/newsfirstlive-kannada/media/media_files/2025/10/12/kiccha-sudeep-3-2025-10-12-07-29-39.jpg)
ಎಲ್ಲಾ ಅಡೆತಡೆ, ಸವಾಲುಗಳನ್ನ ಮೀರಿ ಬಿಗ್‌ಬಾಸ್ ಶೋ ಮೊನ್ನೆಯಿಂದಲೇ ಆರಂಭಗೊಂಡಿದೆ. ಇವತ್ತು ವಾರದ ಕತೆ ಕಿಚ್ಚನ ಜೊತೆ ವೇದಿಕೆಯಲ್ಲಿ ವಿಷಯ ಪ್ರಸ್ತಾಪ ಆಗಿದೆ. ಶೋಗೆ ಎದುರಾದ ಕಂಟಕದ ಬಗ್ಗೆ ಕಿಚ್ಚ ಮಾತ್ನಾಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ಮತ್ತೊಮ್ಮೆ ಥಾಂಕ್ಯೂ ಹೇಳಿದ್ದಾರೆ.
ಕಿಚ್ಚನ ಮಾತು
ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಎರಡು ವಾರಗಳಾಗಿವೆ.. ಕೋವಿಡ್ ಹೊರತಾಗಿ ಇದೇ ಮೊದಲ ಬಾರಿಗೆ ಬಿಗ್​​ಬಾಸ್ ಬಿಗ್​​​ ಕಂಟಕ ಎದುರಾಗಿ ಶೋ ಸ್ಟಾಪ್​​​ ಆಗಿತ್ತು. ಬಿಗ್​​ ಮನೆಯ ಸ್ಪರ್ಧಿಗಳು ರೆಸಾರ್ಟ್​​ಗೆ ಶಿಫ್ಟ್​​ ಬಳಿಕ ಸುದೀಪ್ ಮಧ್ಯಸ್ಥಿಕೆಯಲ್ಲಿ ಕವಿದಿದ್ದ ಗ್ರಹಣ ಮೋಕ್ಷ ಕಂಡಿದೆ. ಆ ಘಟನೆಯ ಬಳಿಕ ಮೊದಲ ಬಾರಿಗೆ ಸುದೀಪ್, ವಾರದ ಪಂಚಾಯಿತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಬಿಗ್​​ಬಾಸ್ ಕನ್ನಡಿಗರ ಹೆಮ್ಮೆಯ ಶೋ, 12 ಸೀಸನ್​​ಗಳಿಂದಲೂ ಇದನ್ನು ಕನ್ನಡಿಗರು ಬೆಳೆಸಿದ್ದಾರೆ. ಇದನ್ನು ಹಾಳು ಮಾಡುವುದು ಸುಲಭದ ಕೆಲಸವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ನಾವು ಅಂದರೆ ಬಿಗ್​​ಬಾಸ್ ಮುನ್ನುಗ್ಗುತ್ತಲೇ ಇರುತ್ತೆ ಅಂತ ಹೇಳ್ಕೊಂಡ್ರು. ಇತ್ತೀಚೆಗೆ ಎದುರಾದ ಸಮಸ್ಯೆಯ ಸಮಯದಲ್ಲಿ ಬಿಗ್​​ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಡಿಸಿಎಂ ಡಿಕೆಶಿ ಮತ್ತು ನಲಪಾಡ್​​​ ಸಹಾಯಕ್ಕೆ ಕಿಚ್ಚನ ಧನ್ಯವಾದ
ಕೆಲ ದಿನಗಳ ಹಿಂದೆ ಆದ ಸಮಸ್ಯೆಗೂ ಬಿಗ್​​ಬಾಸ್​​ಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಬಿಗ್​​ಬಾಸ್ ಎಂಬುದೇ ಒಂದು ಅಡ್ರೆಸ್ ಆಗಿಬಿಟ್ಟಿರುವಾಗ ಕೆಲವರು ಆ ಅಡ್ರೆಸ್ ಅನ್ನು ಕ್ಲೋಸ್ ಮಾಡುವ ಪ್ರಯತ್ನ ಮಾಡಿದ್ರು. ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಬಹುದು ಎಂದ್ರು.
