/newsfirstlive-kannada/media/media_files/2025/10/12/kavita-gowda-2025-10-12-13-01-28.jpg)
ಲಕ್ಷ್ಮೀ ಬಾರಮ್ಮ ಧಾರಾವಾಹಿನ ವೀಕ್ಷಕರು ಒಂದಿಲ್ಲೊಂದು ಕಾರಣಕ್ಕೆ ಇವತ್ತಿಗೂ ನೆನಪಿಸಿಕೊಳ್ತಿರ್ತಾರೆ. ಚಿನ್ನು ಪಾತ್ರ 3 ಬಾರಿ ಬದಲಾದ್ರೂ ಪಾತ್ರದ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗ್ಲಿಲ್ಲ. ಅದ್ರಲ್ಲೂ ಕವಿತಾ ಗೌಡ ಇವತ್ತಿಗೂ ಚಿನ್ನು, ಲಚ್ಚಿ ಅಂತಲೇ ಕರ್ನಾಟದಕ ಮನೆಮಗಳಾಗಿದ್ದಾರೆ.
/filters:format(webp)/newsfirstlive-kannada/media/media_files/2025/10/12/kavita-gowda-2-2025-10-12-13-01-57.jpg)
ಹಲವು ಧಾರಾವಾಹಿಗಳಿಗೆ ಚಿನ್ನು-ಗೊಂಬೆಯನ್ನ ಗೆಸ್ಟ್ ಆಗಿ ಕರೆಸುತ್ತಾರೆ. ಅವ್ರ ಎಂಟ್ರಿ ಇದ್ರೇ ಆ ಸಂಚಿಕೆ ಪಕ್ಕಾ ಸೂಪರ್​ ಹಿಟ್​ ಫಿಕ್ಸ್. ಅಷ್ಟರ ಮಟ್ಟಿಗೆ ಕಲರ್ಸ್ ವಾಹಿನಿ ಹಾಗೂ ಕಿರುತೆರೆಯನ್ನ ಆವರಸಿಕೊಂಡಿದೆ ಲಕ್ಷ್ಮೀ ಬಾರಮ್ಮ. ಪುಣ್ಯವತಿಗೆ ಗೆಸ್ಟ್ ಆಗಿ ಬಂದಿದ್ದ ಚಿನ್ನು ಮತ್ತೊಮ್ಮೆ ಕಾಣಿಸಿಕೊಳ್ತಿದ್ದಾರೆ.
ನಂದಗೋಕುಲ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕವಿತಾ ಕಾಣಿಸಿಕೊಂಡಿದ್ದಾರೆ. ವಲ್ಲಭ, ಗಿರಿಜಾ ಹಾಗೂ ಮೀನಾ ದೇವಸ್ಥಾನಕ್ಕೆ ತೇರಳಿರ್ತಾರೆ. ಅಲ್ಲಿ ಗಿರಿಜಾಗೆ ಸರ್​ಪ್ರೈಸ್​ ಕೊಡ್ತಾಳೆ ಚಿನ್ನು. ಈ ಸಮ್ಮೀಲನದ ಸಂಚಿಕೆ ಕಳೆದ ವಾರ ಪ್ರಸಾರವಾಗಿದೆ.
/filters:format(webp)/newsfirstlive-kannada/media/media_files/2025/10/12/kavita-gowda-1-2025-10-12-13-03-07.jpg)
ಒಟ್ನಲ್ಲಿ ತಾಯಿ ಆದ ನಂತರ ಕವಿತಾ ಗೌಡ ಮತ್ತೋಮ್ಮೆ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳಿ ಖುಷಿ ನೀಡಿದೆ. ಮತ್ತೊಂದು ಉತ್ತಮ ಧಾರಾವಾಹಿಗೆ ಬಣ್ಣ ಹಚ್ಚಿ, ತೆರೆಮೇಲೆ ನೋಡೋದಕ್ಕೆ ಕಾಯ್ತಿದ್ದೀವಿ ಎಂದು ನೆಚ್ಚಿನ ನಟಿಗೆ ಅಭಿಮಾನ ತೋರಿದ್ದಾರೆ ಫ್ಯಾನ್ಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us