/newsfirstlive-kannada/media/media_files/2025/11/20/bigg-boss-2-2025-11-20-09-50-41.jpg)
ಬಿಗ್‌ಬಾಸ್ ಮನೆಯಲ್ಲಿ ಲಕ್‌ನಿಂದ ಹಲವರು ಉಳಿದುಕೊಂಡಿದ್ದಾರೆ ಅನ್ನೋ ವಾದವನ್ನ ಹಲವು ಸ್ಪರ್ಧಿಗಳು ಮಾಡಿದ್ದಾರೆ. ಬಿಗ್‌ಬಾಸ್ ನೋಡೋ ವೀಕ್ಷಕರು ಇದೇ ಅಭಿಪ್ರಾಯವಿದೆ. ಈ ಬಾರಿ ಲಕ್‌ನಿಂದ ಉಳಿದುಕೊಂಡವರೆಲ್ಲಾ, ನಾಮಿನೇಟ್ ಆಗಿದ್ದಾರೆ. ಈ ಬಾರಿ ಉಳಿದುಕೊಳ್ಳಬೇಕಂದ್ರೆ ಲಕ್ ವರ್ಕ್ ಆಗಲ್ಲ, ಬ್ಯಾಡ್ ಲಕ್ ಅನ್ನಂಗಿಲ್ಲ ಕೆಪಾಸಿಟಿ ಅಷ್ಟೇ ಮ್ಯಾಟರ್ ಆಗಲಿದೆ.
ಈ ವೀಕ್ ನಾಮಿನೇಟೆಡ್ ಆಗಿರೋ ಸ್ಪರ್ಧಿಗಳು ಸಾಲು ನೋಡಿದ್ರೆ ಸಖತ್ ಮಜಾ ಇದೆ ಅನ್ನಿಸ್ತಿದೆ. ಹಲವು ವಾರಗಳು ನಾಮಿನೇಷನ್ ಅನ್ನೋ ಚಕ್ರವ್ಯೂಹದಿಂದ ಹೇಗೋ ಪಾರಾಗುತ್ತಿದ್ದವರು. ಈ ವಾರ ಪಾರಾಗಲು ಸಾಧ್ಯವಾಗಲಿಲ್ಲ.
/filters:format(webp)/newsfirstlive-kannada/media/media_files/2025/11/12/biggboss_contestant_malu-bbk12-2025-11-12-00-39-21.jpg)
ಭಾನುವಾರದ ಎಸ್ ಆರ್ ನೋ ರೌಂಡ್‌ನಲ್ಲಿ ಅಭಿ ಬಗ್ಗೆ ಇಂತಹದೊಂದು ಸ್ಟೇಟ್‌ಮೆಂಟ್ ಬಂದಿತ್ತು. ಅದಕ್ಕೆ ಅಭಿ ಕೂಡ ಅನ್ಸರ್ ಮಾಡಿದ್ರು. ನಾನು ಉಳಿದುಕೊಂಡಿರೋದು, ಲಕ್‌ನಿಂದಲ್ಲ. ಪರಿಶ್ರಮದಿಂದ ಅಂತಾ. ಎಷ್ಟು ಜನಕ್ಕೆ ಈ ವಾದ ಸರಿ ಅನಿಸಿತೋ ಗೊತ್ತಿಲ್ಲ. ಬಟ್ ಈ ವಾರ ಅಂತೂ ಅಭಿ ಖಂಡಿತವಾಗ್ಲೂ ಡೇಂಜರ್ ಜೋನ್‌ನಲ್ಲಿದ್ದಾರೆ ಅಂತಾ ಹೇಳ್ಬಹುದು.
