/newsfirstlive-kannada/media/media_files/2026/02/28/karna-kannada-serial-3-2026-02-28-12-39-34.jpg)
ಕರ್ಣ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾನೆ. ಹೌದು ತಂದೆ ರಮೇಶ್ ​ಸಂಚಿನ ಚಕ್ರವ್ಯೂಹದಲ್ಲಿ ಸಿಲುಕಿ, ಮಾಡದ ತಪ್ಪಿಗೆ ಕರ್ಣ ಜೈಲು ಸೇರಿದ್ದಾನೆ.. ಇತ್ತ ಕರ್ಣನಿಗೆ ಎದುರಾದ ಸಮಸ್ಯೆಗೆ ಜೀ ಕನ್ನಡ ವಾಹಿನಿಯ ಸ್ತ್ರೀ ಶಕ್ತಿ ಒಂದಾಗಿದೆ. ಹಾಗಾದ್ರೆ ಮುಂದೆ ಕರ್ಣನ ಹೆಸರಿಗೆ ಅಂಟಿರೋ ಕಳಂಕ ದೂರವಾಗುತ್ತಾ? ಕರ್ಣನಿಗೆ ನ್ಯಾಯ ಸಿಗುತ್ತಾ?
ಕರ್ಣ ಈಗ ಮೊದಲಿನಂತಿಲ್ಲ. ಇಷ್ಟು ದಿನ ತಂದೆ ರಮೇಶ್‌ನ ಕುತಂತ್ರಗಳಿಗೆ ಸೈಲೆಂಟ್ ಆಗಿದ್ದ ಕರ್ಣ ಈಗ ತಿರುಗಿಬಿದ್ದಿದ್ದಾನೆ. ದಂಡಂ ದಶಗುಣಂ ಎಂದು ಅಪ್ಪನಿಗೆ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಮುಂದಾಗಿದ್ದಾನೆ. ಜೊತೆಗೆ ತನ್ನ ಚಾಣಾಕ್ಷತನದಿಂದ ಸಂಜಯ್ ಮಾಡಿದ್ದ ಪ್ರತಿಯೊಂದು ಮೋಸವನ್ನೂ ಸಾಕ್ಷಿ ಸಮೇತ ಹಿಡಿದು, ಸಂಜಯ್​ನನ್ನ ಬುಗುರಿಯಂತೆ ಆಟವಾಡಿಸ್ತಿದ್ದಾನೆ.. ಇನ್ನು ನಿಧಿ ಸರ್ಜನ್​ ಆಗಿ ವಸಿಷ್ಠ ಆಸ್ಪತ್ರೆಗೆ ಎಂಟ್ರಿ ಕೊಟ್ಟಿದ್ದಾಳೆ.
ಆದ್ರೆ ರಮೇಶ್, ಹಾಗೂ ಅತ್ತೆ ಮಾಡಿದ ಕುತಂತ್ರದಿಂದ ಕರ್ಣ ಜೈಲು ಸೇರಿದ್ದಾನೆ.. ಕರ್ಣ, ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಹೆರಿಗೆ ಮಾಡಿಸಿ, ಮೆಡಿಸನ್​ಗಳನ್ನ ಕೊಡಲು ಹೇಳಿದ್ದ.. ಆದ್ರೆ ಎಕ್ಸ್​​ಪೈರಿ ಡೇಟ್ ಮುಗಿದಿರುವ ಮೆಡಿಸನ್ ಕೊಟ್ಟ ಕಾರಣ ಬಾಣಂತಿಯರು ಮತ್ತು ಮಕ್ಕಳು ಸಾವನಪ್ಪಿದ್ದಾರೆ... ಈ ಅಪಾದನೆ ಕರ್ಣನ ಮೇಲೆ ಬಂದಿದೆ..
ಇದನ್ನೂ ಓದಿ: ನಿತ್ಯ ಕುಡಿದು ಗಲಾಟೆ ಮಾಡ್ತಿದ್ದ ಅಪ್ಪನ ಮುಗಿಸಿ ಠಾಣೆಗೆ ಬಂದ ಮಗ..!
/filters:format(webp)/newsfirstlive-kannada/media/media_files/2026/02/28/karna-kannada-serial-2-2026-02-28-12-39-50.jpg)
ಈ ವಿಷಯ ಗೊತ್ತಾಗ್ತಿದಂತೆ ಮೃತರ ಕುಟುಂಬಸ್ಥರು ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದಾರೆ.. ಕರ್ಣ ಎಷ್ಟೇ ಹೇಳಿದ್ರು ಯಾರೂ ಅವನ ಮಾತು ಕೇಳುತ್ತಿಲ್ಲ.. ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ ಎಷ್ಟೇ ಗೋಗರೆದರೂ ಪ್ರಯೋಜನವಾಗ್ತಿಲ್ಲ. ಗಲಾಟೆ ಹೆಚ್ಚಾಗ್ತಿದಂತೆ ಪೊಲೀಸರು ಆಸ್ಪತ್ರೆಗೆ ಬಂದು ಕರ್ಣನನ್ನ ಅರೆಸ್ಟ್​ ಮಾಡಿದ್ದಾರೆ... ಇತ್ತ ಕರ್ಣನಿಗೆ ಹೀಗಾಯ್ತು ಎಂದು ಅಜ್ಜಿ ಆಸ್ಪತ್ರೆ ಸೇರಿದ್ದಾರೆ.
ಇದೀಗ ನಿತ್ಯಾ ಹಾಗೂ ನಿಧಿ ಕರ್ಣನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಪಣ ತೊಟ್ಟಿದ್ದಾರೆ. ನಿತ್ಯಾ, ನಿಧಿ ಜೊತೆಗೆ ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನ ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿದೆ.. ಅಂದ್ರೆ ಅಮೃತಧಾರೆ ಧಾರಾವಾಹಿಯ ಮಲ್ಲಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಶ್ರಾವಣಿ, ಅಣ್ಣಯ್ಯ ಧಾರಾವಾಹಿ ರಾಣಿ, ಬ್ರಹ್ಮಗಂಟು ಧಾರಾವಾಹಿ ದೀಪಾ ಪೊಲೀಸ್ ಠಾಣೆಗೆ ಬಂದಿದ್ದಾರೆ.
/filters:format(webp)/newsfirstlive-kannada/media/media_files/2026/02/28/karna-kannada-serial-2026-02-28-12-40-06.jpg)
ಮುಂದೆ ರಮೇಶ್ ಮಾಡಿದ ಕುತಂತ್ರವನ್ನು ಕರ್ಣ ಹೇಗೆ ಬಯಲಿಗೆಳೆಯುತ್ತಾನೆ? ತನ್ನ ಮೇಲಿರುವ ಕಳಂಕವನ್ನು ಆತ ಹೇಗೆ ತೊಡೆದು ಹಾಕ್ತಾನೆ? ಸ್ತ್ರೀ ಶಕ್ತಿ ಯಾವ ರೀತಿ ಸಹಾಯ ಮಾಡ್ತಾರೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಾ ಅನ್ನೊದೇ ಸದ್ಯಕೀರೋ ಸಸ್ಪೆನ್ಸ್​.
ಇದನ್ನೂ ಓದಿ:ಹೋಳಿ ಹಬ್ಬದಂದೇ ‘ಚಂದ್ರಗ್ರಹಣ’ ನೆರಳು; ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us