ಬಿಗ್​​​ ಬಾಸ್​​​ಗೆ ಪ್ರಾಬ್ಲಂ ಆದಾಗ.. ನಡೆದ ವಿಚಾರಕ್ಕೂ ‘ಬಿಗ್ ಬಾಸ್’ ಶೋಗೂ, ಕಲರ್ಸ್‌ಗೂ, ನಮಗೂ ಯಾವುದೇ ರೀತಿ ಸಂಬಂಧ ಇಲ್ಲ. ನಮ್ಮಿಂದ ಸಮಸ್ಯೆ ಆಗಿಲ್ಲ. ನಮ್ಮಿಂದ ನಿಯಮಗಳು ಉಲ್ಲಂಘನೆ ಆಗಿಲ್ಲ. ನಾವು ಯಾವ ಜಾಗದಲ್ಲಿ ನಡೆಸುತ್ತಿದ್ದೇವೋ. ಅವರಿಗೆ ಆಗಿದ್ದು. ಖಾಲಿ ಜಾಗಕ್ಕೆ ಬೆಲೆ ಇರಲ್ಲ. ಅದಕ್ಕೊಂದು ಅಡ್ರೆಸ್ ಬೇಕು. ಆ ಅಡ್ರೆಸ್ ‘ಬಿಗ್ ಬಾಸ್’ ಆಯ್ತು. ಬಿಗ್ ಬಾಸ್ ಅನ್ನೋ ಹೆಸರು ಎಷ್ಟು ಕೇಳಿಬರ್ತಾಯಿತ್ತು ಅಂದ್ರೆ. ತೊಂದರೆ ಇಲ್ಲಿಂದ ಪ್ರಾರಂಭ ಆಯ್ತು ಅಂತ. ಆದರೆ ತಪ್ಪೇನಿಲ್ಲ…ಒಂದು ಶೋ 12ನೇ ಸೀಸನ್‌ನಲ್ಲಿ ಕಾರ್ಯಕ್ರಮ ಆಗಿ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ಹಾಕಿದೆ, ಕೆಲಸ ಕೊಟ್ಟಿದೆ, ಎಷ್ಟೋ ಜನರಿಗೆ ದಾರಿದೀಪ ಆಗಿದೆ ಅಂದಾಗ ಖಂಡಿತವಾಗಿಯೂ ಎಷ್ಟೋ ಜನರಿಗೆ ಕಣ್ಣು ಕುಕ್ಕಿರುತ್ತೆ. ಅದೂ ತಪ್ಪಲ್ಲ.
ಇದನ್ನೂ ಓದಿ: ಸೀರಿಯಲ್​ನಲ್ಲೂ ಸಿಂಪಲ್​, ರಿಯಲ್​ನಲ್ಲೂ ಸರಳ ಸುಂದರಿ..
ನಮಗೆ ಸ್ಪಂದಿಸಿದ ನಮ್ಮ ಡಿಕೆ ಸಾಹೇಬ್ರಿಗೆ ಹಾಗೂ ನಲಪಾಡ್‌ಗೆ ಧನ್ಯವಾದ. ಬಿಗ್ ಬಾಸ್‌ದು ಏನೂ ತಪ್ಪಿಲ್ಲ, ಇದು ಕನ್ನಡ ಕಾರ್ಯಕ್ರಮ, ಇದು ನಡೆಯಬೇಕು ಅಂತ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಅಂತ ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಹೇಳಿದರು.
ಒಟ್ಟಾರೆ, ಜಾಲಿವುಡ್ ಸ್ಟುಡಿಯೋಕ್ಕೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನೊಟಿಸ್ ನೀಡಿದ್ದರು. ನೊಟೀಸ್​​ಗೆ ಸ್ಪಂದಿಸದ ಕಾರಣಕ್ಕೆ ಜಿಲ್ಲಾಡಳಿತ ಬೀಗ ಜಡಿದಿತ್ತು. ಬಳಿಕ ಸುದೀಪ್ ಮನವಿಗೆ ಸ್ಪಂದನೆ ಸಿಕ್ಕು, ವಾರದ ಪಂಚಾಯ್ತಿಯ ಮೊದಲ ದಿನ ಮುಗಿದಿದೆ.
ಇದನ್ನೂ ಓದಿ: ನಮ್ರತಾಗೆ ಕರ್ಣ-ನಿಧಿ ಫ್ಯಾನ್ಸ್ ಕಾಟ.. ಕೆಟ್ಟ ಕೆಟ್ಟ ಕಮೆಂಟ್ ವಿರುದ್ಧ ಸಿಡಿದೆದ್ದ ನಿತ್ಯಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