ಲಕ್‌ನಿಂದ ಉಳಿದುಕೊಂಡಿದ್ದಾರೆ ಅನ್ನೋ ಆರೋಪ ಎದುರಿಸ್ತಿರೋ ಇನ್ನೊಬ್ರು ಕಂಟೆಸ್ಟೆಂಟ್ ಸ್ಪಂದನಾ. ಇದು ಹಲವು ವೀಕ್ಷಕರ ಅಭಿಪ್ರಾಯವೂ ಹೌದು. ಮನೆಯಲ್ಲಿ ಜಾಹ್ನವಿ ಈ ಬಗ್ಗೆ ಗಂಭೀರವಾಗಿ ಆರೋಪ ಮಾಡಿ, ವೀಕೆಂಡ್‌ನಲ್ಲಿ ದೊಡ್ಡ ಸುದ್ದಿಯಾಗಿತ್ತು. ವಾರ, ಸ್ಪಂದನಾ ಉಳಿದುಕೊಳ್ತಾರಾ? ಅವರಿಗೆ ಲಕ್ ಕೈ ಹಿಡಿಯುತ್ತೋ? ಪರ್ಫಾಮೆನ್ಸ್ ಕೈ ಹಿಡಿಯುತ್ತೋ ? ಕಾದು ನೋಡ್ಬೇಕು?
ಇದನ್ನೂ ಓದಿ:ವಿಶ್ವದಲ್ಲಿ ಹೊಸ ಸಂಚಲನ.. ಮನುಷ್ಯರು 150 ವರ್ಷ ಬದುಕುವ ಮಾತ್ರೆ ಅಭಿವೃದ್ಧಿಪಡಿಸಿದ ಚೀನಾ..!
/filters:format(webp)/newsfirstlive-kannada/media/media_files/2025/11/02/spandana_bbk-2025-11-02-14-10-53.jpg)
ಮಾಳು ವಿಚಾರಕ್ಕೆ ಬಂದ್ರೆ ತುಂಬಾ ನೆಗೆಟಿವ್ ಪಾಯಿಂಟ್ಸ್‌ನ ವೀಕ್ಷಕರು ಹೊರ ಹಾಕಿದ್ದಾರೆ. ಈ ವಾರ ಮಾಳುವಿಗೆ ಈಸಿ ಅಂತೂ ಅಲ್ಲ. ಅವ್ರನ್ನ ಕಾಪಾಡಬೇಕಾಗಿರೋದು ವೀಕ್ಷಕರು ಮಾತ್ರ. ಅವರು ವೋಟ್ ಹಾಕಿದ್ರೆ ಬಚಾವ್ ಆಗ್ತಾರೆ. ಇಲ್ಲ... ಚಾನ್ಸಸ್ ಕಡಿಮೆ ಇದೆ.
ಅದೇ ರೀತಿ ಸೂರಜ್ ಕೂಡ ಈ ಲಿಸ್ಟ್‌ನಲ್ಲಿದ್ದಾರೆ ಅನ್ನೋದು ವೀಕ್ಷಕರ ಅಭಿಪ್ರಾಯ. ವೈಲ್ಡ್ ಕಾರ್ಡ್‌ನಿಂದ ಎಂಟ್ರಿಯಾದ ಮೊದಲ ವಾರವಷ್ಟೇ ಸೂರಜ್ ಸದ್ದು ಮಾಡಿದ್ರು. ಆ ನಂತರ ಡಲ್ ಆದ್ರು ಅನ್ನೋ ಓಪಿನಿಯನ್ ಇದೆ. ರಾಶಿಕಾ, ರಿಶಾ ಗೌಡ, ಕೂಡ ಸೇಫ್ ಜ್ಹೋನ್‌ನಲ್ಲಿ ಇಲ್ಲ ಅಂತಾನೇ ಹೇಳ್ಬಹುದು. ಹಾಗಂತಾ, ಉಳಿದವರು ಪಕ್ಕಾ ಸೇಫಾ ಅಂದ್ರೆ.. ಖಂಡಿತಾ ಇಲ್ಲ. ಇದು ಬಿಗ್‌ಬಾಸ್ ಆಟ, ಏನ್ ಬೇಕಾದ್ರೂ ಆಗ್ಬುಹುದು.
ಇನ್ನಷ್ಟು ಬಿಗ್​ಬಾಸ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us