್ವಿಸ್ಟ್, ವೀಕ್ಷಕರು ಫುಲ್ ಥ್ರಿಲ್..!

ತಂದೆ ರಮೇಶ್‌ನ ಕುತಂತ್ರಗಳಿಗೆ ಸೈಲೆಂಟ್ ಆಗಿದ್ದ ಕರ್ಣ ಈಗ ತಿರುಗಿಬಿದ್ದಿದ್ದಾನೆ. ಹೌದು ದಂಡಂ ದಶಗುಣಂ ಎಂದು ಅಪ್ಪನಿಗೆ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಮುಂದಾಗಿದ್ದಾನೆ. ಈ ಹೊಸ ಟ್ವಿಸ್ಟ್​ ವೀಕ್ಷಕರು ಸಖತ್​ ಮಜಾ ನೀಡ್ತಿದೆ.

author-image
Ganesh Kerekuli
karna serial (6)
Advertisment

ತಂದೆ ರಮೇಶ್‌ನ ಕುತಂತ್ರಗಳಿಗೆ ಸೈಲೆಂಟ್ ಆಗಿದ್ದ ಕರ್ಣ ಈಗ ತಿರುಗಿಬಿದ್ದಿದ್ದಾನೆ. ಹೌದು ದಂಡಂ ದಶಗುಣಂ ಎಂದು ಅಪ್ಪನಿಗೆ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಮುಂದಾಗಿದ್ದಾನೆ. ಈ ಹೊಸ ಟ್ವಿಸ್ಟ್​ ವೀಕ್ಷಕರು ಸಖತ್​ ಮಜಾ ನೀಡ್ತಿದೆ. 

ಕರ್ಣ.. ಇಷ್ಟು ದಿನ ಸೈಲೆಂಟ್ ಆಗಿ ಇರ್ತಿದ್ದ. ತಂದೆಯನ್ನು ಬಹಳ ಗೌರವಿಸ್ತಿದ್ದ. ಬಹಳ ಪ್ರೀತಿ ಮಾಡ್ತಿದ್ದ. ತಂದೆ ಏನೇ ಹೇಳಿದ್ರೂ ಅದನ್ನು ಸಹಿಸಿಕೊಳ್ತಿದ್ದ. ಇದನ್ನೆ ಅಡ್ವಾಂಟೇಜ್ ಆಗಿ ತೆಗೆದುಕೊಂಡ ರಮೇಶ್‌,  ಬದಲಾದಂತೆ ನಟಿಸಿ ಒಳ್ಳೆಯವನ ರೀತಿ ವರ್ತಿಸಿದ್ದ. ತೇಜಸ್ ಮತ್ತು ನಿತ್ಯಾಳ ಮದುವೆ ವೇಳೆ ತೇಜಸ್​​ನನ್ನ ಕಿಡ್ನ್ಯಾಪ್ ಮಾಡಿಸಿ, ಕರ್ಣ ಹಾಗೂ ನಿತ್ಯಾ ಮದುವೆಯಾಗುವಂತೆ ಪ್ರಯತ್ನಿಸಿದ್ದ. ಆದ್ರೆ, ಅದು ವಿಫಲವಾಗಿತ್ತು. 

ಇದೀಗ ಕರ್ಣ ಧಾರವಾಹಿಯಲ್ಲಿ ಮತ್ತೆ ಹೊಸ ಟ್ವಿಸ್ಟ್ ಸಿಕ್ಕಿದೆ. ತಂದೆ ರಮೇಶನ ವಿರುದ್ದವೇ ಕರ್ಣ ತಿರುಗಿಬಿದ್ದಿದ್ದಾನೆ. ನಿಜ, ಅಜ್ಜಿಯ ಮಾತಿನಿಂದ ರಮೇಶನ ನಿಜ ಬಣ್ಣ ಕರ್ಣನಿಗೆ ಗೊತ್ತಾಗಿದೆ. ತನ್ನ ಜೀವನದಲ್ಲಿ ನಡೆದ ಎಲ್ಲಾ ಕಹಿ ಘಟನೆಗೆ ಅಪ್ಪನೇ ಕಾರಣ ಎಂದು ಕರ್ಣನಿಗೆ ತಿಳಿದುಬಿಟ್ಟಿದೆ. 

ಇದನ್ನೂ ಓದಿ:ಸೈಟ್ ಗಲಾಟೆ: GPA ಹೋಲ್ಡರ್-ಯಶ್ ತಾಯಿ ಮಧ್ಯೆ ಜಟಾಪಟಿ..!

ಭವ್ಯ ಗೌಡ ಒಬ್ಬರೇ ಅಲ್ಲ.. ಕಿರಣ್ ರಾಜ್​​ಗೆ ಜೋಡಿಯಾಗಿ ಮತ್ತೊಬ್ಬ ಸ್ಟಾರ್​ ನಟಿ ಅಚ್ಚರಿ ಎಂಟ್ರಿ!

ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು ಕರ್ಣನದ್ದೇ ಎಂದು ಮನೆಯವರಲ್ಲೆರೂ ತಿಳಿದುಕೊಂಡಿದ್ದಾರೆ. ಇದರ ಬಗ್ಗೆ ಮಾತನಾಡ್ತಾ ಅಜ್ಜಿ, ನಿಮ್ಮ ಅಪ್ಪ ರಮೇಶ ಬಹಳ ಸಂತೋಷವಾಗಿದ್ದಾನೆ. ನಿನ್ನ ಮತ್ತು ನಿತ್ಯಾ ಮದುವೆಯ ಬಗ್ಗೆ ಹೇಳಿದ್ದೇ ಅವನು ಎಂದಿದ್ದಾರೆ. ಇದ್ರಿಂದ ಕರ್ಣನಿಗೆ ​ಶಾಕ್​ ಆಗಿದೆ. ಕರ್ಣ ನಿಧಿಯನ್ನ ಲವ್​ ಮಾಡ್ತಿರೋ ವಿಷಯ ರಮೇಶ್​ಗೆ ಗೊತ್ತಿತ್ತು. ಆದ್ರೆ  ಅಜ್ಜಿಯ ಮಾತು ಕೇಳಿ ಏನೋ ಎಡವಟ್ಟಾಗಿದೆ  ಎಂದು ಈ ಬಗ್ಗೆ ತಿಳಿದುಕೊಳ್ಳಬೇಕು ಅಂತಾ ಕರ್ಣ ಮನೆಗೆ ಬರ್ತಾನೆ.

ಈ ವೇಳೆ ರಮೇಶ ಕುಡಿದ ಮತ್ತಲ್ಲಿ, ಎಲ್ಲಾ ವಿಷಯವನ್ನೂ ಹೇಳುತ್ತಿದ್ದ. ಈ ಎಲ್ಲಾ ವಿಷಯವನ್ನ ಕೇಳಿಸಿಕೊಂಡ ಕರ್ಣನಿಗೆ ಕೊನೆಗೂ ರಮೇಶನ ಮುಖವಾಡ ತಿಳಿದು, ಇನ್ನೇನಿದ್ದರೂ ದಂಡಂ ದಶ ಗುಣಂ ಎಂದಿದ್ದಾನೆ. ಇದೀಗ ರಮೇಶನಿಗೆ ಮಾರಿ ಹಬ್ಬ ಶುರುವಾಗಿದೆ.  ಮನೆಕೆಲಸ ನಾವೇ ಮಾಡೋಣ ಎಂದು ಕರ್ಣ ಎಲ್ಲಾ ಕೆಲಸಗಳನ್ನೂ ತಂದೆಯ ಕೈಯಲ್ಲಿ ಮಾಡಿಸ್ತಿದ್ದಾನೆ. ಕೆಲಸ ಮುಗಿದ ಮೇಲೆ ಪಾತ್ರೆ ತೊಳೆಯುವಂತೆ ಹೇಳಿದ್ದಾನೆ. ಒಂದಾದ ಮೇಲೊಂದು ಕೆಲಸ ಮಾಡಿ ರಮೇಶ ಸುಸ್ತಾಗಿದ್ದಾನೆ. 

ಸದ್ಯ ಕರ್ಣನ ಟಾರ್ಚರ್​​ನಿಂದ ತಂದೆ ರಮೇಶ್ ವಿಲವಲ ಹಂತ ಒದ್ದಾಡ್ತಿದ್ದಾನೆ. ಮುಂದೆ ಕರ್ಣ ಏನ್​ ಮಾಡ್ತಾನೆ? ರಮೇಶ್​​ ಮುಖವಾಡ ಎಲ್ಲಾರ ಮುಂದೆ ಬಯಲಾಗುತ್ತಾ. ಮತ್ತ್ಯಾರ ಮುಖವಾಡವನ್ನ ಕರ್ಣ ಕಳಚುತ್ತಾನೆ? ಸೀರಿಯಲ್ ಮತ್ತ್ಯಾವ ತಿರುವು ಪಡೆಯುತ್ತೆ ಅನ್ನೋದು ನಿಜಕ್ಕೂ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ರಾಯ್ ಶೂಟ್ ಮಾಡ್ಕೊಂಡ್ರಾ? ಯಾರಾದ್ರೂ ಶೂಟ್ ಮಾಡಿದ್ರಾ? ಬಿಜೆಪಿಗೆ ಲಿಂಕ್ ಕೊಟ್ಟ ಪ್ರದೀಪ್ ಈಶ್ವರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiran raj, karna serial bhavya gowda Kiran Raj
Advertisment